ಆಪರೇಶನ್, ಅಬಾರ್ಶನ್ ಎಲ್ಲಾ ಮಾಡೋದು ಸಿದ್ದರಾಮಯ್ಯನವರೇ: ಈಶ್ವರಪ್ಪ
ಶಿವಮೊಗ್ಗ, ಮೇ 13: ಈ ಸರ್ಕಾರಕ್ಕೆ ಆಪರೇಷನ್ ಮತ್ತು ಅಬಾರ್ಶನ್ ಎರಡನ್ನೂ ಸಿದ್ದರಾಮಯ್ಯ ಅವರೇ ಮಾಡುವುದು ಎಂದು ಶಿವಮೊಗ್ಗ ಬಿಜೆಪಿ ಶಾಸಕ ಕೆ ಎಸ್ ಈಶ್ವರಪ್ಪ ಟ್ವೀಟ್ ಮಾಡಿದ್ದಾರೆ.
"ದುಡ್ಡುಕೊಟ್ಟು ಶಾಸಕರನ್ನು ಖರೀದಿಸಿ, ಸರ್ಕಾರ ಬೀಳಿಸೋದು ವಿರೋಧ ಪಕ್ಷದ ಕೆಲಸವಾ? ಯಡಿಯೂರಪ್ಪ ಒಂದು ವರ್ಷದಿಂದ ಹೇಳುತ್ತಲೇ ಇದ್ದಾರೆ. ಶಾಸಕರನ್ನು ಖರೀದಿಸಲು ಇವರ ಬಳಿ ದುಡ್ಡು ಎಲ್ಲಿಂದ ಬರುತ್ತದೆ? ನರೇಂದ್ರ ಮೋದಿ ಕೊಡ್ತಾರಾ ಅಥವಾ ಅಮಿತ್ ಶಾ ಕೊಡ್ತಾರಾ..?" ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಮಾತನಾಡುತ್ತಿದ್ದರು.
"ಯಾರೂ ಪ್ರಯತ್ನ ಮಾಡೋದೇ ಬೇಡ, ಈ ಸರ್ಕಾರಕ್ಕೆ ಆಪರೇಷನ್ ಮತ್ತು ಅಬಾರ್ಶನ್ ಎರಡು ನೀವೇ ಮಾಡೋದು ಸಿದ್ದರಾಮಯ್ಯನವರೇ, ಅದು ಗೊತ್ತಿರೋ ಸತ್ಯವೇ" ಎಂದು ಈಶ್ವರಪ್ಪ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಈಶ್ವರಪ್ಪ, ಸಿದ್ದರಾಮಯ್ಯ ಅವರು ತಾವೇ ಮುಖ್ಯಮಂತ್ರಿ ಎಂದು ಓಡಾಡುತ್ತಿದ್ದಾರೆ. ಇದೊಂದು ರೀತಿ ಮದುಕಿ ಯೌವನದಲ್ಲಿನ ತನ್ನ ತುರುಬನ್ನು ನೆನಪಿಸಿಕೊಂಡು ಸಂಭ್ರಮಿಸುವ ಹಾಗಿದೆ ಎಂದು ಲೇವಡಿ ಮಾಡಿದ್ದರು.












Click it and Unblock the Notifications