ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಸದಸ್ಯರ ಅಡ್ಡಮತದಾನ, ಶಿವಮೊಗ್ಗ ಮೇಯರ್ ಹುದ್ದೆ ಜೆಡಿಎಸ್ ಪಾಲು

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಮಾರ್ಚ್ 3: ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಜೆಡಿಎಸ್ ನ ನಾಗರಾಜ ಕಂಕರಿ ಆಯ್ಕೆಯಾಗಿದ್ದಾರೆ.

35 ಜನ ಪಾಲಿಕೆ ಸದಸ್ಯರು, ಮೂರು ಜನ ಶಾಸಕರು, ಒಬ್ಬ ವಿಧಾನ ಪರಿಷತ್ ಸದಸ್ಯರನ್ನು ಒಳಗೊಂಡ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.

ಬಿಜೆಪಿಯಿಂದ ಸುನೀತಾ ಅಣ್ಣಪ್ಪ, ಕಾಂಗ್ರೆಸ್ ನಿಂದ ಎಸ್.ರಾಜಶೇಖರ್ ಹಾಗೂ ಜೆಡಿಎಸ್ ನ ನಾಗರಾಜ ಕಂಕರಿ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಇದರಲ್ಲಿ ಬಿಜೆಪಿಯ ಸುನೀತಾ ಅಣ್ಣಪ್ಪ 12ಮತಗಳನ್ನು ಪಡೆದರೆ, ಕಾಂಗ್ರೆಸ್ ನ 13 ಸದಸ್ಯರಲ್ಲಿ ರಾಜಶೇಖರ್ ಅವರಿಗೆ ಕೇವಲ 1 ಮತ ಮಾತ್ರ ಬಿದ್ದಿದೆ.

JDS Wins Shivamogga City Corporation Mayor Post

ಕಾಂಗ್ರೆಸ್ ಸದಸ್ಯರೆಲ್ಲರೂ ಜೆಡಿಎಸ್ ಅಭ್ಯರ್ಥಿ ನಾಗರಾಜ ಕಂಕರಿ ಅವರಿಗೆ ಮತ ಹಾಕಿದ ಪರಿಣಾಮ, 25 ಮತಗಳನ್ನು ಪಡೆದು ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಪ್ರಾದೇಶಿಕ ಆಯುಕ್ತ ಶಿವರಾಜ ಕಳಸದ್, ಜಿಲ್ಲಾಧಿಕಾರಿ ಎಂ.ಲೋಕೇಶ್, ಶಿವಮೊಗ್ಗ ಪಾಲಿಕೆ ಆಯುಕ್ತ ಮುಲೈ ಮುಹಿಲನ್ ಚುನಾವಣಾಧಿಕಾರಿಯಾಗಿ ಭಾಗಿಯಾಗಿದ್ದರು.

JDS Wins Shivamogga City Corporation Mayor Post

ಉಪ ಮೇಯರ್ ಆಗಿ ಕಾಂಗ್ರೆಸ್ ‌ನ ವಿಜಯಲಕ್ಷ್ಮೀ ಪಾಟೀಲ್

ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಉಪ ಮೇಯರ್ ಆಗಿ ವಿಜಯಲಕ್ಷ್ಮೀ ಪಾಟೀಲ್ ಆಯ್ಕೆಯಾಗಿದ್ದಾರೆ.

ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನ ವಿಜಯಲಕ್ಷ್ಮೀ ಪಾಟೀಲ್, ಬಿಜೆಪಿಯ ರೇಣುಕಾ ನಾಗರಾಜ್ ಕಣದಲ್ಲಿದ್ದರು. ಇದರಲ್ಲಿ 25 ಮತಗಳನ್ನು ಪಡೆದ ವಿಜಯಲಕ್ಷ್ಮೀ ಪಾಟೀಲ್ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

English summary
Nagaraj Kankari of JDS is the new Mayor of Shivamogga City Corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X