ಶಿವಮೊಗ್ಗ: ರಾಹುಲ್ ಗಾಂಧಿ ರೋಡ್‌ ಶೋಗೆ ಹರಿದು ಬಂತು ಜನಸಾಗರ

ಶಿವಮೊಗ್ಗ, ಏಪ್ರಿಲ್ 03: ನಗರದಲ್ಲಿ ಇಂದು ನಡೆದ ರಾಹುಲ್ ಗಾಂಧಿ ರೋಡ್ ಶೋಗೆ ಭರ್ಜರಿ ಜನಪ್ರತಿಕ್ರಿಯೆ ದೊರೆತಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ನಗರದ ಬಸ್ ನಿಲ್ದಾಣದ ಅಶೋಕ ವೃತ್ತದಿಂದ ಆರಂಭಗೊಂಡ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ರೋಡ್ ಶೋಗೆ ರಸ್ತೆಯ ಇಕ್ಕಲೆಗಳಲ್ಲಿ ಜನಗಳಿಗೆ ಕೈ ಬೀಸುತ್ತಾ ನಮಸ್ಕರಿಸುತ್ತಾ ರೋಡ್ ಶೋನಲ್ಲಿ ಸಾಗಿದರು.

ದಾರಿ ಉದ್ದಕ್ಕೂ ಜನ 'ರಾಹುಲ್, ರಾಹುಲ್' ಎಂಬ ಘೋಷಣೆ ಕೂಗಿ ರೋಡ್‌ ಶೋಗೆ ಉತ್ಸಾಹ ತುಂಬಿದರು. ರಾಹುಲ್ ಗಾಂದಿ ರೋಡ್ ಶೋಗಾಗಿ ಬಿ.ಹೆಚ್ಚ ರಸ್ತೆ, ಎ.ಎ ವೃತ್ತ, ಗೋಪಿ ವೃತ್ತ ದಲ್ಲಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಲಾಗಿತ್ತು. ಡೊಳ್ಳು ಕುಣಿತ, ಕಳಶ ಹೊತ್ತ ಮಹಿಳೆಯರು ರೋಡ್ ಶೋಗೆ ಇನ್ನಷ್ಟು ಮೆರಗು ತಂದರು.

Massive crowd in Rahul Gandhi road show today in Shimogga

12ಗಂಟೆಗೆ ಶಿವಮೊಗ್ಗ ಹೆಲಿಪ್ಯಾಡ್ ಗೆ ಆಗಮಿಸಿದ ರಾಹುಲ್ ಗಾಂಧಿ ಐಬಿಯಲ್ಲಿ ಐದು ನಿಮಿಷಗಳ ಕಾಲ ರಾಜ್ಯ ಕಾಂಗ್ರೆಸ್ ಮುಖಂಡರೊಂದಿಗೆ ಮಾತನಾಡಿಸಿ ನಂತರ ಬಸ್ ನಿಲ್ದಾಣದ ಅಶೋಕ ವೃತ್ತದ ಬಳಿ ರೋಡ್ ಶೋಗೆ ಚಾಲನೆ ನೀಡಿದರು.

ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ದಿನೇಶ್ ಗುಂಡುರಾವ್ ಡಾ.ಪರಮೇಶ್ವರ್ ಎ.ಐ.ಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಶಾಸಕರಾದ ಕೆ.ಬಿ.ಪ್ರಸನ್ನ ಕುಮಾರ್, ಕಿಮ್ಮನೆ ರತ್ನಾಕರ್ ಮೊದಲಾದವರು ಸಾತ್ ನೀಡಿದರು.

Massive crowd in Rahul Gandhi road show today in Shimogga

ಸದಾ ಜಗಮಗಿಸುತ್ತಿದ್ದ ಗೋಪಿ ವೃತ್ತದಲ್ಲಿ ರಾಹುಲ್ ಗಾಂಧಿಯ ರೋಡ್ ಸೈಡ್ ಮೀಟಿಂಗ್ ಗೆ ಜನ ಸಾಗರವೇ ಹರಿದು ಬಂತು.
ದಿನವೂ ಟ್ರಾಫಿಕ್ ನಿಂದ ಕೂಡಿದ್ದ ಗೋಪಿ ವೃತ್ತದಲ್ಲಿ ಸಾವಿರಾರು ಜನ ಉರಿ ಬಿಸಿಲನ್ನೂ ಗಮನಿಸದೆ ರೋಡ್‌ ಶೋನಲ್ಲಿ ಭಾಗವಹಿಸಿದ್ದು ವಿಷೇಶವಾಗಿತ್ತು.

ರೋಡ್ ಶೋ ಮೊದಲು ರಾಹುಲ್ ಗಾಂಧಿ ಅವರು ಐಬಿಯಲ್ಲಿ ಗೋಪಾಳದ ನಿವಾಸಿ ಅಹ್ಮದ್ ಹಾಗೂ ಡಿಬಾ ಎಂಬ ದಂಪತಿಯ ಆರು ತಿಂಗಳಿನ ಹಸು ಗೂಸಾದ ಅಲ್ಫಾಳನ್ನು ಮುದ್ದಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+