ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಪರೀಕ್ಷೆಯಲ್ಲಿ ಕಾಪಿ ಹೊಡೆಯುತ್ತಿದ್ದ ವಿದ್ಯಾರ್ಥಿಯ ಕೈ ಕಚ್ಚಿದ ಉಪನ್ಯಾಸಕ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಏಪ್ರಿಲ್ 1: ಪರೀಕ್ಷೆಯಲ್ಲಿ ಕಾಪಿ (ನಕಲು) ಹೊಡೆಯುತ್ತಿದ್ದ ಆರೋಪದ ಸಂಬಂಧ ವಿದ್ಯಾರ್ಥಿ ಮತ್ತು ಕೊಠಡಿ ಮೇಲ್ವಿಚಾರಣೆ ನಡೆಸುತ್ತಿದ್ದ ಉಪನ್ಯಾಸಕನ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಸಿಟ್ಟಿಗೆದ್ದ ಉಪನ್ಯಾಸಕ ವಿದ್ಯಾರ್ಥಿಯ ಕೈ ಕಚ್ಚಿದ್ದು, ಪ್ರಕರಣ ಪೊಲೀಸ್ ಠಾಣೆವರೆಗೂ ತಲುಪಿ ರಾಜಿಯಾಗಿದೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಪ್ರಥಮ ದರ್ಜೆ ಕಾಲೇಜೊಂದರಲ್ಲಿ ಘಟನೆ ಸಂಭವಿಸಿದ್ದು, ಪದವಿಯ ಕಲಾ ವಿಭಾಗದ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ಕಾಪಿ ಹೊಡೆಯುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಕೈ ಕಚ್ಚಿದ ಘಟನೆ ಸಂಭವಿಸಿದೆ.

ಘಟನೆ ನಡೆದದ್ದು ಹೇಗೆ?
ಪದವಿ ಪರೀಕ್ಷೆ ಸಂದರ್ಭ ವಿದ್ಯಾರ್ಥಿಯೊಬ್ಬ ನಕಲು ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಇದನ್ನು ಗಮನಿಸಿದ ಉಪನ್ಯಾಸಕ ವಿದ್ಯಾರ್ಥಿಗೆ ಬೈದು ಬುದ್ದಿ ಹೇಳಿದ್ದಾರೆ. ನಕಲು ಮಾಡಲು ಬಳಕೆ ಮಾಡಿದ್ದ ಮೊಬೈಲ್ ಫೋನ್‌ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Shivamogga: Lecturer Bite Students Hand For Copying In Exam in Hosanagara First Grade College

ಈ ಸಂದರ್ಭ ವಿದ್ಯಾರ್ಥಿ ಮತ್ತು ಉಪನ್ಯಾಸಕನ ನಡುವೆ ಮಾತಿಗೆ ಮಾತು ಬೆಳೆದಿದೆ. ಸಿಟ್ಟಿಗೆದ್ದ ಉಪನ್ಯಾಸಕ ವಿದ್ಯಾರ್ಥಿಯ ಕೈ ಕಚ್ಚಿದ್ದಾರೆ ಎಂದು ತಿಳಿದು ಬಂದಿದೆ.

Recommended Video

ಲೇಟ್ ಆಗಿ ಬಂದ್ರು ಲೇಟೆಸ್ಟ್ ಆಗಿ ಪರ್ಫಾರ್ಮ್ ಮಾಡ್ತಾರೆ ಡಿಕೆ | Dk next level | Oneindia Kannada

ಪೊಲೀಸ್ ಠಾಣೆಯಲ್ಲಿ ರಾಜಿಯಾದ ಪ್ರಕರಣ
ಘಟನೆ ಸಂಬಂಧ ದೂರು, ಪ್ರತಿ ದೂರು ನೀಡಲು ಸಿದ್ಧತೆಯಾಗಿತ್ತು. ಆದರೆ ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದ ಪ್ರಕರಣ ರಾಜಿಯಾಗಿದೆ ಎಂದು ತಿಳಿದು ಬಂದಿದೆ. ಈ ನಡುವೆ ವಿದ್ಯಾರ್ಥಿಗೆ ಉಪನ್ಯಾಸಕ ಕೈ ಕಚ್ಚಿರುವ ವಿಚಾರ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

English summary
Lecturer Bite Student's Hand For Copying In Exam in Hosanagara First Grade College of Shivamogga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X