ಶಿಕಾರಿಪುರದಲ್ಲಿ 75ರ ಯಡಿಯೂರಪ್ಪಗೆ 25ರ ಯುವಕನ ಸವಾಲು!
ಶಿವಮೊಗ್ಗ, ಏಪ್ರಿಲ್ 22 : ಶಿಕಾರಿಪುರದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ 25ವರ್ಷದ ಯುವಕರೊಬ್ಬರು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸುವ ಮೂಲಕ ಕ್ಷೇತ್ರದ ಜನರ ಗಮನ ಸೆಳೆದಿದ್ದಾರೆ.
ವಿನಯ್ ರಾಜಾವತ್ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಶಿಕಾರಿಪುರಕ್ಕೆ ಆಗಮಿಸಿ 2018ರ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ವಿನಯ್ ರಾಜಾವತ್ ಯಾರು? ಎಂದು ಕ್ಷೇತ್ರದ ಜನರು ಚರ್ಚೆ ಆರಂಭಿಸಿದ್ದಾರೆ.
ಬೆಂಗಳೂರಿನಿಂದ ಶನಿವಾರ ಹೆಲಿಕಾಪ್ಟರ್ ಮೂಲಕ ಶಿಕಾರಿಪುರಕ್ಕೆ ಆಗಮಿಸಿದ ವಿನಯ್ ರಾಜಾವತ್, ಹುಚ್ಚರಾಯಸ್ವಾಮಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ನಂತರ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿ, ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಿದರು.

ಯಾರು ವಿನಯ್ ರಾಜಾವತ್? : ವಿನಯ್ ರಾಜಾವತ್ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ. ಬಿಎಸ್‌ಸಿ ಪದವಿ ಪಡೆದಿರುವ ಇವರು ಸದ್ಯ, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವಿನಯ್ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಅಭಿಮಾನಿ.
ಶಿವಮೊಗ್ಗದ ಕುಂಚೇನಹಳ್ಳಿ ತಾಂಡದ ನಿವಾಸಿಯಾದ ವಿನಯ್, ಸಹ್ಯಾದ್ರಿ ಕಾಲೇಜು ಸ್ಟುಡೆಂಟ್ ಯೂನಿಯನ್ ಲೀಡರ್ ಆಗಿದ್ದರು. ಚಿತ್ರವೊಂದರಲ್ಲಿಯೂ ಅವರು ನಟಿಸಿದ್ದಾರೆ.
ಶಿಕಾರಿಪುರ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿ. ಎಚ್.ಟಿ.ಬಳಿಗಾರ್ ಜೆಡಿಎಸ್ ಅಭ್ಯರ್ಥಿ. ಜಿ.ಬಿ.ಮಾಲತೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ. ಆಮ್ ಆದ್ಮಿ ಪಕ್ಷದಿಂದ ಚಂದ್ರಕಾಂತ್ ರೇವಂಕರ್ ಎಂಬುವವರು ಕಣದಲ್ಲಿದ್ದಾರೆ.












Click it and Unblock the Notifications