ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮುನ್ಸೂಚನೆ ನೀಡಿದ ಸಿಎಂ
ಶಿವಮೊಗ್ಗ, ಮಾರ್ಚ್ 03: ಮಂಡ್ಯದಲ್ಲಿ ನಡೆಯುತ್ತಿರುವ ರಾಜಕೀಯವನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ.ದೇವೇಗೌಡರ ಕುಟುಂಬದ ಕುಡಿ ಮಂಡ್ಯದಲ್ಲಿ ಸ್ಪರ್ಧೆ ಮಾಡಿದರೆ ಅನುಕೂಲವೆಂದು ಅಲ್ಲಿನವರು ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬಂದವರು ಹೋರಾಟದ ಮೂಲಕ ರಾಜಕೀಯ ಮಾಡುತ್ತಿದ್ದೇವೆ. ಯಾವ ಕಾರಣಕ್ಕೂ ನಾವು ಪಲಾಯಾನವಾದ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಎಂಥಹ ಕಷ್ಟ ಕಾಲದಲ್ಲೂ ಮಂಡ್ಯದ ಜನತೆ ಜನತಾದಳವನ್ನು ಬೆಂಬಲಿಸಿದೆ.ಕೆಲವು ವ್ಯಕ್ತಿಗಳು ಮಂಡ್ಯ ಜಿಲ್ಲೆಯ ಬಗ್ಗೆ ತಮಗಿರುವ ಅಭಿಮಾನದ ಬಗ್ಗೆ ಮಾತನಾಡುತ್ತಿದ್ದಾರೆ. ಮಂಡ್ಯದ ಋಣ ತೀರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಯಾರು ಎಷ್ಟು ಋಣ ತೀರಿಸಿದ್ದಾರೆ? ನೋಡಿದ್ದೇನೆ ಎಂದು ಟಾಂಗ್ ಕೊಟ್ಟರು.

ಮಂಡ್ಯದ ಶಾಸಕರು ಹಾಗೂ ನನ್ನ ಅಭಿಮಾನಿಗಳು ದೇವೇಗೌಡರ ಕುಡಿ ಮಂಡ್ಯದಲ್ಲಿ ಸ್ಪರ್ಧೆ ಮಾಡಿದರೆ ಜಿಲ್ಲೆಯ ಅಭಿವೃದ್ಧಿಯಾಗುತ್ತದೆ ಎಂದು ಹೇಳುತ್ತಿದ್ದಾರೆ.ಜಿಲ್ಲೆಯಲ್ಲಿ ಜನತಾದಳದ ಅಭ್ಯರ್ಥಿ ಕಣದಲ್ಲಿರುತ್ತಾರೆ. ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದ ಎಚ್ ಡಿಕೆ, ಯಾರೋ ಹೆದರಿಸುತ್ತಾರೆ ಅಂತ ಹೇಳಿ ನಮ್ಮ ಕುಟುಂಬ ಹೆದರುವುದಿಲ್ಲ. ಮಂಡ್ಯ ಜಿಲ್ಲೆಯ ಜನರ ಭಾವನೆ ನನಗೆ ಗೊತ್ತಿದೆ. ಮೈಸೂರಿನಲ್ಲೂ ಕೂಡ ನಿಖಿಲ್ ಕುಮಾರಸ್ವಾಮಿಯವರಿಗೆ ಅಭಿಮಾನಿಗಳು ಇದ್ದಾರೆ ಎಂದರು.
ಮಂಗನ ಕಾಯಿಲೆಗೆ ಬಜೆಟ್ ನಲ್ಲಿ 10ಕೋಟಿ ಅನುದಾನ ನೀಡಿದ್ದು, ಕಾಯಿಲೆ ಇನ್ಸುಲೆನ್ಸ್ ಕಂಡುಹಿಡಿಯಲು ಸೂಚಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications