ಸಕ್ರೇಬೈಲು ಆನೆ ಬಿಡಾರದ ಪ್ರೀತಿಯ ನಾಗಣ್ಣ ಸಾವು!

ಶಿವಮೊಗ್ಗ, ಆಗಸ್ಟ್ 24: ಕಾಡಿನಿಂದ ಶಿವಮೊಗ್ಗದ ಸಕ್ರೇಬೈಲಿಗೆ ತರಲಾಗಿದ್ದ ಆನೆಯೊಂದು ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಸಾವನ್ನಪ್ಪಿದೆ.

ಒಂದು ವರ್ಷದ ಹಿಂದೆ ಭದ್ರಾವತಿಯ ಉಬ್ರಾಣಿ ಎಂಬ ಅರಣ್ಯದಲ್ಲಿ ಸಿಕ್ಕಿಬಿದ್ದಿದ್ದ ಕಾಡಾನೆಯನ್ನು ಸಕ್ರೇಬೈಲು ಆನೆ ಬಿಡಾರಕ್ಕೆ ಕರೆತರಲಾಗಿತ್ತು. ಈ ‌ಆನೆಗೆ ನಾಗಣ್ಣ ಎಂದು ಹೆಸರಿಡಲಾಗಿತ್ತು. ಆದರೆ ತರಬೇತಿ ನೀಡುವಾಗ ಸಕ್ರೇಬೈಲ್ ನಲ್ಲಿದ್ದ ಅಭಿಮನ್ಯು ಮತ್ತು ಕಾಡಾನೆ ನಾಗಣ್ಣನ ನಡುವೆ ಜಗಳ ನಡೆದ ಪರಿಣಾಮ ಆನೆ ಗಾಯಗೊಂಡಿತ್ತು. ಅದಕ್ಕೆ ಚಿಕಿತ್ಸೆಯನ್ನೂ ನೀಡಲಾಗಿತ್ತು.

Naganna Elephant Died In Sakrebail Elephant Camp

ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಆನೆ ಸಾವನ್ನಪ್ಪಿದೆ. ಈ ಹಿಂದೆ ನಾಗಣ್ಣ ಆನೆಗೆ ಚಿತ್ರರಂಗದಲ್ಲಿ ಕೂಡ ಅವಕಾಶ ಸಿಕ್ಕಿತ್ತು. ಕೆಲವು ಸಿನಿಮಾಗಳಲ್ಲೂ ಆನೆ ನಟಿಸಿದ್ದು, ಬಿಡಾರದಲ್ಲಿ ಸಿಬ್ಬಂದಿ ಹಾಗೂ ಮಾವುತರ ಪ್ರೀತಿಪಾತ್ರವಾಗಿತ್ತು.

ಸಾವಿನ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ವೈದ್ಯಕೀಯ ಪರೀಕ್ಷೆಯ ನಂತರ ಕಾರಣ ತಿಳಿದು ಬರಲಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+