Jobs: ಉದ್ಯೋಗ ವಂಚನೆಯಲ್ಲಿ ಶೇ.82 ಮಂದಿ ಜಾಗೃತ, ಎಚ್ಚರಿಕೆ ಮರೆತ ಜೆನ್‌ ಜೀ: ಲಿಂಕ್ಡ್‌ಇನ್ ವರದಿ

ನವದೆಹಲಿ: ಭಾರತೀಯ ವೃತ್ತಿಪರರು ತಮ್ಮ ಉದ್ಯೋಗ ಹುಡುಕಾಟದ ಸಮಯದಲ್ಲಿ ಎದುರಾಗುವ ಉದ್ಯೋಗ ವಂಚನೆಗಳ ಬಗ್ಗೆ ಹೆಚ್ಚು ಜಾಗರೂಕರಾಗುತ್ತಿದ್ದಾರೆ ಎಂದು ಲಿಂಕ್ಡ್‌ ಇನ್‌ ನ ಹೊಸ ಸಂಶೋಧನಾ ವರದಿ ತಿಳಿಸಿದೆ. ಮೋಸದ ಬಲೆಗೆ ಬೀಳದೇ ಅದೇಗೆ ಉದ್ಯೋಗಾಕಾಂಕ್ಷಿಗಳು ಎಚ್ಚರ ವಹಿಸುತ್ತಾರೆ, ಎಚ್ಚರ ತಪ್ಪುವ ಜೆನ್‌ ಜೀ ಪ್ರಮಾಣ ಎಷ್ಟು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಐವರಲ್ಲಿ ನಾಲ್ಕಕ್ಕಿಂತ ಹೆಚ್ಚು (ಶೇ.82) ಮಂದಿ ಯಾವುದೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮೊದಲು ಆ ಉದ್ಯೋಗಾವಕಾಶ ಅಧಿಕೃತವಾಗಿದೆಯೇ ಎಂದು ಪರೀಕ್ಷಿಸುತ್ತಿದ್ದಾರೆ. ಅರ್ಧಕ್ಕಿಂತ ಹೆಚ್ಚು (ಶೇ.53) ಜನರು ಒಂದು ವರ್ಷದ ಹಿಂದಿಗಿಂತ ಈಗ ಉದ್ಯೋಗದ ಬಗ್ಗೆ ಹೆಚ್ಚಿನ ಸಂಶಯ ವ್ಯಕ್ತಪಡಿಸುತ್ತಿರುವುದಾಗಿ ಲಿಂಕ್ಡ್‌ ಇನ್‌ನಿಂದ ಬಿಡುಗಡೆಯಾದ 'ಹೊಸ ಜಾಬ್ ಸರ್ಚ್ ಸೇಫ್ಟಿ ಪಲ್ಸ್' ವರದಿಯಲ್ಲಿ ತಿಳಿಸಲಾಗಿದೆ.

Indians Verify Job Posts

ಈ ವರದಿ ಪ್ರಕಾರ, ಮಾರುಕಟ್ಟೆಯಲ್ಲಿ ಉದ್ಯೋಗ ವಂಚನೆಗಳ ಬಗ್ಗೆ ಜಾಗೃತಿ ಬೆಳೆಯುತ್ತಿರುವುದನ್ನು ಎತ್ತಿ ತೋರಿಸಿವೆ. ಇದರೊಂದಿಗೆ ವೃತ್ತಿಜೀವನದ ಆರಂಭಿಕ ಹಂತದಲ್ಲಿರುವವರಿಗೆ ಇರುವ ಸೂಕ್ಷ್ಮ ಅಪಾಯಗಳೇನು ಎಂಬುದರ ಮೇಲೆ ಬೆಳಕು ಚೆಲ್ಲಿದೆ. ಜಾಗೃತಿ ಹೆಚ್ಚುತ್ತಿದ್ದರೂ ಸಹ, ಉತ್ತಮ ಅವಕಾಶಗಳನ್ನು ಪಡೆಯಲೇಬೇಕೆಂಬ ಒತ್ತಡದಿಂದ ಕೆಲವೊಮ್ಮೆ ಜಾಗರೂಕತೆ ಕಡಿಮೆ ಆಗಬಹುದಾಗಿದೆ. ಅದರಲ್ಲೂ ಈ ಅಪಾಯ ವಿಶೇಷವಾಗಿ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಹೆಚ್ಚು ಕಂಡು ಬರುತ್ತಿದೆ.

Superfast Train: ಬೆಂಗಳೂರು-ಮುಂಬೈ ರೈಲು ಪ್ರಯಾಣಿಕರಿಗೆ ಡಬಲ್ ಗುಡ್‌ನ್ಯುಸ್ ಕೊಟ್ಟ ಪ್ರಹ್ಲಾದ್ ಜೋಶಿ
Superfast Train: ಬೆಂಗಳೂರು-ಮುಂಬೈ ರೈಲು ಪ್ರಯಾಣಿಕರಿಗೆ ಡಬಲ್ ಗುಡ್‌ನ್ಯುಸ್ ಕೊಟ್ಟ ಪ್ರಹ್ಲಾದ್ ಜೋಶಿ

ಆಫರ್‍‌ ನೋಡಿ ಎಚ್ಚರಿಕೆ ಮರೆಯುವ ಜೆನ್ ಜೀ

ಎಲ್ಲಾ ವಯೋಮಾನದ ವೃತ್ತಿಪರರು ಕೊಂಚ ಹೆಚ್ಚು ಜಾಗರೂಕರಾಗುತ್ತಿದ್ದರೂ ಸಹ, ವೃತ್ತಿಜೀವನದ ಆರಂಭಿಕ ಹಂತದಲ್ಲಿರುವ ಉದ್ಯೋಗಾಕಾಂಕ್ಷಿಗಳು ಕೆಲವು ನಿರ್ದಿಷ್ಟ ಕ್ಷಣಗಳಲ್ಲಿ ವಂಚನೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಶೇ.54ರಷ್ಟು ಜೆನ್ ಜೀ ಉದ್ಯೋಗಾಕಾಂಕ್ಷಿಗಳು, ಆಕರ್ಷಕ ಅವಕಾಶ ಬಂದಾಗ ಮಿಸ್ ಆಗಬಾರದು ಎಂದುಕೊಂಡು ತಾವು ಆ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವುದನ್ನು ನಿರ್ಲಕ್ಷಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಇದು ತುರ್ತು ಸಂದರ್ಭ ಮತ್ತು ಸ್ಪರ್ಧೆಯು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ.

ಭಾರತದ ಸುಮಾರು ಅರ್ಧದಷ್ಟು ಶೇ.49 ಜೆನ್ ಜೀ ವೃತ್ತಿಪರರು ತಾವು ಉದ್ಯೋಗ ವಂಚನೆಗೆ ಬಲಿಯಾಗುವ ಹಂತಕ್ಕೆ ಬಂದಿದ್ದಾಗಿ ಹೇಳಿದ್ದಾರೆ. ಇದಕ್ಕೆ ಹೋಲಿಸಿದರೆ ಜೆನ್ ಎಕ್ಸ್ ನವರಲ್ಲಿ ಈ ಪ್ರಮಾಣ ಶೇ.36 ರಷ್ಟಿದೆ. ಇದು ಯುವ ಉದ್ಯೋಗಾಕಾಂಕ್ಷಿಗಳು ವಂಚನೆಗೆ ಸಂಬಂಧಿಸಿದಂತೆ ಹೆಚ್ಚು ಬಲಿಯಾಗುತ್ತಿರುವುದನ್ನು ಸೂಚಿಸುತ್ತದೆ ಎಂದು ಲಿಂಕ್ಡ್‌ ಇನ್ ವಿವರಿಸಿದೆ.

ಅರ್ಜಿ ಸಲ್ಲಿಕೆ ಮುನ್ನವೇ ವಂಚನೆಯ ಬಲೆಗೆ!

ಉದ್ಯೋಗಗಳನ್ನು ಹುಡುಕುತ್ತಿರುವಾಗ ಶೇ.20ರಷ್ಟು ಅಥವಾ ನೇಮಕಾತಿದಾರರು ಅಥವಾ ಕಂಪನಿಗಳು ಮೊದಲ ಹಂತದಲ್ಲಿ ಸಂಪರ್ಕ ಮಾಡಿದಾಗ ಶೇ.18ರಷ್ಟು ಉದ್ಯೋಗಾಕಾಂಕ್ಷಿಗಳು ವಂಚನೆಗಳ ಕುರಿತು ಹಚ್ಚಿನ ಆತಂಕ ಅನುಭವಿಸುತ್ತಾರೆ ಎಂಬುದು ತಿಳಿದು ಬಂದಿದೆ. ಏಕೆಂದರೆ ಹಂತದಲ್ಲಿ ವಿವರಗಳಿಗೆ ಮಾತ್ರ ಸೀಮಿತವಾಗಿರುತ್ತವೆ ಮತ್ತು ನಂಬಿಕೆ ಇನ್ನೂ ಮೂಡಿರುವುದಿಲ್ಲ. ಹೀಗಾಗಿ ಕಂಪನಿ, ಕೆಲಸ ಹೇಗೋ ಏನೋ ಎಂಬ ಆತಂಕ ಅವರಲ್ಲಿರುತ್ತದೆ.

ಈ ಹಂತದಲ್ಲಿ ಕೆಲವು ವಂಚಕರು ಅಭ್ಯರ್ಥಿಗಳ ಜೊತೆ ವಿಶ್ವಾಸಾರ್ಹ ವೇದಿಕೆಗಳಿಂದ ಆಚೆಗೆ ಸಂವಹನ ನಡೆಸಲು ಪ್ರಯತ್ನಿಸುವ ಮೂಲಕ ಈ ಆರಂಭಿಕ ಹಂತದ ಲಾಭ ಪಡೆಯುತ್ತಾರೆ. ವರದಿಯಾದ ವಂಚನೆಯ ಪ್ರಯತ್ನಗಳಲ್ಲಿ ಶೇ. 90 ರಷ್ಟು ಪ್ರಯತ್ನಗಳು ಬಳಕೆದಾರರನ್ನು ವೈಯಕ್ತಿಕ ಮೆಸೇಜಿಂಗ್ ಆ್ಯಪ್‌ ಗಳಿಗೆ ವರ್ಗಾಯಿಸಿರುವುದು ಕಂಡು ಬಂದಿವೆ. ಅಲ್ಲಿ ಖಾತೆಗಳನ್ನು ಪರಿಶೀಲಿಸುವುದು ಕಷ್ಟಕರವಾಗಿರುತ್ತದೆ ಮತ್ತು ಸಂಭಾಷಣೆಗಳು ಹೆಚ್ಚು ಅನೌಪಚಾರಿಕವಾಗಿರುತ್ತವೆ. ಅಲ್ಲದೆ, ಪ್ಲಾಟ್‌ ಫಾರ್ಮ್‌ ನಿಂದ ಹೊರಗೆ ನಡೆಯುವ ಅರ್ಧಕ್ಕಿಂತ ಹೆಚ್ಚಿನ ವಂಚನೆಯ ಪ್ರಯತ್ನಗಳು ಯಾವುದೇ ವಿಶ್ವಾಸಾರ್ಹತೆ ಮೂಡುವ ಮೊದಲೇ, ಅಂದರೆ ಆರಂಭಿಕ ಸಂದೇಶದಲ್ಲೇ ಸಂಭವಿಸುತ್ತವೆ. ಹೀಗಾಗಿ ಉದ್ಯೋಗಾಕಾಂಕ್ಷಿಗಳು ಪ್ರತಿ ಹಂತದಲ್ಲೂ ಎಚ್ಚರಿಕೆ ವಹಿಸುವಂತೆ ವಿನಂತಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+