ಶಿವಮೊಗ್ಗ; 500ರೂ ಚಿಲ್ಲರೆ ಕೇಳಲು ಬಂದು, 58ಗ್ರಾಂ ಚಿನ್ನ ಎಗರಿಸಿದ!

ಶಿವಮೊಗ್ಗ, ಸೆಪ್ಟೆಂಬರ್ 18: ನಗರದ ಗಾಂಧಿ ಬಜಾರ್ ನಲ್ಲಿ ಚಿಲ್ಲರೆ ಪಡೆಯುವ ನೆಪದಲ್ಲಿ ಬಂದ ವ್ಯಕ್ತಿಯೊಬ್ಬ 58 ಗ್ರಾಂ ಮಾಂಗಲ್ಯ ಸರವನ್ನು ಅಪಹರಿಸಿದ ಘಟನೆ ಇಂದು ಗಾಂಧಿ ಬಜಾರ್ ನಲ್ಲಿ ನಡೆದಿದೆ.

ಗಾಂಧಿ ಬಜಾರ್ ನಲ್ಲಿರುವ ಸುಬ್ರಹ್ಮಣ್ಯ ಮಿಷನ್ ವರ್ಕ್ಸ್ ಗೆ ಬಂದ ವ್ಯಕ್ತಿಯೊಬ್ಬ 500 ರೂಪಾಯಿ ಚಿಲ್ಲರೆ ನೀಡುವಂತೆ ಅಂಗಡಿ ಮಾಲೀಕನ ಗಮನವನ್ನು ಬೇರೆಡೆ ತಿರುಗಿಸಿದ್ದಾನೆ. ನಂತರ 58 ಗ್ರಾಂ ಸರವನ್ನು ಅಪಹರಿಸಿದ್ದಾನೆ. ಸುಬ್ರಹ್ಮಣ್ಯ ಮಿಷನ್ ವರ್ಕ್ಸ್ ನಲ್ಲಿ ಚಿನ್ನಾಭರಣ ಕೆಲಸ ಮಾಡುವವರು ಬಂಗಾರದ ಪಾಲಿಷ್ ಮತ್ತು ಚಿನ್ನದ ನೀರು ಹಾಕುವ ಕೆಲಸ ಮಾಡುತ್ತಾರೆ. ಅಂಗಡಿ ಒಳಗೆ ಚಿಲ್ಲರೆ ಪಡೆಯಲು ಬಂದು ಅಲ್ಲಿ ಇಡಲಾಗಿದ್ದ ಸರವನ್ನು ಈತ ಕಳ್ಳತನ ಮಾಡಿದ್ದಾನೆ. ಕಳ್ಳತನ ಮಾಡಿರುವ ವ್ಯಕ್ತಿಯ ಚಲನ ವಲನವೆಲ್ಲ ಅಂಗಡಿ ಹೊರಭಾಗದಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ.

Man Stole 58 Gram Goldchain From Shop In Shivamogga

ಸಾರ್ವಜನಿಕರೇ ಆತನನ್ನು ಹಿಡಿದು ದೊಡ್ಡಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಸೆರೆಸಿಕ್ಕ ವ್ಯಕ್ತಿಯು ದಾವಣಗೆರೆಯ ಹರಿಹರ ಮೂಲದವನಾಗಿದ್ದು, ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+