ಹರ್ಷ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ ರೇಣುಕಾಚಾರ್ಯ

ಶಿವಮೊಗ್ಗ, ಫೆಬ್ರವರಿ 20; ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದರು.

ಸೋಮವಾರ ಎಂ. ಪಿ. ರೇಣುಕಾಚಾರ್ಯ ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. "ಬಜರಂಗದಳದ ಯುವ ಕಾರ್ಯಕರ್ತ ಹರ್ಷರನ್ನು ಕಳೆದುಕೊಂಡಿರುವುದು ನನ್ನ ಮನೆಯ ಮಗನನ್ನು ಕಳೆದುಕೊಂಡಷ್ಟೇ ದುಃಖವಾಗಿದೆ" ಎಂದು ಹೇಳಿದ್ದಾರೆ.

"ಹರ್ಷ ಕುಟುಂಬದ ಜೊತೆ ನಾನು ಸದಾ ಇರುತ್ತೇನೆ. ಈ ಸಂದರ್ಭದಲ್ಲಿ ಹರ್ಷ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ 2,00,000 ರೂ. ನೀಡುತ್ತಿದ್ದೇನೆ. ಹರ್ಷ ಕುಟುಂಬದ ಜೊತೆ ಸಮಸ್ತ ಹಿಂದೂ ಬಂಧುಗಳು ಇದ್ದೇವೆ" ಎಂದು ಹೇಳಿದ್ದಾರೆ.

Bajrang Dal activist Harsha

"ಕೆಲವು ದುಷ್ಕರ್ಮಿಗಳು ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದ್ದು, ಹಿಂದೂ ಯುವಕರ ಪ್ರತಿ ರಕ್ತದ ಕಣಗಳನ್ನು ವ್ಯರ್ಥವಾಗಲು ಬಿಡುವುದಿಲ್ಲ. ಹಿಂದೂ ಯುವಕರ ರಕ್ಷಣೆಗೆ ನಮ್ಮ ಬಿಜೆಪಿ ಸರ್ಕಾರ ಸದಾ ಬದ್ಧವಾಗಿರುತ್ತದೆ" ಎಂದು ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಶಾಸಕ, ಮಾಜಿ ಸಚಿವ ಅರವಿಂದ ಲಿಂಬಾವಳಿ ಸಹ ಹರ್ಷ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡಿದ್ದರು. ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಹರ್ಷ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಭಾನುವಾರ ಹತ್ಯೆಯಾದ ಹರ್ಷ ಅಂತ್ಯಕ್ರಿಯೆ ವಿದ್ಯಾನಗರದಲ್ಲಿರುವ ರೋಟರಿ ಚಿತಾಗಾರದಲ್ಲಿ ಸೋಮವಾರ ಸಂಜೆ ನಡೆಯಿತು. ಹರ್ಷ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಮತ್ತೆ ಬಿ. ಎಚ್. ರಸ್ತೆಯಲ್ಲಿ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆದಿದೆ.

ಹರ್ಷ ಹತ್ಯೆ, ಬಳಿಕ ನಡೆದ ಗಲಭೆ ಪ್ರಕರಣದ ನಂತರ ಶಿವಮೊಗ್ಗ ನಗರ ಬೂದಿ ಮುಚ್ಚಿದ ಕೆಂಡದಂತಿದೆ. ನಗರದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದ್ದು, ಬುಧವಾರ ಮುಂಜಾನೆ 6 ಗಂಟೆಯ ತನಕ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಸಹಾಯ ಮಾಡಲು ಮನವಿ; ಬಜರಂಗದಳದ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ನೆರವಾಗೋಣ ಎಂದು ಬಿಜೆಪಿ ನಾಯಕರು ಟ್ವೀಟ್ ಮಾಡುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಟ್ವೀಟ್ ಮಾಡಿದ್ದು, ಬನ್ನಿ ನೊಂದ ಕುಟುಂಬಕ್ಕೆ ಆಸರೆಯಾಗೋಣ ಎಂದು ಕರೆ ನೀಡಿದ್ದಾರೆ.

ಆತ್ಮೀಯ ಹಿಂದೂ ಬಾಂಧವರೇ ಮತಾಂಧರ ದುಷ್ಕೃತ್ಯಕ್ಕೆ ನಮ್ಮ ಹಿಂದೂ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ. ಹರ್ಷ ನಮ್ಮ ಮನೆಯ ಹುಡುಗ, ನಮ್ಮ ಕುಟುಂಬದ ಒಬ್ಬ ಸದಸ್ಯ. ಹರ್ಷನ ಕುಟುಂಬದ ಜೊತೆ ನಿಲ್ಲುವುದು ನಮ್ಮ ನಿಮ್ಮೆಲ್ಲರ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ನಾವೆಲ್ಲರೂ ಹರ್ಷ ಅವರ ತಾಯಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡೋಣ ಹಾಗೂ ಅವರ ಕುಟುಂಬದ ಜೊತೆ ಅವರ ನೋವಿನಲ್ಲಿ ನಿಲ್ಲೋಣ ಎಂದು ಟ್ವೀಟ್‌ ಮಾಡಿದ್ದು, ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದು ಮಾಡಿದ್ದಾರೆ.

ಇಬ್ಬರು ಆರೋಪಿಗಳ ಬಂಧನ; ಇನ್ನು ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಬುದ್ಧಾ ನಗರದ 30 ವರ್ಷದ ಖಾಸಿಫ್‌, ಜೆಪಿ ನಗರದ 20 ವರ್ಷದ ಸೈಯ್ಯದ್‌ ನಧೀಂ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ 3 ತಂಡಗಳನನ್ನು ರಚನೆ ಮಾಡಲಾಗಿದೆ.

28 ವರ್ಷದ ಹರ್ಷ ಕುಂಬಾರ ಬೀದಿ, ಸೀಗೆಹಟ್ಟಿಯ ನಿವಾಸಿ. ಭಾನುವಾರ ರಾತ್ರಿ ಹೋಟೆಲ್‌ಗೆ ಹೋಗಿ ಊಟ ಮಾಡಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೊರಟಿದ್ದ. ದುಷ್ಕರ್ಮಿಗಳು ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಎನ್. ಟಿ. ರಸ್ತೆ ಕಾಮತ್‌ ಪೆಟ್ರೋಲ್‌ ಬಂಕ್ ಎದುರು ಭಾರತೀ ಕಾಲೋನಿ ಕ್ರಾಸ್‌ನ ರಸ್ತೆಯಲ್ಲಿ ಹರ್ಷನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+