ಕೊಳಕ ಮಂಡಲವನ್ನು ನುಂಗಿ ಹೆಬ್ಬಾವಿಗೆ ಸೆಡ್ಡು ಹೊಡೆದ ನಾಗರಾಜ!
ಶಿವಮೊಗ್ಗ, ನವೆಂಬರ್.24:ಹೆಬ್ಬಾವೊಂದು ಹೊರತುಪಡಿಸಿ ಉಳಿದೆಲ್ಲಾ ಉರಗಗಳು ಪಕ್ಷಿ, ಮೊಟ್ಟೆ, ಇತರೆ ಹುಳ ಉಪ್ಪಟ್ಟೆಯನ್ನು ಆಹಾರವಾಗಿ ಸೇವಿಸುವುದು ಸಹಜ. ಆದರೆ ಇಲ್ಲೊಂದು ಪ್ರಕರಣ ಅಪರೂಪವೆಂಬಂತೆ ನಾಗರಹಾವು ಕೊಳಕ ಮಂಡಲ ಹಾವನ್ನು ನುಂಗಿ ಹೆಬ್ಬಾವಿಗೆ ಸೆಡ್ಡು ಹೊಡೆದಿದೆ.
ಹೌದು, ಸೋಮಿನಕೊಪ್ಪದ ಬನಶಂಕರಿ ಬಡಾವಣೆಯಲ್ಲಿರುವ ದಾಮೋದರ್ ಹರಿಣಾಕ್ಷಿಯವರ ಮನೆಯ ಗಾರ್ಡನ್ ನಲ್ಲಿ 5.5 ಅಡಿ ಉದ್ದದ ಗಂಡು ನಾಗರ ಹಾವು 3.5 ಅಡಿ ಉದ್ದದ ಕೊಳಕ ಮಂಡಲವನ್ನು ನುಂಗಿ ಮಲಗಿತ್ತು.
ಆಗ ದಾಮೋದರ್ ಅವರು ಹಾವು ಕಂಡಾಕ್ಷಣ ಉರಗ ತಜ್ಞ ಸ್ನೇಕ್ ಕಿರಣ್ ಗೆ ಫೋನ್ ಮಾಡಿದ್ದಾರೆ. ಆ ನಂತರ ಬಂದ ಸ್ನೇಕ್ ಕಿರಣ್ ನಾಗರ ಹಾವು ಹಿಡಿಯಲು ಮುಂದಾಗಿದ್ದಾರೆ.

ಹಾವು ಹಿಡಿಯುವ ವೇಳೆಯಲ್ಲಿ ನಾಗರ ಹಾವಿನ ಬಾಯಿಯಲ್ಲಿ ಇನ್ನೊಂದು ಬಾಲ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತುಕೊಂಡ ಸ್ನೇಕ್ ಕಿರಣ್ ನಾಗರ ಹಾವಿಗೆ ಸುಧಾರಿಸಿಕೊಳ್ಳಲು ಮನೆಯ ಗೇಟ್ ಬಳಿ ಬಿಟ್ಟಿದ್ದಾರೆ. ತಕ್ಷಣವೇ ನಾಗರ ಹಾವು ಕೊಳಕ ಮಂಡಲವನ್ನು ಹೊರಗೆ ಬಿಟ್ಟಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಉರಗ ತಜ್ಞ ಸ್ನೇಕ್ ಕಿರಣ ಬಹಳ ಅಪರೂಪದ ದೃಶ್ಯ ಇದು. ಆಹಾರದ ಕೊರತೆಯಿಂದಾಗಿ ನಾಗರ ಹಾವು ಕೊಳಕ ಮಂಡಲ ನುಂಗಿರ ಬಹುದು ಎಂಬ ಮಾಹಿತಿ ನೀಡಿದ್ದಾರೆ.












Click it and Unblock the Notifications