Superfast Train: ಬೆಂಗಳೂರು-ಮುಂಬೈ ರೈಲು ಪ್ರಯಾಣಿಕರಿಗೆ ಡಬಲ್ ಗುಡ್‌ನ್ಯುಸ್ ಕೊಟ್ಟ ಪ್ರಹ್ಲಾದ್ ಜೋಶಿ

ಬೆಂಗಳೂರು: ದಕ್ಷಿಣ ಕರ್ನಾಟಕದ ಬೆಂಗಳೂರಿನಿಂದ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಮೂಲಕ ಮುಂಬೈಗೆ ಸೇರುವ 'ಬೆಂಗಳೂರು-ಮುಂಬೈ ಸೂಪರ್‍ಫಾಸ್ಟ್ ಎಕ್ಸ್‌ಪ್ರೆಸ್ ರೈಲು' ಆರಂಭಿಸುವ ಕುರಿತು ಮಹತ್ವದ ಅಪ್ಡೇಟ್ ಸಿಕ್ಕಿದೆ. ಬುಧವಾರ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ರೈಲು ಸೇವೆ ಆರಂಭ, ರೈಲು ಯೋಜನೆ ಕುರಿತು ಮಾಹಿತಿ ನೀಡಿದ್ದಾರೆ.

ಮುಂದಿನ ಜೂನ್ ಅಂತ್ಯಕ್ಕೆ 'ಬೆಂಗಳೂರು-ಮುಂಬೈ ಸೂಪರ್‍ಫಾಸ್ಟ್ ಎಕ್ಸ್‌ಪ್ರೆಸ್ ರೈಲು' ಸೇವೆ ಆರಂಭಿಸುವುದಾಗಿ ರೈಲ್ವೆ ಸಚಿವರು ತಿಳಿಸಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಅವರು ಎಕ್ಸ್ ಪೊಸ್ಟ್ ಮೂಲಕ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಬೆಂಗಳೂರಿನಿಂದ ಕರ್ನಾಟಕದ ಮಧ್ಯಭಾಗವಾದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಾರ್ಗದ ಮೂಲಕ ವಾಣಿಜ್ಯ ನಗರಿ ಮುಂಬೈಗೆ ತೆರಳಲು ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲನ್ನು ಜೂನ್ ಗೆ ಸಂಚಾರಕ್ಕೆ ಲಭ್ಯವಾಗಲಿದೆ ಎಂದು ಸಿಹಿ ಸುದ್ದಿ ನಿಡಿದ್ದಾರೆ.

Bengaluru-Mumbai Superfast Train

ಇತ್ತೀಚೆಗೆ ಅನುಮೋದನೆಗೊಂಡ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನಿಂದ ಕಲಬರುಗಿ, ರಾಯಚೂರು ಮತ್ತು ಯಾದಗಿರಿ ಮಾರ್ಗವಾಗಿ ಸಾಗಿ ಸೋಲ್ಲಾಪುರ ಮೂಲಕ ಮುಂಬೈ ಸೇರುವಂತೆ ಕಾರ್ಯಾಚರಣೆ ಮಾಡಲು ಪ್ಲಾನ್ ಮಾಡಲಾಗಿದೆ. ಈ ಸ್ಲೀಪರ್ ರೈಲಿಗೂ ಮೊದಲು ಅನುಮೋದನೆ ಪಡೆದ ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲು ಬೆಂಗಳೂರಿನಿಂದ ಕರ್ನಾಟಕದ ಅನೇಕ ಜಿಲ್ಲೆಗಳನ್ನು ಹಾದು ಪ್ರಯಾಣ ಮಾಡಲಿದೆ.

Vande Bharat Train: ಪ್ಲಾಟ್‌ಫಾರ್ಮ್ ಎತ್ತರದ ವ್ಯತ್ಯಾಸ, ವಂದೇ ಭಾರತ್ ರೈಲು ಹತ್ತಲು ಸಮಸ್ಯೆ
Vande Bharat Train: ಪ್ಲಾಟ್‌ಫಾರ್ಮ್ ಎತ್ತರದ ವ್ಯತ್ಯಾಸ, ವಂದೇ ಭಾರತ್ ರೈಲು ಹತ್ತಲು ಸಮಸ್ಯೆ

ಇದೇ ರೈಲು ವಂದೇ ಭಾರತ್ ಸ್ಲೀಪರ್ ಆಗಿ ಬದಲಾವಣೆ

ವಿಶೇಷವೆಂದರೆ ಮುಂದಿನ ದಿನಗಳಲ್ಲಿ ಇದೇ ಬೆಂಗಳೂರು- ಮುಂಬೈ ನಡುವಿನ ಈ ಸೂಪರ್ ಫಾಸ್ಟ್ ರೈಲನ್ನು ವಂದೇ ಭಾರತ್ ಸ್ಲೀಪರ್ ರೈಲಾಗಿ ಬದಲಾಯಿಸುವು ಮನವಿಯನ್ನು ಅಶ್ವಿನಿ ವೈಷ್ಣವ್ ಅವರು ಪರುಸ್ಕರಿಸಿದ್ದಾರೆ. ಆರಂಭದಲ್ಲಿ ಸೂಪರ್ ಫಾಸ್ಟ್ ರೈಲಾಗಿ ಸಂಚಾರ ಮಾಡಲಿದ್ದು, ನಂತರ ಆ ರೈಲಿನ ಬದಲಾಗಿ ವಂದೇ ಭಾರತ್ ಸ್ಲೀಪರ್ ರೈಲು ಕಾರ್ಯಾಚರಣೆ ರೈಲ್ವೆ ಸಚಿವರು ಒಪ್ಪಿದ್ದಾರೆ ಎಂದು ಜೋಶಿ ಮತ್ತೊಂದು ಗುಡ್‌ನ್ಯೂಸ್ ತಿಳಿಸಿದರು.

ಲೋಕಾಪುರ - ಸವದತ್ತಿ - ಧಾರವಾಡ ಮಾರ್ಗ ರೀಸರ್ವೇ

ಈ ವೇಳೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪುನರಾಭಿವೃದ್ದಿ ಮತ್ತು ಹೆಚ್ಚಿನ ಅತ್ಯಾಧುನಿಕ ಸೌಕರ್ಯಗಳನ್ನು ಕಲ್ಪಿಸುವ ಕುರಿತು ಹಾಗೂ ಸಂಸದರು ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪ್ರಸ್ತಾಪಿಸಿದ್ದ ಯೋಜನೆಗೂ ಸಕಾರಾತ್ಮಕವಾಗಿ ಅಶ್ವಿನಿ ವೈಷ್ಣವ್ ಅವರು ಸ್ಪಂದಿಸಿದ್ದಾರೆ.

ಲೋಕಾಪುರ-ಸವದತ್ತಿ-ಧಾರವಾಡ ರೈಲ್ವೆ ಲೈನ್ ಪುನರ್ ಸರ್ವೆ ಬಗ್ಗೆ ಸುದೀರ್ಘ ಚರ್ಚೆಯಾಗಿದೆ. ಇಂದಿನ ಈ ಅಂಶಗಳ ಕುರಿತು ಕೇಂದ್ರ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಈ ಮೂಲಕ ಶೀಘ್ರವೇ ಮತ್ತೆ ಸರ್ವೇ ನಡೆಯಲಿದ್ದು, ಯೋಜನೆಗೆ ಅನುಮೋದನೆ ಸಿಗುವ ಭರವಸೆ ದೊರೆತಿದೆ.

ಬೆಂಗಳೂರು-ಮುಂಬೈ ಸೂಪರ್‍‌ಫಾಸ್ಟ್ ರೈಲು ಆರಂಭಕ್ಕೆ ಅನುಮೋದನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೂ ಜೋಶಿಯವರು ಧನ್ಯವಾದ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+