ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ; ರೈಲ್ವೆ ಯೋಜನೆ ಸರ್ವೆ ಕಾರ್ಯ ಆರಂಭ, ಎಲ್ಲಿರಲಿದೆ ನಿಲ್ದಾಣ?

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ನವೆಂಬರ್ 20: ಶಿಕಾರಿಪುರ ಜನತೆಯ ಬಹು ವರ್ಷಗಳ ಬೇಡಿಕೆಯಾಗಿದ್ದ ರೈಲ್ವೆ ಯೋಜನೆಯ ಭೂಸ್ವಾಧೀನ ಸರ್ವೆ ಕಾರ್ಯ ಆರಂಭವಾಗಿದೆ. ಇಂದು ರೈಲ್ವೆ ಅಧಿಕಾರಿಗಳು ಹಾಗೂ ಭೂಸ್ವಾಧೀನಾಧಿಕಾರಿಗಳು ಸರ್ವೆ ಕಾರ್ಯವನ್ನು ಆರಂಭಿಸಿದರು.

ಈ ವೇಳೆ ಮಾತನಾಡಿದ ಶಿಕಾರಿಪುರ ರಾಣೆಬೆನ್ನೂರು ಶಿವಮೊಗ್ಗ ರೈಲ್ವೆ ಭೂಸ್ವಾಧೀನಾಧಿಕಾರಿ ಶಿವಕುಮಾರ್, "ಈಗಾಗಲೇ ಶಿಕಾರಿಪುರ ರಾಣೆಬೆನ್ನೂರು ಶಿವಮೊಗ್ಗ ರೈಲ್ವೆ ಮಾರ್ಗಗಳ ಕುರಿತು ರೈಲ್ವೆ ಅಧಿಕಾರಿಗಳು ಮಾರ್ಗ ಗುರುತಿಸಿದ್ದು, ಒಂದು ಹಂತದ ಸರ್ವೆಯನ್ನು ರೈಲ್ವೆ ಇಲಾಖೆ ಮುಗಿಸಿದೆ. ನಾವು ಅದರ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ" ಎಂದರು.

ಹೇಗಿರಲಿದೆ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ?ಹೇಗಿರಲಿದೆ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ?

"ಸ್ಥಳ ಪರಿಶೀಲನೆ ನಂತರ ರೈತರ ಪರಿಹಾರದ ಬಗ್ಗೆ ಸರ್ಕಾರಕ್ಕೆ ಪಟ್ಟಿ ಸಲ್ಲಿಸಲಾಗುವುದು. ಲೇವನ್ ಎ ಸರ್ಟಿಫಿಕೇಟ್ ಮೂಲಕ ಪ್ರಕ್ರಿಯೆ ನಡೆಯುತ್ತದೆ. ಈ ಭೂಸ್ವಾಧೀನವನ್ನು ಹೊಸ ಭೂಸ್ವಾಧೀನ ಕಾಯ್ದೆ 2013ರ ಅನ್ವಯ ಮಾಡಲಾಗುವುದು. ಯಾರಿಗೂ ಅನ್ಯಾಯವಾಗುವುದಿಲ್ಲ. ಪರಿಶೀಲನೆ ನಡೆಸಿ ರೈತರ ಮನೆಗಳಿಗೆ ಭೇಟಿ ನೀಡಿ ಎಲ್ಲರಿಗೂ ಸೂಕ್ತ ಪರಿಹಾರ ನೀಡಲಾಗುವುದು" ಎಂದರು.

Land Acquisition Survey Of Railway Project Started In Shikharipur

ಶತಾಬ್ದಿ ಎಕ್ಸ್ ಪ್ರೆಸ್ ರೈಲಲ್ಲಿ ಇನ್ಮುಂದೆ ತಿಂಡಿ-ಊಟ ದುಬಾರಿಶತಾಬ್ದಿ ಎಕ್ಸ್ ಪ್ರೆಸ್ ರೈಲಲ್ಲಿ ಇನ್ಮುಂದೆ ತಿಂಡಿ-ಊಟ ದುಬಾರಿ

ರೈಲ್ವೆ ನಿಲ್ದಾಣ ಸ್ಥಳ: ಸದಾಶಿವಪುರ ಹಳಿಯೂರು ಸರ್ವೆ ನಂ:173 ಹಾಗೂ ಹೊನ್ನಾಳಿ-ಶಿಕಾರಿಪುರ ಮುಖ್ಯರಸ್ತೆಯ ಒಳಗೊಂಡು ರೈಲ್ವೆ ನಿಲ್ದಾಣ ಸ್ಥಾಪನೆಯಾಗಲಿದೆ. ಚನ್ನಹಳ್ಳಿ ಮಹಾಲಿಂಗಪ್ಪ ಅವರ ತೋಟದ ಬಳಿ ಜಿಪಿಎಸ್ ರೈಲ್ವೆ ನಿಲ್ದಾಣದ ಈಗಾಗಲೇ ಗುರುತಿಸಲಾಗಿದೆ. ಎಲ್ಲಾ ರೀತಿಯ ಭೂಸ್ವಾಧೀನ ರೈತರಿಗೆ ಪರಿಹಾರ ಕಾರ್ಯ ಮುಗಿದ ಮೇಲೆ ರೈಲ್ವೆ ಇಲಾಖೆ ಕಾಮಗಾರಿ ಪ್ರಾರಂಭವಾಗಲಿದೆ. ಭೂಸ್ವಾಧಿನ ಕಾರ್ಯವನ್ನು ಎರಡು ವರ್ಷದ ಒಳಗೆ ಪೂರ್ಣಗೊಳಿಸಲಾಗುವುದು. ಈ ಸಂದರ್ಭ ರೈಲ್ವೆ ಇಲಾಖೆ ಇಂಜಿನಿಯರ್ ಚೇತನ್, ಉಪ ತಹಶೀಲ್ದಾರ್ ಮಂಜುನಾಥ್, ಸರ್ವೆ ಇಲಾಖೆಯ ನವೀನ್, ಪುನೀತ್, ಮಿಥುನ್, ಸತೀಶ್ ಇದ್ದರು.

English summary
The land acquisition survey of the railway project, which has been the demand of the people of Shikharipur for many years, has begun today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X