ಶಿವಮೊಗ್ಗ; ಮೆಡಿಕಲ್ ಸೀಟು ಕೊಡಿಸುವುದಾಗಿ 1 ಲಕ್ಷ ರೂ. ವಂಚನೆ
ಶಿವಮೊಗ್ಗ, ಜನವರಿ 10: ಕೆಲಸ ಕೊಡಿಸುವುತ್ತೇವೆ, ಇಂಜಿನಿಯರಿಂಗ್ ಸೀಟ್ ಕೊಡಿಸುತ್ತೇವೆ, ಮೆಡಿಕಲ್ ಸೀಟು ಕೊಡಿಸುತ್ತೇವೆ ಎಂದು ವಂಚಿಸುವ ಪ್ರಕರಣಗಳು ನಡೆಯುತ್ತಲೇ ಇದೆ. ಭದ್ರಾವತಿಯಲ್ಲಿಯೂ ಇಂತಹ ಪ್ರಕರಣ ಬೆಳಕಿಗೆ ಬಂದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಭೂತನಗುಡಿಯ ನಿವಾಸಿ ರಫೀಕ್ ಅಹ್ಮದ್ ಪುತ್ರನಿಗೆ ಮೆಡಿಕಲ್ ಸೀಟು ಕೊಡಿಸುವುದಾಗಿ ಕೋಲ್ಕತ್ತಾ ಮೂಲದ ವ್ಯಕ್ತಿಯೊಬ್ಬ ವಂಚನೆ ಮಾಡಿದ್ದಾನೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.
6 ಲಕ್ಷ ರೂ. ಹಣಕ್ಕೆ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿದ್ದ ಕೋಲ್ಕತ್ತಾ ಮೂಲದ ರಿತೇಷ್ ಅಗರ್ವಾಲ್ ರಫೀಕ್ ಅಹ್ಮದ್ ಅವರಿಂದ 1 ಲಕ್ಷ ರೂ. ಹಣ ಮುಂಗಡವಾಗಿ ಪಡೆದಿದ್ದರು. ಮುಖ ಪರಿಚಯವೇ ಇಲ್ಲದ ವ್ಯಕ್ತಿಗೆ ಆನ್‌ಲೈನ್ ಮೂಲಕ ಹಣವನ್ನು ವರ್ಗಾವಣೆ ಮಾಡಿದ್ದರು.

ಹಣ ವರ್ಗಾವಣೆ ಮಾಡಿದ ಬಳಿಕ ರಫೀಕ್ ಅಹ್ಮದ್‌ಗೆ ಈ ಕುರಿತು ಅನುಮಾನ ಬಂದಿದೆ. ಆದ್ದರಿಂದ, ಅವರು ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ರಿತೇಷ್ ಅಗರ್ವಾಲ್ ವಿರುದ್ಧ ದೂರು ನೀಡಿದ್ದಾರೆ.
ಮೆಡಿಕಲ್ ಸೀಟು ಕೊಡಿಸುವುದು, ಸೀಟು ಬ್ಲಾಕ್ ಮಾಡಿಸುವುದು ದೊಡ್ಡ ದಂಧೆಯಾಗಿದೆ. ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.












Click it and Unblock the Notifications