• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಾಳಕೊಪ್ಪದಲ್ಲಿ ಹಲವೆಡೆ ನಿಷೇಧಿತ ಸಂಘಟನೆ ಪರ ಗೋಡೆ ಬರಹ, ತನಿಖೆ

|
Google Oneindia Kannada News

ಶಿವಮೊಗ್ಗ, ಡಿ. 05: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ವಿದ್ಯಾರ್ಥಿ ವಿಭಾಗವಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಗೆ ಸೇರುವಂತೆ ಕೇಳುವ ಗೋಡೆ ಬರಹಗಳು ಶಿವಮೊಗ್ಗ ಜಿಲ್ಲೆಯಾದ್ಯಂತ ಅನೇಕ ಸ್ಥಳಗಳಲ್ಲಿ ಕಾಣಿಸಕೊಂಡಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಶಿರಾಳಕೊಪ್ಪ ಠಾಣೆಯಲ್ಲಿ ಈ ಬಗ್ಗೆ ಸುಮೊಟೋ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜಿಲ್ಲೆಯ ಶಿರಾಳಕೊಪ್ಪದ ಕನಿಷ್ಠ ಒಂಬತ್ತು ಸ್ಥಳಗಳಲ್ಲಿ ನೀಲಿ ಮತ್ತು ಕೆಂಪು ಬಣ್ಣದಲ್ಲಿ ಇಂಗ್ಲಿಷ್‌ನಲ್ಲಿ ಸಿಎಫ್‌ಐಗೆ ಸೇರಿ ಎಂದು ಎಂದು ಗೋಡೆಗಳ ಮೇಲೆ ಬರೆಯಲಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಗ್ರ ಶಾರೀಕ್‌ನ ಟಾರ್ಗೆಟ್‌ನಲ್ಲಿತ್ತು ಮಂಗಳೂರಿನ ಪ್ರಸಿದ್ಧ ದೇವಾಲಯಗಳು; ಸ್ಫೋಟಕ ಮಾಹಿತಿ ಇಲ್ಲಿದೆಉಗ್ರ ಶಾರೀಕ್‌ನ ಟಾರ್ಗೆಟ್‌ನಲ್ಲಿತ್ತು ಮಂಗಳೂರಿನ ಪ್ರಸಿದ್ಧ ದೇವಾಲಯಗಳು; ಸ್ಫೋಟಕ ಮಾಹಿತಿ ಇಲ್ಲಿದೆ

ಘಟನೆಯ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, "ಪಿಎಫ್‌ಐ ವಾಲ್ ಪೇಂಟಿಂಗ್ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.

ಶಿರಾಳಕೊಪ್ಪದಲ್ಲಿ ಪಿಎಫ್‌ಐ ವಿದ್ಯಾರ್ಥಿ ಸಂಘಟನೆ ಪರ ಗೋಡೆ ಬರಹ

ಶಿರಾಳಕೊಪ್ಪದಲ್ಲಿ ಪಿಎಫ್‌ಐ ವಿದ್ಯಾರ್ಥಿ ಸಂಘಟನೆ ಪರ ಗೋಡೆ ಬರಹ

ನವೆಂಬರ್ 28 ರಂದು ಶಿವಮೊಗ್ಗದಲ್ಲಿ ಇದೇ ರೀತಿಯ ಗೋಡೆ ಬರಹಗಳು ಪೊಲೀಸರಿಗೆ ಗಸ್ತು ತಿರುಗುತ್ತಿದ್ದಾಗ ಪತ್ತೆಯಾಗಿತ್ತು. ನಂತರ ಅದನ್ನು ಅಳಿಸಿ ಹಾಕಲಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂದಿನಿಂದ ಜಿಲ್ಲೆಯಲ್ಲಿ ಹೆಚ್ಚಿನ ಗೋಡೆ ಬರಹಗಳು ಪತ್ತೆಯಾಗುತ್ತಿವೆ.

"ನೀಲಿ ಮತ್ತು ಕೆಂಪು ಸ್ಪ್ರೇ ಪೇಂಟ್‌ನಲ್ಲಿ ಬರೆಯುವುದರ ಜೊತೆಗೆ ನಕ್ಷತ್ರವನ್ನು ಚಿತ್ರಿಸಲಾಗಿದೆ. ಹಳೆ ಪೆಟ್ರೋಲ್ ಬಂಕ್ ಪಕ್ಕ, ಬೋವಿ ಕಾಲೋನಿಗೆ ಹೋಗುವ ವಿದ್ಯುತ್ ಕಂಬ, ದೊಡ್ಡ ಬನದಕೇರಿಗೆ ಹೋಗುವ ಕ್ರಾಸ್ ಬಳಿಯ ಗೋಡೆ ಹಾಗೂ ವಿದ್ಯುತ್ ಕಂಬ, ಚಂದ್ರಪ್ಪ ಎಂಬುವವರ ಮನೆಯ ಕ್ರಾಸ್ ನ ವಿದ್ಯುತ್ ಕಂಬ, ಬಿಲಾಲ್ ಅವರ ಮನೆ ಬಳಿಯ ಗ್ಯಾರೇಜ್ ಗೋಡೆಯ ಮೇಲೆ, ದೊಡ್ಡ ಬಾಣದ ಕೇರಿ ರಸ್ತೆ ಮತ್ತು ಮಠದ ಕೇರಿ ರಸ್ತೆಯ ಬದಿಯ ಗೋಡೆಯ ಮೇಲೆ, ಫಾರೂಕ್ ಮತ್ತು ಬಿಲಾಲ್ ಅವರ ಮನೆಯ ಗೋಡೆಗಳ ಮೇಲೆ ಸಿಎಫ್‌ಐ ಸೇರಿ ಎಂದು ಬರಹ ಬರೆಯಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

ಪಿಎಫ್‌ಐ ನಿಷೇಧ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್

ಪಿಎಫ್‌ಐ ನಿಷೇಧ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್

ಕರ್ನಾಟಕ ಹೈಕೋರ್ಟ್ ಬುಧವಾರ ಪಿಎಫ್‌ಐ ಮೇಲಿನ ನಿಷೇಧವನ್ನು ಎತ್ತಿಹಿಡಿದಿತ್ತು. ಕೇಂದ್ರದ ಪಿಎಫ್‌ಐ ನಿಷೇಧ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು.

ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ರಾಜ್ಯದ ಪಿಎಫ್‌ಐ ಮುಖಂಡರೊಬ್ಬರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಪಿಎಫ್‌ಐ ಕಾರ್ಯಕರ್ತ ನಾಸೀರ್ ಪಾಷಾ ಎಂಬಾತ ತನ್ನ ಪತ್ನಿ ಮೂಲಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ಪ್ರಕಟಿಸಿದೆ. ನಾಸೀರ್ ಪಾಷಾ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪಿಎಫ್‌ಐ ಕಾನೂನುಬಾಹಿರ ಸಂಘಟನೆ ಎಂದ ಕೇಂದ್ರ ಸರ್ಕಾರ

ಪಿಎಫ್‌ಐ ಕಾನೂನುಬಾಹಿರ ಸಂಘಟನೆ ಎಂದ ಕೇಂದ್ರ ಸರ್ಕಾರ

ಸೆಪ್ಟೆಂಬರ್‌ನಲ್ಲಿ, ಕೇಂದ್ರವು ಪಿಎಫ್‌ಐ ಅನ್ನು 'ಕಾನೂನುಬಾಹಿರ ಸಂಘ' ಎಂದು ಘೋಷಿಸಿ, ಮುಂದಿನ ಐದು ವರ್ಷಗಳವರೆಗೆ ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳನ್ನು ನಿಷೇಧಿಸಿತು. ಜೊತೆಗೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ಅಧಿಕಾರವನ್ನು ನಡೆಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿತು.

ಐಎಸ್‌ನಂತಹ ಜಾಗತಿಕ ಭಯೋತ್ಪಾದಕ ಗುಂಪುಗಳೊಂದಿಗೆ ಪಿಎಫ್‌ಐ ಅಂತರರಾಷ್ಟ್ರೀಯ ಸಂಬಂಧಗಳಿವೆ ಎಂದು ಎನ್‌ಐಎ, ಜಾರಿ ನಿರ್ದೇಶನಾಲಯ ಮತ್ತು ರಾಜ್ಯ ಏಜೆನ್ಸಿಗಳು ಮತ್ತು ಪೊಲೀಸ್ ಪಡೆಗಳು ದೇಶಾದ್ಯಂತ ನಡೆಸಿದ ಅನೇಕ ದಾಳಿಗಳಲ್ಲಿ 100 ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಗೋಡೆ ಬರಹ ಪ್ರಕರಣದಲ್ಲಿ ಆರೋಪಿಯಾಗಿರುವ ಶಾರೀಕ್

ಗೋಡೆ ಬರಹ ಪ್ರಕರಣದಲ್ಲಿ ಆರೋಪಿಯಾಗಿರುವ ಶಾರೀಕ್

ಕೆಲ ವರ್ಷಗಳ ನಂತರ ಮಂಗಳೂರಿನಲ್ಲಿ ನಡೆದ ಇಂತಹದ್ದೇ ಪ್ರಕರಣದ ಆರೋಪಿ ಮೊಹಮ್ಮದ್ ಶಾರಿಕ್ (24) ಈಗ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಕಾರಣ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಆಟೋ ಸ್ಫೋಟಕ್ಕೆ ಕಾರಣವಾದ ಶಂಕಿತ ಆರೋಪಿ ಮೊಹಮ್ಮದ್ ಶಾರಿಕ್ ಅವರನ್ನು ಡಿಸೆಂಬರ್ 2022 ರಲ್ಲಿ ಬಂಧಿಸಲಾಗಿದೆ. ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಟ್ಟಡದ ಗೋಡೆಗಳ ಮೇಲೆ ಮತ್ತು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಗೋಡೆ ಬರಹ ಪ್ರಕರಣದಲ್ಲಿಯೂ ಈತ ಆರೋಪಿಯಾಗಿದ್ದಾರೆ.

ಆಗ ಶಾರಿಕ್ ತನ್ನ ತಂದೆಯ ಒಡೆತನದ ಬಟ್ಟೆ ಅಂಗಡಿಯಲ್ಲಿ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದು, ಗೋಡೆಯ ಮೇಲೆ ಗೀಚುಬರಹವನ್ನು ಬರೆಯು ಯೋಜನೆ ರೂಪಿಸಿದ್ದರು. "ಮೊದಲು ಆತ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಶಿಥಿಲವಾದ ಗೋಡೆಯ ಮೇಲೆ ಬರೆದಿದ್ದಾರೆ, ಅದನ್ನು ಯಾರೂ ಅಷ್ಟಾಗಿ ಗಮನಿಸಲಿಲ್ಲ. ಆದ್ದರಿಂದ, ಒಂದು ವಾರದ ನಂತರ ಆತ ಹೆಚ್ಚು ಪ್ರಮುಖವಾದ ಸ್ಥಳವನ್ನು ಆಯ್ಕೆ ಮಾಡಿ ಅಲ್ಲಿ ಗೋಡೆ ಬರಹ ಬರೆದಿದ್ದರು. ಅವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು" ಎಂದು ಅಧಿಕಾರಿ ಹೇಳಿದ್ದಾರೆ.

ಈಗ ಎರಡು ವರ್ಷಗಳ ನಂತರ, ಸೆಪ್ಟೆಂಬರ್‌ನಲ್ಲಿ ಮತ್ತೊಂದು ಭಯೋತ್ಪಾದನೆ ಸಂಬಂಧಿತ ಪ್ರಕರಣದಲ್ಲಿ ಶಾರಿಕ್‌ನ ಹೆಸರು ಕೇಳಿ ಬಂದಿದೆ. ಆಗಸ್ಟ್ 15 ರಂದು ಶಿವಮೊಗ್ಗದಲ್ಲಿ ಸಾವರ್ಕರ್ ಅವರ ಪೋಸ್ಟರ್ ಕುರಿತು ಘರ್ಷಣೆಯ ಸಂದರ್ಭದಲ್ಲಿ ನಡೆದ ಚೂರಿ ಇರಿತ ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾದ ವ್ಯಕ್ತಿಯ ಇಬ್ಬರು ಸದಸ್ಯರು ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಶಿವಮೊಗ್ಗ ಪೊಲೀಸರು ಸೆಪ್ಟೆಂಬರ್ 23 ರಂದು ಹೇಳಿದ್ದರು.

English summary
Join CFI Posters in multiple locations across Shivamogga district Shiralakoppa area. Police have launched a probe. Campus Front of India is a student wing of the banned Popular Front of India (PFI). know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X