Get Updates
Get notified of breaking news, exclusive insights, and must-see stories!

ತಾಯಿಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಮಧು ಬಂಗಾರಪ್ಪ

ಶಿವಮೊಗ್ಗ, ಏ. 23 :ಮಂಗಳವಾರ ಮೃತಪಟ್ಟ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಪತ್ನಿ ಶಕುಂತಲಾ ಬಂಗಾರಪ್ಪ ಅವರ ಅಂತ್ಯಕ್ರಿಯೆ ಸೊರಬದಲ್ಲಿರುವ ಬಂಗಾರಧಾಮದಲ್ಲಿ ಬುಧವಾರ ಮಧ್ಯಾಹ್ನ 4 ಗಂಟೆಗೆ ನಡೆಯಿತು. ಶಕುಂತಲಾ ಬಂಗಾರಪ್ಪ ಅವರ ಕಿರಿಯ ಪುತ್ರ ಮಧು ಬಂಗಾರಪ್ಪ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಈ ಸಂದರ್ಭದಲ್ಲಿ ಕುಮಾರ್ ಬಂಗಾರಪ್ಪ ಸಹ ಪಾಲ್ಗೊಂಡಿದ್ದರು.

ಕುಬಟೂರಿನ ಮಧು ಬಂಗಾರಪ್ಪ ಅವರ ನಿವಾಸದಿಂದ ಶಕುಂತಲಾ ಬಂಗಾರಪ್ಪ ಅವರ ಪಾರ್ಥಿವ ಶರೀರವನ್ನು ಮಧ್ಯಾಹ್ನ 1 ಗಂಟೆಯ ವೇಳೆಗೆ ಸೊರಬದ ಸರ್ಕಾರಿ ಕಾಲೇಜು ಮೈದಾನಕ್ಕೆ ತೆಗೆದುಕೊಂಡು ಬಂದು ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ನಂತರ ಮಧ್ಯಾಹ್ನ 4 ಗಂಟೆಗೆ ವಿದ್ವಾನ್ ನಾರಾಯಣ್ ಶಾಸ್ತ್ರೀಗಳ ನೇತೃತ್ವದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

Shakuntala Bangarappa

ಕುಮಾರ್ ಬಂಗಾರಪ್ಪ ಸೇರಿದಂತೆ ಕುಟುಂಬ ವರ್ಗದವರು ಬಂಗಾರಧಾಮದಲ್ಲಿ ನಡೆದ ಅಂತಿಮ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಕುಟುಂಬದವರ ಇಚ್ಛೆಯಂತೆ ಶಕುಂತಲಾ ಬಂಗಾರಪ್ಪ ಅವರ ಅಂತ್ಯಕ್ರಿಯೆಯನ್ನು ಕಿರಿಯ ಮಗ ಮಧು ಬಂಗಾರಪ್ಪ ನೆರವೇರಿಸಿದರು. ಮಧು ಸಹೋದರ ಕುಮಾರ್ ಬಂಗಾರಪ್ಪ ಚಿತೆಯ ಬಳಿ ನಿಂತು ತಾಯಿಗೆ ಅಂತಿಮ ನಮನ ಸಲ್ಲಿಸಿದರು.

ಮಧ್ಯಾಹ್ನ 1 ಗಂಟೆ : ಶಕುಂತಲಾ ಬಂಗಾರಪ್ಪ ಅವರ ಪಾರ್ಥಿವ ಶರೀರವನ್ನು ಕುಬಟೂರಿನ ಮಧು ಬಂಗಾರಪ್ಪ ನಿವಾಸದಿಂದ ಸೊರಬದ ಸರ್ಕಾರಿ ಕಾಲೇಜು ಮೈದಾನಕ್ಕೆ ತೆಗೆದುಕೊಂಡು ಹೋಗಲಾಗಿದೆ. ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ತಮ್ಮ ಕಿತ್ತಾಟ ಮರೆತು ಮಧು ಮತ್ತು ಕುಮಾರ್ ಬಂಗಾರಪ್ಪ ಒಟ್ಟಿಗೆ ತಾಯಿಯ ಪಾರ್ಥಿವ ಶರೀರದೊಂದಿಗೆ ತೆರಳಿದ್ದಾರೆ.

ಹಿಂದಿನ ಸುದ್ದಿ : ಮಂಗಳವಾರ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಮೃತಪಟ್ಟ ಶಕುಂತಲಾ ಬಂಗಾರಪ್ಪ ಅವರ ಪಾರ್ಥಿವ ಶರೀರವನ್ನು ಶಿವಮೊಗ್ಗ ಜಿಲ್ಲೆ ಸೊರಬದ ಕುಬಟೂರಿನಲ್ಲಿರುವ ಮಧು ಬಂಗಾರಪ್ಪ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗಿದೆ. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಕುಮಾರ್ ಬಂಗಾರಪ್ಪ ಅವರು ಅಂತಿಮ ದರ್ಶನ ಪಡೆದರು.

ನಂತರ ಅಂತ್ಯಕ್ರಿಯೆ ಯಾರು ಮಾಡಬೇಕೆಂದಬ ವಿಷಯ ಬಂದಾಗ ಕುಮಾರ್ ಮತ್ತು ಮಧು ಬಂಗಾರಪ್ಪ ಬೆಂಬಲಿಗರ ನಡುವೆ ಸೊರಬದ ನಿವಾಸದಲ್ಲಿಯೇ ಕಿತ್ತಾಟ ನಡೆದಿದೆ. ಸ್ಥಳದಲ್ಲಿದ್ದ ಪೊಲೀಸರು ಬೆಂಬಲಿಗರನ್ನು ಸಮಾಧಾನಪಡಿಸಿ ಸಾವಿನ ಮನೆಯಲ್ಲಿ ರಾಜಕೀಯ ಮಾಡಬೇಡಿ ಎಂದು ಎಲ್ಲರನ್ನೂ ಪರಿಸ್ಥಿತಿ ತಿಳಿಗೊಳಿಸಿದರು. [ಶಕುಂತಲಾ ಬಂಗಾರಪ್ಪ ಇನ್ನಿಲ್ಲ]

ಇದಕ್ಕೂ ಮೊದಲು ತಾಯಿಯ ಮೃತದೇಹದ ಅಂತಿಮ ದರ್ಶನ ಪಡೆಯಲು ಆಗಮಿಸಿದ ಕುಮಾರ್ ಬಂಗಾರಪ್ಪ ಮತ್ತು ಸಹೋದರಿ ಸುಜಾತ ಮತ್ತು ಅನಿತಾ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಅವರನ್ನು ಸಮಾಧಾನ ಪಡಿಸಿದ ಶಕುಂತಲಾ ಬಂಗಾರಪ್ಪ ಅಳಿಯ ಶಿವರಾಜ್ ಕುಮಾರ್, ಶಾಂತಿ ಕಾಪಾಡುವಂತೆ ಎಲ್ಲರಿಗೂ ಮನವಿ ಮಾಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+