• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಪಕ್ಷದಲ್ಲಿ ಹಿರಿಯರಿಗೆ ಗೌರವ ಜಾಸ್ತಿ: ಸಚಿವ ಈಶ್ವರಪ್ಪ

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಜೂನ್ 9: ಬಿಜೆಪಿಯದ್ದು ಕುಟುಂಬ ವ್ಯವಸ್ಥೆ ಇದ್ದಂತೆ, ಕುಟುಂಬ ವ್ಯವಸ್ಥೆಯಲ್ಲಿ ಹಿರಿಯರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಿಜೆಪಿಯಲ್ಲಿ ಹಿರಿಯರಿಗೆ ಜಾಸ್ತಿ ಗೌರವ ನೀಡುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಇಂದು ಶಿವಮೊಗ್ಗದಲ್ಲಿ ಮಾತನಾಡಿದ ಅವರು, ""ಜಿಲ್ಲೆಯಲ್ಲಿ ಆಯ್ಕೆ ಆಗುವ ಮುಂಚೆ ನಗರದಲ್ಲಿ ಆಯ್ಕೆ ಆಗುತ್ತೆ. ಜಿಲ್ಲೆಯಿಂದ ರಾಜ್ಯಕ್ಕೆ, ರಾಜ್ಯದಿಂದ ದೇಶಕ್ಕೆ‌ ಆಯ್ಕೆ ಪ್ರಕ್ರಿಯೆ ಹೋಗುತ್ತದೆ. ಜಿಲ್ಲೆ, ರಾಜ್ಯ ಹಾಗೂ ದೇಶದ ಹಿತದೃಷ್ಟಿಯಿಂದ ಯೋಚನೆ ಮಾಡಿಯೇ ಉತ್ತಮ ತೀರ್ಮಾನ ತೆಗೆದುಕೊಂಡಿದ್ದಾರೆ'' ಎಂದು ಹೇಳಿದರು.

ಶಿವಮೊಗ್ಗದಲ್ಲಿ 22 ಸಾವಿರ ಎಲ್‍ಇಡಿ ದೀಪ ಅಳವಡಿಕೆ: ಬೈರತಿ ಬಸವರಾಜು

ಆದ್ದರಿಂದಲೇ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ರಾಜ್ಯಸಭೆ ಟಿಕೆಟ್ ನೀಡಿದ್ದಾರೆ. ಆ ಹಿರಿಯರು ಏನು ತೀರ್ಮಾನ ತೆಗೆದುಕೊಂಡಿದ್ದಾರೆಯೋ ಅದನ್ನು ಪಕ್ಷದ ಎಲ್ಲಾ ಕಾರ್ಯಕರ್ತರು ಸಂತೋಷದಿಂದ‌ ಸ್ವಾಗತಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಕಾರ್ಯಕರ್ತರ ಶಕ್ತಿಯಿಂದಲೇ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದರು.

ವಯಸ್ಸಿನ ಹಿರಿತನಕ್ಕೂ, ರಾಷ್ಟ್ರದ ಹಿರಿತನಕ್ಕೂ ಬಹಳ ವ್ಯತ್ಯಾಸ ಇದೆ ಎಂದು ರಾಜ್ಯಸಭಾ ಚುನಾವಣಾ ಅಭ್ಯರ್ಥಿ ಆಯ್ಕೆಯ ಕುರಿತು ಮಾತನಾಡಿದ ಅವರು, ""ನಾವು ನಮ್ಮ‌ ವಿವೇಚನೆಯಲ್ಲಿ ತೀರ್ಮಾನ‌ಕ್ಕೆ ತಕ್ಕಂತೆ ಅವರಿಗೆ ಪಟ್ಟಿ ಕಳುಹಿಸಿದ್ದು, ಇದಕ್ಕಿಂತ ಒಳ್ಳೆಯದು ಅಂತಾ ಅವರು ಯೋಚನೆ‌ ಮಾಡಿ ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯಸಭೆ ಟಿಕೆಟ್ ಕೊಟ್ಟಿದ್ದಾರೆ ಎಂದು ಹೇಳಿದರು.

ಬಿಜೆಪಿಯಲ್ಲಿ ಭಿನ್ನಮತ ಸಹಜ: ಸಚಿವ ಕೆ.ಎಸ್. ಈಶ್ವರಪ್ಪ ಸ್ಪೋಟಕ ಹೇಳಿಕೆ

ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನ ಸಾಧ್ಯವೇ ಇಲ್ಲ. ಕೋರ್ ಕಮಿಟಿಯಲ್ಲಿ ಹೆಸರು ಕಳುಹಿಸಿದ್ದವರು ಸಹ ಈ ಆಯ್ಕೆಯನ್ನು ಸ್ವಾಗತಿಸಿದ್ದಾರೆ. ಬಿಜೆಪಿ ಒಂದು ಕಲ್ಲು ಬಂಡೆ ಇದ್ದ ಹಾಗೆ. ಪಟ್ಟಿಯಲ್ಲಿ ಈ ಎರಡು ಹೆಸರನ್ನು ನಾವು ಚರ್ಚೆನೇ ಮಾಡಿಲ್ಲ. ಪಕ್ಷ ಸಂಘಟನೆಯನ್ನು ಶಕ್ತಿಶಾಲಿಯಾಗಿ ರೂಪಿಸುವಲ್ಲಿ ಈ ಆಯ್ಕೆ‌ ಅನುಕೂಲವಾಗಲಿದೆ ಎಂದು ತಿಳಿಸಿದರು.

English summary
Rural Development Minister KS Eshwarappa said that Would Be Honored Senior Leaders in BJP Party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X