ಶಿವಮೊಗ್ಗ : ಗೊಂದಲಕ್ಕೆ ತೆರೆ, ಡಾ.ಎಸ್.ಕೆ.ಶ್ರೀನಿವಾಸ್ ನಾಮಪತ್ರ ಸಿಂಧು
ಶಿವಮೊಗ್ಗ, ಏಪ್ರಿಲ್ 27 : 'ನನ್ನ ನಾಮಪತ್ರ ಸಿಂಧು ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ. ಆದ್ದರಿಂದ ಉಂಟಾಗಿದ್ದ ಗೊಂದಲ ನಿವಾರಣೆಯಾಗಿದೆ' ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಎಸ್.ಕೆ.ಶ್ರೀನಿವಾಸ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, '11 ತಿಂಗಳು ಸರ್ಕಾರಿ ವೈದ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಎರಡು ತಿಂಗಳ ಹಿಂದೆ ರಾಜೀನಾಮೆ ನೀಡಿದ್ದೇನೆ. ಆದರೆ, ನನ್ನ ರಾಜೀನಾಮೆ ಅಂಗೀಕಾರವಾಗಿಲ್ಲ ಎಂದು ಹೈಕೋರ್ಟ್ ಮೊರೆ ಹೋಗಿದ್ದರು' ಎಂದರು.
'ನ್ಯಾಯಾಲಯದ ಮೇಟ್ಟಿಲೇರಿದ ಕಾರಣ ನಾಮಪತ್ರ ಅಸಿಂಧುವಾಗಿದೆ ಎಂದು ಗೊಂದಲ ಹುಟ್ಟಿಕೊಂಡಿದೆ. ಆದರೆ, ನಾಮಪತ್ರ ಸಿಂಧುವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ' ಎಂದು ಸ್ಪಷ್ಟಪಡಿಸಿದರು.

ಡಾ.ಶ್ರೀನಿವಾಸ್ ಅವರ ನಾಮಪತ್ರ ಸಿಂಧುವಾಗಿರುವ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಪಲ್ಲವಿ ಅವರು ನಾಮಪತ್ರವನ್ನು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಜಿ.ಪಲ್ಲವಿ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
'ನನಗೆ ಟಿಕೆಟ್ ಸಿಗುವ ವಿಶ್ವಾಸ ವಿತ್ತು. ಆದರೆ, ವರಿಷ್ಠರು ಡಾ.ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಿದ್ದಾರೆ. ಅವರ ನಾಮಪತ್ರ ಅಸಿಂಧುವಾಗುತ್ತದೆ ಎಂಬ ಮಾತುಗಳು ಕೇಳಿಬಂದಿತ್ತು. ಆದ್ದರಿಂದ, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೆ' ಎಂದು ಜಿ.ಪಲ್ಲವಿ ಹೇಳಿದರು.












Click it and Unblock the Notifications