ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ಆರಗ ಜ್ಞಾನೇಂದ್ರ ಬಗ್ಗೆ ತಿಳಿಯಬೇಕಾದ ಸಂಗತಿಗಳು

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್ 05; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆಯಾಗಿದೆ. ನಿರೀಕ್ಷೆಯಂತೆ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರಗೆ ಸಂಪುಟದಲ್ಲಿ ಸ್ಥಾನ ಲಭಿಸಿದೆ. ಬಹು ವರ್ಷ ತಾಳ್ಮೆಯಿಂದ ಕಾದಿದ್ದ ಜ್ಞಾನೇಂದ್ರಗೆ ಸಚಿವರಾಗುವ ಯೋಗ ಬಂದಿದೆ.

ಬುಧವಾರ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಆರಗ ಜ್ಞಾನೇಂದ್ರ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಆರಗ ಜ್ಞಾನೇಂದ್ರಗೆ ಯಾವ ಖಾತೆಯ ಹೊಣೆಯನ್ನು ವಹಿಸಲಾಗುತ್ತದೆ ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ.

ಮೊದಲ ಬಾರಿ ಸಚಿವರಾದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಪರಿಚಯ ಮೊದಲ ಬಾರಿ ಸಚಿವರಾದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಪರಿಚಯ

ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ಶಿವಮೊಗ್ಗಕ್ಕೆ ಸಿಕ್ಕಿದ್ದ ಮುಖ್ಯಮಂತ್ರಿ ಪಟ್ಟ ಕೈತಪ್ಪಿತ್ತು. ಈಗ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆ ಮಾಡಿದ್ದು ಶಿವಮೊಗ್ಗ ಜಿಲ್ಲೆಗೆ ಎರಡು ಸಚಿವ ಸ್ಥಾನಗಳು ಸಿಕ್ಕಿವೆ. ಕೆ. ಎಸ್. ಈಶ್ವರಪ್ಪ ಸಹ ಸಚಿವರಾಗಿ ಬೊಮ್ಮಾಯಿ ಸಂಪುಟ ಸೇರಿದ್ದಾರೆ.

ತೀರ್ಥಹಳ್ಳಿ ವಿಶೇಷ; ಸಿಎಂ, ಸ್ಪೀಕರ್‌ ಎಲ್ಲಾ ಹುದ್ದೆ ಸಿಕ್ಕಿದೆ ಕ್ಷೇತ್ರದ ಶಾಸಕರಿಗೆ ತೀರ್ಥಹಳ್ಳಿ ವಿಶೇಷ; ಸಿಎಂ, ಸ್ಪೀಕರ್‌ ಎಲ್ಲಾ ಹುದ್ದೆ ಸಿಕ್ಕಿದೆ ಕ್ಷೇತ್ರದ ಶಾಸಕರಿಗೆ

2013ರ ಚುನಾವಣೆ ಬಳಿಕ ತೀರ್ಥಹಳ್ಳಿಗೆ ಸಚಿವ ಸ್ಥಾನ ಸಿಕ್ಕಿತ್ತು. ಕಿಮ್ಮನೆ ರತ್ನಾಕರ್ ಶಿಕ್ಷಣ ಸಚಿವರಾಗಿದ್ದರು. ಈಗ ಪುನಃ ಕ್ಷೇತ್ರಕ್ಕೆ ಸಚಿವ ಸ್ಥಾನ ಒಲಿದು ಬಂದಿದೆ. 40 ವರ್ಷಕ್ಕೂ ಅಧಿಕ ಕಾಲ ಪಕ್ಷಕ್ಕಾಗಿ ದುಡಿದ ಆರಗ ಜ್ಞಾನೇಂದ್ರ ಸಚಿವರಾಗಿದ್ದಾರೆ.

ಬಸವರಾಜ ಬೊಮ್ಮಾಯಿ ಸಂಪುಟ; ಬೆಂಗಳೂರಿಗೆ 7 ಸಚಿವ ಸ್ಥಾನ ಬಸವರಾಜ ಬೊಮ್ಮಾಯಿ ಸಂಪುಟ; ಬೆಂಗಳೂರಿಗೆ 7 ಸಚಿವ ಸ್ಥಾನ

ಆರಗ ಜ್ಞಾನೇಂದ್ರ ಕುಟುಂಬ ಪರಿಚಯ

ಆರಗ ಜ್ಞಾನೇಂದ್ರ ಕುಟುಂಬ ಪರಿಚಯ

ಆರಗ ಜ್ಞಾನೇಂದ್ರ 1951ರ ಮಾರ್ಚ್ 15ರಂದು ಜನಿಸಿದರು. ತೀರ್ಥಹಳ್ಳಿ ತಾಲೂಕು ಅಗ್ರಹಾರ ಹೋಬಳಿ ಆರಗ ಪಂಚಾಯತ್ ಹಿಸಣ ಗ್ರಾಮದ ರಾಮಣ್ಣ ಗೌಡ ಮತ್ತು ಚಿನ್ನಮ್ಮ ದಂಪತಿಯ ಒಂಭತ್ತು ಮಕ್ಕಳಲ್ಲಿ ಮೊದಲನೆಯವರು.

ಪ್ರಾಥಮಿಕ ವಿದ್ಯಭ್ಯಾಸ ಆರಗ ಗ್ರಾಮದಲ್ಲಿ ಪೂರ್ಣಗೊಳಿಸಿದರು. ಕುಟುಂಬಕ್ಕೆ ಆರ್ಥಿಕ ಸಮಸ್ಯೆ ಇದ್ದಿದ್ದರಿಂದ ವಿದ್ಯಭ್ಯಾಸ ಮೊಟಕುಗೊಳಿಸುವ ಯೋಚನೆಯಲ್ಲಿದ್ದರು. ಆಗ RSS ಪ್ರಮುಖರಾದ ತಾರಗೊಳ್ಳಿ ನಾಗರಾಜ್ ರಾವ್ ಸಂಪರ್ಕಕ್ಕೆ ಬಂದರು. ಶಿಕ್ಷಣ ಮುಂದುವರೆಯಿತು. ಬಿ.ಕಾಂ ಪದವಿ ಪಡೆದರು.

ಜ್ಞಾನೇಂದ್ರ ಪತ್ನಿ ಪ್ರಫುಲ್ಲಾ. ಮಗ ಅಭಿನಂದನ್, ಪತ್ನಿ ಶೃತಿ ಅವರೊಂದಿಗೆ ಗುಡ್ಡೇಕೊಪ್ಪದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಜ್ಞಾನೇಂದ್ರ ಮಗಳು ಅನನ್ಯಾ ಐಎಫ್ಎಸ್ ಅಧಿಕಾರಿ ಸಮರ್ಥ್ ಜೊತೆ ವಿವಾಹವಾಗಿ ತಮಿಳುನಾಡಿನ ಮಧುರೈನಲ್ಲಿದ್ದಾರೆ.

ಸಂಘಟನೆ, ತುರ್ತು ಪರಿಸ್ಥಿತಿ

ಸಂಘಟನೆ, ತುರ್ತು ಪರಿಸ್ಥಿತಿ

ವಿದ್ಯಾರ್ಥಿ ದಿಸೆಯಿಂದ RSS ಸಂಪರ್ಕ ಹೊಂದಿದ್ದ ಆರಗ ಜ್ಞಾನೇಂದ್ರ RSS ಶಾಖೆಯ ಮುಖ್ಯ ಶಿಕ್ಷಕನಾಗಿ ಜವಾಬ್ದಾರಿ ನಿಭಾಯಿಸಿದ್ದರು. ತುರ್ತು ಪರಿಸ್ಥಿತಿ ಸಂದರ್ಭ ಸರ್ಕಾರದ ನಡೆ ವಿರುದ್ಧ ಹೋರಾಟ ನಡೆಸಿದರು. ಈ ವೇಳೆ ಇವರನ್ನು ಬಂಧಿಸಿ, ಆರು ತಿಂಗಳು ಜೈಲಿನಲ್ಲಿ ಇರಿಸಲಾಯಿತು.
ಸಂಘಟನೆ, ಹೋರಾಟದ ಜೊತೆಗೆ ಆರಗ ಜ್ಞಾನೇಂದ್ರ ಅವರು ರಾಜಕೀಯದಲ್ಲಿ ಸಕ್ರಿಯವಾದರು. ತಾಲೂಕು ಬೋರ್ಡ್ ಚುನಾವಣೆಗೆ ಸ್ಪರ್ಧಿಸಿದರು.

ಮೊದಲ ಚುನಾವಣೆಯಲ್ಲಿ ಸೋಲು

ಮೊದಲ ಚುನಾವಣೆಯಲ್ಲಿ ಸೋಲು

1983ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯ ಅಖಾಡಕ್ಕಿಳಿದರು. ಆದರೆ ಎರಡು ಸಾವಿರ ಮತಗಳ ಅಂತರದಲ್ಲಿ ಸೋಲು ಕಾಣುವಂತಾಯಿತು. 1985, 1989ರಲ್ಲೂ ಆರಗ ಜ್ಞಾನೇಂದ್ರಗೆ ಸತತ ಸೋಲಾಯಿತು. ಸಾಲು ಸಾಲು ಸೋಲುಗಳಾದರೂ ಆರಗ ಜ್ಞಾನೇಂದ್ರ ಎದೆಗುಂದಲಿಲ್ಲ. ಪಕ್ಷ ಸಂಘಟನೆ ಮಾಡುತ್ತ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು. ಬಿಜೆಪಿಯ ಜಿಲ್ಲಾ ಅಧ್ಯಕ್ಷರಾದರು.

ಈ ನಡುವೆ ಜಿಲ್ಲಾ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಿದರು. ಅಲ್ಲಿ ಗೆಲುವು ಸಾಧಿಸಿದರು. ಇದೇ ವೇಳೆ ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕರಾದರು. ಶಿಮುಲ್ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿಭಾಯಿಸಿದರು.

1994ರಲ್ಲಿ ಗೆಲವು ಕಂಡರು

1994ರಲ್ಲಿ ಗೆಲವು ಕಂಡರು

1994ರಲ್ಲಿ ತೀವ್ರ ಜಿದ್ದಾಜಿದ್ದಿಯ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ಗೆಲುವು ಸಾಧಿಸಿದರು. ಎರಡು ಭಾರಿ ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಡಿ.ಬಿ. ಚಂದ್ರೇಗೌಡರನ್ನು ಸೋಲಿಸಿದ್ದರು.

ಒಮ್ಮೆ ಗೆದ್ದವರು ತೀರ್ಥಹಳ್ಳಿ ಪುನಃ ಗೆಲ್ಲವುದಿಲ್ಲ ಎಂಬ ನಂಬಿಕೆ ಇತ್ತು. ಇದನ್ನು ಹುಸಿಗೊಳಿಸಿ 1999 ಮತ್ತು 2004ರಲ್ಲಿ ಆರಗ ಜ್ಞಾನೇಂದ್ರ ಗೆಲುವು ಸಾಧಿಸಿದರು. 2008 ಮತ್ತು 2013ರಲ್ಲಿ ಕಿಮ್ಮನೆ ರತ್ನಾಕರ್ ವಿರುದ್ಧ ಸೋಲನುಭವಿಸಿದರು.

2018ರ ಚುನಾವಣೆ ತೀರ್ಥಹಳ್ಳಿ ಕ್ಷೇತ್ರದ ಪಾಲಿಗೆ ಅತ್ಯಂತ ಜಿದ್ದಾಜಿದ್ದಿಯಿಂದ ಕೂಡಿತ್ತು. ಕಾಂಗ್ರೆಸ್‌ನಿಂದ ಕಿಮ್ಮನೆ ರತ್ನಾಕರ್, ಜೆಡಿಎಸ್‌ನಿಂದ ಆರ್. ಎಂ. ಮಂಜುನಾಥಗೌಡ ಬಿಜೆಪಿಯ ಆರಗ ಜ್ಞಾನೇಂದ್ರಗೆ ಎದುರಾಳಿಯಾಗಿದ್ದರು. ತ್ರಿಕೋನ ಸ್ಪರ್ಧೆಯಲ್ಲಿ ಆರಗ ಜ್ಞಾನೇಂದ್ರ ಗೆದ್ದು ಬೀಗಿದರು. 22 ಸಾವಿರ ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದರು.

ರೈತ ಮೋರ್ಚಾಯಿಂದ ಹೌಸಿಂಗ್ ಬೋರ್ಡ್ ತನಕ

ರೈತ ಮೋರ್ಚಾಯಿಂದ ಹೌಸಿಂಗ್ ಬೋರ್ಡ್ ತನಕ

ಶಾಸಕರಾದ ಬಳಿವು ಆರಗ ಜ್ಞಾನೇಂದ್ರ ಪಕ್ಷದ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷರಾಗಿದ್ದರು. ಅಡಕೆ ಬೆಳೆಗಾರರ ಪರಿವಾಗಿ ಹೋರಾಟಗಳನ್ನು ನಡೆಸಿದರು. ಕೇಂದ್ರ ಸರ್ಕಾರದವರೆಗೆ ರೈತರ ನಿಯೋಗ ಕರೆದೊಯ್ದರು.

ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಅಡಕೆ ಬೆಳೆಗಾರರ ಕಾರ್ಯಪಡೆ ಅಧ್ಯಕ್ಷರಾದರು. ಹೌಸಿಂಗ್ ಬೋರ್ಡ್ ಜವಾಬ್ದಾರಿಯನ್ನೂ ಇವರಿಗೆ ಹೆಗಲಿಗೆ ಸರ್ಕಾರ ವಹಿಸಿತ್ತು. ಈಗ ಆರಗ ಜ್ಞಾನೇಂದ್ರ ಅವರು ಸಚಿವರಾಗಿದ್ದಾರೆ. ಅವರ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರಿಗೆ ಇದು ಉತ್ಸಾಹ ಹೆಚ್ಚಿಸಿದೆ.

English summary
Thirthahalli MLA Araga Jnanendra joined Karnataka chief minister Basavaraj Bommai cabinet on August 4, 2021. Here are the interesting information on Araga Jnanendra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X