ಶಿವಮೊಗ್ಗ: ಆಯುಧ ಪರವಾನಗಿ ನವೀಕರಿಸಿಕೊಳ್ಳಲು ಸೂಚನೆ
ಶಿವಮೊಗ್ಗ, ನವೆಂಬರ್ 25: ಆಯುಧ ಪರವಾನಗಿಗಳ ಅವಧಿ ಪೂರ್ಣಗೊಳ್ಳುವ ಪ್ರತಿಯೊಂದು ಪರವಾನಗಿಗಳನ್ನು ಪರವಾನಿಗೆ ಪ್ರಾಧಿಕಾರವು ನವೀಕರಣ ಮಾಡಬೇಕಾಗಿರುವುದರಿಂದ ಆಯುಧಗಳ ನಿಯಮಗಳನ್ವಯ ಶಿವಮೊಗ್ಗ ಜಿಲ್ಲೆಯ ಪರವಾನಗಿದಾರರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ನವೀಕರಣಕ್ಕಾಗಿ ಒಂದು ತಿಂಗಳ ಮುಂಚಿತವಾಗಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚಿಸಿದ್ದಾರೆ.
ಪರವಾನಗಿಗೆ ಒಳಪಟ್ಟ ಆಯುಧವು ಪರವಾನಗಿದಾರರ ಬಳಿಯಲ್ಲಿಯೇ ಇರುತ್ತದೆಂದು ಖಚಿತಪಡಿಸಿಕೊಳ್ಳಲು ಹಾಗೂ ಸಮಾಜಘಾತುಕ ವ್ಯಕ್ತಿಗಳ ವಶವಾಗಬಾರದೆಂಬ ಉದ್ದೇಶದಿಂದ ಆಯುಧ ಪರವಾನಗಿದಾರರು ಹೊಂದಿರುವ ಆಯುಧಗಳನ್ನು ಪರಿಶೀಲನೆ ಮಾಡಿ, ವಾಸಸ್ಥಳದಲ್ಲಿ ನೆಲೆಸಿರುವ ವಿವರಗಳೊಂದಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ ವರದಿ ಪಡೆಯಬೇಕಾಗಿರುತ್ತದೆ.
ಆದ್ದರಿಂದ ಡಿಸೆಂಬರ್ 31 ರಂದು ಆಯುಧ ಪರವಾನಗಿಗಳ ಅವಧಿ ಪೂರ್ಣಗೊಳ್ಳುವ ಶಿವಮೊಗ್ಗ ಜಿಲ್ಲೆಯ ಪರವಾನಗಿದಾರರು ಒಂದು ತಿಂಗಳ ಮುಂಚಿತವಾಗಿ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ ಹಾಗೂ ಸಂಬಂಧಿಸಿದ ದಾಖಲೆಗಳೊಂದಿಗೆ ಪರವಾನಗಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು.

ತಪ್ಪಿದಲ್ಲಿ ಅಂತಹ ಪರವಾನಗಿಯನ್ನು ಅಮಾನತ್ತುಪಡಿಸುವ ಬಗ್ಗೆ ಕ್ರಮ ಜರುಗಿಸಲಾಗುವುದೆಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications