• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ನಡುವೆ ಮಳೆ: ಶಿವಮೊಗ್ಗ ಜನಜೀವನ ಅಸ್ತವ್ಯಸ್ತ

|
Google Oneindia Kannada News

ಶಿವಮೊಗ್ಗ, ಜುಲೈ 7: ಶಿವಮೊಗ್ಗ ಜಿಲ್ಲೆಯ ಜನರ ಮೇಲೆ ಕೊರೊನಾ ಅಟ್ಟಹಾಸದಿಂದ ಹೆಚ್ಚಾಗಿದೆ. ಒಂದು ಕಡೆ ಕೊರೊನಾ ಮತ್ತೊಂದು ಕಡೆ ಮಳೆ ಜನರಿಗೆ ತೊಂದರೆ ನೀಡುತ್ತಿದೆ.

ನಗರ ಪ್ರದೇಶ ಸೇರಿಕೊಂಡಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಸೀಲ್ ಡೋನ್ ಮಾಡಲಾಗಿದೆ. ಅದರಲ್ಲೂ ಇಂದು ಸಾಗರದಲ್ಲಿ ಅರ್ಧಕ್ಕೆ ಅರ್ಧ ಊರೇ ಸೀಲ್‌ ಡೌನ್ ಮಾಡಲಾಗಿದೆ. ಹೆಚ್ಚಿದ ಸೋಂಕಿತರಿಂದ ಮೆಸ್ಕಾಂ ಹಾಗೂ ಸ್ಥಳೀಯರಿಗೆ ಅತಿ ಹೆಚ್ಚು ಸೋಂಕು ತಗುಲಿದ ಹಿನ್ನೆಲೆ ಅರ್ಧ ಸಾಗರವನ್ನೇ ಸೀಲ್ ಡೌನ್ ಮಾಡಲಾಗಿದೆ.

ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ: 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ: 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಇನ್ನು ಮುಂದೆ ಸಾಗರದ ಜನತೆ ಬಹಳ ಎಚ್ಚರಿಕೆಯಿಂದ ಇರುವಂತಹ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸೀಲ್ ಡೌನ್ ಮಾಡಿದ್ದು, ಸುರಕ್ಷತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೊರೊನಾದಿಂದ ಸಾವಿನ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಜಿಲ್ಲಾಡಳಿತ ಹಾಗು ಆರೋಗ್ಯ ಇಲಾಖೆ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನಪಟ್ಟರೂ ಸಾಧ್ಯವಾಗುತ್ತಿಲ್ಲ.

ಮತ್ತೊಂದು ಕಡೆ ಮಳೆ ಕೂಡ ಹೆಚ್ಚಾಗಿದೆ. ಬೆಳಗ್ಗೆ ರಾತ್ರಿ ಎನ್ನದೇ ಮಳೆ ಸುರಿಯುತ್ತಿದೆ. ನಾಲ್ಕೈದು ದಿನದಿಂದ ಎಡಬಿಡದೆ ಭಾರಿ ಮಳೆ ಬರುತ್ತಿದೆ. ಮಳೆಯ ಹೊಡೆತಕ್ಕೆ ಜನಜೀವನ ಅಸ್ತವ್ಯಸ್ತವಾಗಿವೆ. ಹಳ್ಳಕೊಳ್ಳಗಳೆಲ್ಲ ತುಂಬಿ ಹರಿಯುವ ಹಂತದಲ್ಲಿದೆ. ಮಳೆಯ ಅಬ್ಬರಕ್ಕೆ ಮನೆಯಿಂದ ಹೊರ ಬಾರದೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.

English summary
Shivamogga District People Facing Issue From Both Coronavirus and Heavy Rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X