ಹರ್ಷನ ಕುಟುಂಬಕ್ಕೆ 5 ಲಕ್ಷ ರೂ. ವೈಯಕ್ತಿಕ ಪರಿಹಾರ ಘೋಷಿಸಿದ ಎಂ.ಪಿ. ರೇಣುಕಾಚಾರ್ಯ

ಶಿವಮೊಗ್ಗ, ಫೆಬ್ರವರಿ 22: ಶಿವಮೊಗ್ಗದಲ್ಲಿ ಭಾನುವಾರ ರಾತ್ರಿ ಭೀಕರವಾಗಿ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು. ಆದರೆ ಇದೀಗ ಅದನ್ನು 5 ಲಕ್ಷ ರೂ.ಗೆ ಏರಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ, "ಹರ್ಷನ ಸಾವನ್ನು ನಾವು ವಾಪಾಸ್ ತರಲು ಸಾಧ್ಯವಿಲ್ಲ. ಹರ್ಷ ಕುಟುಂಬಕ್ಕೆ ನಿನ್ನೆ ವೈಯಕ್ತಿಕವಾಗಿ 2 ಲಕ್ಷ ರೂ. ಘೋಷಿಸಿದ್ದೆ. ಈಗ ವೈಯಕ್ತಿಕವಾಗಿ 5 ಲಕ್ಷ ರೂ. ಮತ್ತು ಹೊನ್ನಾಳಿ ಬಿಜೆಪಿಯಿಂದ 1 ಲಕ್ಷ ರೂ. ಒಟ್ಟು 6 ಲಕ್ಷ ರೂಪಾಯಿ ಪರಿಹಾರವನ್ನು ಗುರುವಾರ ಸಂಜೆ ಶಿವಮೊಗ್ಗದ ಹರ್ಷನ ಮನೆಗೆ ಹೋಗಿ ಪರಿಹಾರ ನೀಡಿ, ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುತ್ತೇನೆ'' ಎಂದು ತಿಳಿಸಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಹಿಂದೂಪರ ಕಾರ್ಯಕರ್ತ ಹರ್ಷನ ಕೊಲೆಯನ್ನು ನಾನು ಖಂಡಿಸುತ್ತೇನೆ. ಶಿವಮೊಗ್ಗದಲ್ಲಿ ಹರ್ಷನ ಹತ್ಯೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಎನ್ಐಎ ತನಿಖೆ ನಡೆಸಲು ಸಿಎಂ ಬಸವರಾಜ ಬೊಮ್ಮಾಯಿ ಬಳಿ ಮನವಿ ಮಾಡುತ್ತೇನೆ. ಕೊಲೆ ಮಾಡಿದವರನ್ನು ಎನ್‌ಕೌಂಟರ್ ಮಾಡಬೇಕು," ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

Shivamogga: Honnali MLA MP Renukacharya Announces Rs 5 Lakh Compensation to Kin of Harsha

"ಹರ್ಷನ ಕುಟುಂಬದ ಕಷ್ಟ ನೋಡಿ ನನಗೆ ತುಂಬಾ ನೋವಾಗಿದೆ. ನನ್ನ ವೈಯಕ್ತಿಕವಾಗಿ ಆರು ಲಕ್ಷ ನೀಡುತ್ತೇನೆ. ಇದು ರಾಜಕೀಯ ಹೇಳಿಕೆ ಅಲ್ಲ. ನಮ್ಮ ರಾಜ್ಯದಲ್ಲಿ 15ಕ್ಕೂ ಹೆಚ್ಚು ಜನರ ಹತ್ಯೆಯಾಗಿದೆ. ನಮ್ಮಲ್ಲಿರುವ ಎಲ್ಲಾ ಮುಸಲ್ಮಾನರು ದೇಶದ್ರೋಹಿಗಳಲ್ಲ. ಪಾಕಿಸ್ತಾನ್ ಜಿಂದಾಬಾದ್ ಎನ್ನುವವರು ದೇಶದ್ರೋಹಿಗಳು," ಎಂದರು.

"ಮಹಾತ್ಮ ಗಾಂಧಿಯಂತೆ ನಮ್ಮದು ಮೃದು ಧೋರಣೆ. ತಾಕತ್ ಇದ್ದರೆ ದಾಳಿ ಮಾಡಿ ನಾವು ನೋಡ್ಕೋತ್ತೀವಿ. ಗುರುವಾರ ನಾನು ಶಿವಮೊಗ್ಗಕ್ಕೆ ಭೇಟಿ ಪರಿಹಾರ ಕೊಡುತ್ತೇನೆ," ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಸವಾಲೆಸೆದಿದ್ದಾರೆ.

Shivamogga: Honnali MLA MP Renukacharya Announces Rs 5 Lakh Compensation to Kin of Harsha

ಮಾತು ಮುಂದುವರೆಸಿದ ಶಾಸಕ ಎಂ.ಪಿ. ರೇಣುಕಾಚಾರ್ಯ, "ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು. ಈಶ್ವರಪ್ಪ ಅಪ್ಪಟ ದೇಶಭಕ್ತ. ದೇಶದ್ರೋಹಿಗಳಿಂದ ಈ ಬರ್ಬರ ಹತ್ಯೆ ಆಗಿದೆ. ಮತ್ತೆ ಮರುಕಳಿಸಿದರೆ ನಾವು ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ," ಎಂದು ಎಚ್ಚರಿಸಿದರು.

Shivamogga: Honnali MLA MP Renukacharya Announces Rs 5 Lakh Compensation to Kin of Harsha

ನನಗೆ ಶಾಸಕ ಸ್ಥಾನ ಮುಖ್ಯ ಅಲ್ಲ ಹಿಂದುತ್ವ ಮುಖ್ಯ. ಪೂರ್ಣ ತನಿಖೆ ಆದ ಮೇಲೆ ಎಲ್ಲಾ ಸತ್ಯ ಹೊರ ಬರುತ್ತದೆ. ಹಿಂದು ಯುವಕರ ಮೇಲೆ ಸಂಚು ಮಾಡಲಾಗಿದೆ. ಭಾರತ ಮಾತೆ ಫೋಟೋ ಹಾಕಿದವರ ಮೇಲೇ ಈ ರೀತಿ ನಡೆಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+