ಕಾಂಗ್ರೆಸ್ ಪ್ರಣಾಳಿಕೆ : ಶಿವಮೊಗ್ಗ ಜಿಲ್ಲೆಗೆ ಯಾವ ಭರವಸೆಗಳೇನು?

ಶಿವಮೊಗ್ಗ, ಏಪ್ರಿಲ್ 27 : ಕರ್ನಾಟಕ ಕಾಂಗ್ರೆಸ್ 2018ರ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ರಾಜ್ಯಕ್ಕೊಂದು ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಜಿಲ್ಲೆಗೊಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳೂರಿನಲ್ಲಿ ಶುಕ್ರವಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ಪ್ರತಿ ಜಿಲ್ಲೆಗೆ ಒಂದು ಪ್ರಣಾಳಿಕೆ ಮಾಡಲಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರಣಾಳಿಕೆಯಲ್ಲೇನಿದೆ?

* ರಾಜಾಕಾಲುವೆಗಳಲ್ಲಿ ನೀರಿನ ಹರಿವಿನ ಒತ್ತಡವನ್ನು ಕಡಿಮೆ ಮಾಡಲು ಮಳೆ ನೀರು ಕೊಯ್ಲಯ ಯೋಜನೆಯನ್ನು ನಗರದಲ್ಲಿ ಜಾರಿಗೊಳಿಸುವುದು.

* ಎಲ್ಲಾ ಸರ್ಕಾರಿ ಕಚೇರಿಗಳ ಮೇಲೆ ಸೋಲಾರ್ ಫಲಕ ಅಳವಡಿಕೆ. ನಗರದಲ್ಲಿ ಎಲ್ಲಾ ದೀಪಗಳನ್ನು ಎಲ್‌ಇಡಿಯಾಗಿ ಪರಿವರ್ತನೆ ಮಾಡುವುದು.

Karnataka elections : Congress manifesto for Shivamogga district

* ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚಿನ ಎಟಿಎಂಗಳನ್ನು ಸ್ಥಾಪನೆ ಮಾಡುವುದು. ಗ್ರಾಮ ಪಂಚಾಯಿತಿ ನೌಕರರು ಕಂಪ್ಯೂಟರ್ ಉಪಯೋಗಿಸುವಂತೆ ಉತ್ತೇಜಿಸಲು ತರಬೇತಿ ನೀಡುವುದು.

* ಎಲ್ಲಾ ಬೆಳೆಗಳಿಗೂ ನಿಗದಿತ ಬೆಲೆಯನ್ನು ನಿಗದಿ ಮಾಡುವುದು. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾದರೂ ರೈತರಿಗೆ ನಿಗದಿತ ಬೆಲೆ ಸಿಗಲಿದೆ.

* ಚಿಕ್ಕ ಸ್ಟೋರೆಜ್ ಯೂನಿಟ್ ನಿರ್ಮಾಣ ಮಾಡಲು ರೈತರಿಗೆ ಸಬ್ಸಿಡಿ ನೀಡುವುದು. ಕರಕುಶಲ ಉದ್ಯೋಗಗಳನ್ನು ಪ್ರೋತ್ಸಾಹಿಸಲು ಗ್ರಾಮದಲ್ಲಿ ಯುವಕರಿಗೆ ತರಬೇತಿ ನೀಡುವುದು.

* ಮಂಗಳೂರನ್ನು ಕರ್ನಾಟಕದ ಸಿಲಿಕಾನ್ ವ್ಯಾಪಿಯಾಗಿ ನಿರ್ಮಾಣ ಮಾಡುವುದು. ಬಿಪಿಓಗಳನ್ನು ಸ್ಥಾಪನೆ ಮಾಡುವುದು

* ಎರಡನೇ ಹಂತದ ಎಲ್ಲಾ ನಗರಗಳ ರಸ್ತೆಗಳನ್ನು ಅಭಿವೃದ್ಧಿ ಮಾಡುವುದು. ನಗರದ ಎಲ್ಲಾ ರಸ್ತೆಗಳನ್ನು 100 ಮೀಟರ್‌ನಷ್ಟು ಅಗಲ ಮಾಡುವುದು. ಚಿಕ್ಕ ರಸ್ತೆಗಳಲ್ಲಿ ಭಾರೀ ವಾಹನಗಳ ಸಂಚಾರವನ್ನು ರದ್ದುಗೊಳಿಸುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+