Soraba constituency; ಮತ್ತೆ ಎದುರಾಳಿಗಳಾದ ಬಂಗಾರಪ್ಪ ಪುತ್ರರು!
ಶಿವಮೊಗ್ಗ ಜಿಲ್ಲೆಯ ತಾಲೂಕುಗಳಲ್ಲಿ ಒಂದು ಸೊರಬ. ದಂಡಾವತಿ ನದಿ ತೀರದಲ್ಲಿರುವ ವಿಧಾನಸಭಾ ಕ್ಷೇತ್ರ. ಗುಡವಿ ಪಕ್ಷಿಧಾಮ, ಚಂದ್ರಗುತ್ತಿ ದೇವಾಲಯದ ಮೂಲಕ ಸೊರಬ ಪ್ರವಾಸೋದ್ಯಮ ಮತ್ತು ಧಾರ್ಮಿಕ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ. ಸೊರಬದ ಮೂಲ ಹೆಸರು ಸುರಭಿಪುರ. ಒಂದು ಸುರಭಿ (ಆಕಳು) ರಂಗನಾಥದೇವರಿಗೆ ಹಾಲಿನ ಅಭಿಷೇಕ ಮಾಡುತ್ತಿತ್ತು ಎಂದು ಇತಿಹಾಸ ಹೇಳುತ್ತದೆ. ರಾಜಕೀಯವಾಗಿ ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ನೀಡಿದ ಕ್ಷೇತ್ರವಿದು. ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸೊರಬದವರು.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಪುತ್ರರಾದ ಕುಮಾರ್ ಬಂಗಾರಪ್ಪ (ಬಿಜೆಪಿ), ಮಧು ಬಂಗಾರಪ್ಪ (ಕಾಂಗ್ರೆಸ್) ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇವರ ನಡುವಿನ ಸ್ಪರ್ಧೆಯಿಂದಾಗಿ ಪ್ರತಿ ಬಾರಿ ಚುನಾವಣೆ ಎದುರಾದಾಗಲೂ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತದೆ. ಮೊದಲು ಬಂಗಾರಪ್ಪ ಕುಟುಂಬದ ಹಿಡಿತದಲ್ಲಿಯೇ ಕ್ಷೇತ್ರವಿದೆ. 2008ರಲ್ಲಿ ಬಂಗಾರಪ್ಪ ಇಬ್ಬರು ಪುತ್ರರಿಗೂ ಸೋಲಿನ ರುಚಿ ತೋರಿಸಿ ಗೆದ್ದವರು ಮಾಜಿ ಸಚಿವ ಹರತಾಳು ಹಾಲಪ್ಪ. ಸದ್ಯ ಅವರು ಸಾಗರ ಕ್ಷೇತ್ರದ ಶಾಸಕರು. ಸೊರಬದ ಹಾಲಿ ಶಾಸಕರು ಕುಮಾರ್ ಬಂಗಾರಪ್ಪ.

1967ರಲ್ಲಿ ಸೊರಬ ಕ್ಷೇತ್ರ ರಚನೆಗೊಂಡಿತು. 12 ವಿಧಾನಸಭೆ ಚುನಾವಣೆ, ಒಂದು ಉಪ ಚುನಾವಣೆಗೆ ಕ್ಷೇತ್ರ ಸಾಕ್ಷಿಯಾಗಿದೆ. ಈ ಪೈಕಿ ಎಸ್. ಬಂಗಾರಪ್ಪ 7 ಬಾರಿ ಗೆದ್ದಿದ್ದಾರೆ. 1996ರಲ್ಲಿ ಎಸ್. ಬಂಗಾರಪ್ಪ ಲೋಕಸಭೆಗೆ ಸ್ಪರ್ಧಿಸಿದಾಗ ಪುತ್ರ ಕುಮಾರ್ ಬಂಗಾರಪ್ಪಗೆ ಕ್ಷೇತ್ರ ಬಿಟ್ಟುಕೊಟ್ಟರು. ಆಗ ನಡೆದ ಒಂದು ಉಪ ಚುನಾವಣೆ ಮತ್ತು ಮೂರು ಸಾರ್ವತ್ರಿಕ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಗೆಲುವು ಕಂಡಿದ್ದಾರೆ. 2013ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದಿದ್ದ ಬಂಗಾರಪ್ಪ ಎರಡನೇ ಪುತ್ರ ಮಧು ಬಂಗಾರಪ್ಪ ಗೆಲವು ಕಂಡಿದ್ದರು. 2008ರಲ್ಲಿ ಮಾತ್ರ ಬಂಗಾರಪ್ಪ ಮೂಲಕವೇ ರಾಜಕೀಯ ಆರಂಭಿಸಿದ ಹರತಾಳು ಹಾಲಪ್ಪ ಬಂಗಶರಪ್ಪ ಇಬ್ಬರು ಪುತ್ರರನ್ನು ಸೋಲಿಸಿದ್ದರು.
ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ನಡುವೆ ಕೌಟುಂಬಿಕವಾಗಿ ಹೇಗೆ ಹೊಂದಾಣಿಕೆ ಇಲ್ಲವೋ, ರಾಜಕೀಯದಲ್ಲಿಯೂ ಹಾಗೆ ಇದೆ. ಇಬ್ಬರು ಸಹ ಪರಸ್ಪರ ಎದುರಾಳಿಗಳು. 2018ರ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಕೊಂಚ ಬದಲಾವಣೆಯಾಗಿದೆ. ಮಧು ಬಂಗಾರಪ್ಪ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಆದರೂ ಸಹ ಚುನಾವಣೆಯಲ್ಲಿ ಬಿಜೆಪಿಯ ಕುಮಾರ್ ಬಂಗಾರಪ್ಪ, ಕಾಂಗ್ರೆಸ್‌ನ ಮಧು ಬಂಗಾರಪ್ಪ ಎದುರಾಳಿಗಳು ಆಗುವುದು ಖಚಿತವಾಗಿದೆ. ಇಬ್ಬರಿಗೂ ಅಧಿಕೃತವಾಗಿ ಪಕ್ಷದಿಂದ ಟಿಕೆಟ್ ಘೋಷಣೆಯಾಗಬೇಕು ಅಷ್ಟೇ.
ಕುಮಾರ್ VS ಮಧು ಬಂಗಾರಪ್ಪ; ಸೊರಬ ಕ್ಷೇತ್ರ 2004ರಿಂದ ಬಂಗಾರಪ್ಪ ಪುತ್ರರ ಸಹೋದರರ ಸವಾಲ್‌ಗೆ ಸಾಕ್ಷಿಯಾಗಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಒಟ್ಟಿಗೆ ಬಂದಾಗ ಬಂಗಾರಪ್ಪ ಕುಟುಂಬದ ನಡುವೆ ಜಟಾಪಟಿ ತಾರಕಕ್ಕೆ ಹೋಯಿತು. ಎಸ್. ಬಂಗಾರಪ್ಪ ಬಿಜೆಪಿ ಸೇರ್ಪಡೆಗೊಂಡು ಶಿವಮೊಗ್ಗ ಸಂಸದರಾಗಿ ಆಯ್ಕೆಗೊಂಡರು. ಸೊರಬದ ಬಿಜೆಪಿ ಟಿಕೆಟ್ ಅನ್ನು ಮಧು ಬಂಗಾರಪ್ಪಗೆ ಕೊಡಿಸಿದರು. ಆಗ ಅಸಮಾಧಾನಗೊಂಡ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಟಿಕೆಟ್ ಪಡೆದು ಸೊರಬದಲ್ಲಿ ಚುನಾವಣೆಗೆ ನಿಂತರು, 44,677 ಮತಗಳನ್ನು ಪಡೆದು 32,748 ಮತಗಳನ್ನು ಪಡೆದ ಬಿಜೆಪಿಯ ಮಧು ಬಂಗಾರಪ್ಪ ಸೋಲಿಸಿದರು.

ಸೊರಬ ಕ್ಷೇತ್ರದಲ್ಲಿ ಬಳಿಕ ಸಹೋದರರ ಸವಾಲು ಆರಂಭವಾಯಿತು. 2008ರಲ್ಲಿ ಸಹೋದರರ ಸವಾಲಿನಲ್ಲಿ ಕಾಂಗ್ರೆಸ್‌ನ ಕುಮಾರ್ ಬಂಗಾರಪ್ಪ 32,499, ಸಮಾಜವಾದಿ ಪಕ್ಷದ ಮಧು ಬಂಗಾರಪ್ಪ 31,135 ಮತಗಳನ್ನು ಪಡೆದರು. ಆದರೆ ಬಿಜೆಪಿಯ ಹರತಾಳು ಹಾಲಪ್ಪ 53,552 ಮತಗಳನ್ನು ಪಡೆದು ಇಬ್ಬರಿಗೂ ಸೋಲುಣಿಸಿದರು. 2013ರಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದ ಮಧು ಬಂಗಾರಪ್ಪ 58,541 ಮತಗಳನ್ನು ಪಡೆದು ಕೆಜೆಪಿ ಅಭ್ಯರ್ಥಿಯಾಗಿದ್ದ ಹರತಾಳು ಹಾಲಪ್ಪ (37,316) ಸೋಲಿಸಿ ಹಿಂದಿನ ಚುನಾವಣೆ ಸೇಡು ತೀರಿಸಿಕೊಂಡರು. ಕಾಂಗ್ರೆಸ್‌ನ ಕುಮಾರ್ ಬಂಗಾರಪ್ಪ 33,176 ಮತಗಳನ್ನು ಪಡೆದರು.
2018ರ ಚುನಾವಣೆಯಲ್ಲಿ ಸೊರಬದ ಕಣದಲ್ಲಿ ಬದಲಾವಣೆಯಾಯಿತು. ಹರತಾಳು ಹಾಲಪ್ಪ ಸಾಗರ ಕ್ಷೇತ್ರಕ್ಕೆ ಹೋಗಿ ಬಿಜೆಪಿ ಟಿಕೆಟ್ ಪಡೆದು ಗೆದ್ದು ಬಂದರು. ಕಾಂಗ್ರೆಸ್‌ನಲ್ಲಿದ್ದ ಕುಮಾರ್ ಬಂಗಾರಪ್ಪ ಬಿಜೆಪಿಗೆ ಬಂದರು, 72,091 ಮತಗಳನ್ನು ಪಡೆದು ಮತ್ತೆ ಗೆದ್ದು ಬಂದರು. ಜೆಡಿಎಸ್‌ನ ಮಧು ಬಂಗಾರಪ್ಪ 58,805 ಮತ ಪಡೆದು ಸೋತರು. 2019ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿಯಾಗಿದ್ದ ಮಧು ಬಂಗಾರಪ್ಪ ಮತ್ತೆ ಸೋಲು ಕಂಡರು. ಈಗ ಅವರು ಕಾಂಗ್ರೆಸ್ ಸೇರಿದ್ದು, ಈ ಬಾರಿಯ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಇನ್ನು 2028ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ 21,721 ಮತಗಳನ್ನು ಪಡೆದಿದ್ದ ರಾಜು. ಎಂ. ತಲ್ಲೂರ ಬಿಜೆಪಿ ಸೇರಿದ್ದಾರೆ. ಮಧು ಬಂಗಾರಪ್ಪ ಪಕ್ಷ ಬಿಟ್ಟ ಬಳಿಕ ಸೊರಬದಲ್ಲಿ ಜೆಡಿಎಸ್ ಟಿಕೆಟ್ ಯಾರಿಗೆ ಎಂಬುದು ಇನ್ನೂ ನಿಗೂಢ. ಯಾರೇ ಅಭ್ಯರ್ಥಿಯಾದರೂ ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ ನಡುವಿನ ಸ್ಪರ್ಧೆಯೇ ನಿರ್ಣಾಯಕ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹಾಗೆಂದು ಕುಮಾರ್ ಬಂಗಾರಪ್ಪ ಹಾದಿ ಸುಗಮವಾಗಿಲ್ಲ. ಸ್ವ ಪಕ್ಷದಲ್ಲೇ ಶಾಸಕರ ವಿರುದ್ಧ ಅಸಮಾಧಾನವಿದೆ. ಮೂಲ ಬಿಜೆಪಿಗರು, ವಲಸಿಗರು ಎಂಬ ವಿಚಾರ ಸೊರಬದಲ್ಲಿಯೂ ಚಾಲ್ತಿಯಲ್ಲಿದೆ.
ಸೊರಬ ಕ್ಷೇತ್ರದ ಒಟ್ಟು ಮತದಾರರು 191864. ಇವರಲ್ಲಿ ಪುರುಷರು 97,108 ಮತ್ತು ಮಹಿಳೆಯರು 94,756 ಆಗಿದೆ. ಕ್ಷೇತ್ರದಲ್ಲಿ ಸುಮಾರು 60 ಸಾವಿರದಷ್ಟು ಇರುವ ಈಡಿಗರು ನಿರ್ಣಾಯಕರಾಗಿದ್ದಾರೆ. 40 ಸಾವಿರದಷ್ಟು ಲಿಂಗಾಯತರು ಇದ್ದಾರೆ. ಈಡಿಗರು ಮೊದಲಿನಿಂದಲೂ ಬಂಗಾರಪ್ಪ ಪುತ್ರರ ಪರವಾಗಿಯೇ ಇದ್ದಾರೆ. 2018ರಲ್ಲಿ ಗೆದ್ದ ಕುಮಾರ್ ಬಂಗಾರಪ್ಪ ಕ್ಷೇತ್ರಕ್ಕೆ ಅನುದಾನ ತಂದು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದಾರೆ. ಈ ಬಾರಿ ಬಂಗಾರಪ್ಪ ಪುತ್ರರಲ್ಲಿ ಯಾರು ವಿಧಾನಸಭೆ ಪ್ರವೇಶಿಸುವರು? ಎಂದು ಕಾದು ನೋಡಬೇಕಿದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications