ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ, ಓಂ ಶಕ್ತಿ ಯಾತ್ರೆಯಿಂದ ಬಂದವರು ಹೋಂ ಕ್ವಾರಂಟೈನ್

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜನವರಿ 05; ಕೆಲವು ತಿಂಗಳಿಂದ ತಗ್ಗಿದ್ದ ಕೋವಿಡ್ ಪ್ರಕರಣಗಳು ನಿಧಾನಕ್ಕೆ ಹೆಚ್ಚಳವಾಗುತ್ತಿವೆ. ಮೂರನೇ ಅಲೆ ಬಗ್ಗೆ ಜನರಲ್ಲಿ ಆತಂಕ ಮೂಡಿದೆ. ಈ ಮಧ್ಯೆ ಓಂ ಶಕ್ತಿ ದರ್ಶನಕ್ಕೆ ತೆರಳಿದ್ದ ಸಾವಿರಾರು ಮಹಿಳೆಯರು ಇವತ್ತು ಶಿವಮೊಗ್ಗಕ್ಕೆ ಮರಳುತ್ತಿದ್ದಾರೆ. ಇದು ಕೋವಿಡ್ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮತ್ತೊಂದೆಡೆ ಓಂ ಶಕ್ತಿಗೆ ತೆರಳಿದ್ದ ಮಹಿಳೆಯರು ಶಿವಮೊಗ್ಗಕ್ಕೆ ಪ್ರವೇಶಿಸುತ್ತಿದ್ದಂತೆ ಸ್ಕ್ರೀನಿಂಗ್ ಕಾರ್ಯ ನಡೆಸಲಾಗುತ್ತಿದೆ.

ತಮಿಳುನಾಡಿನಿಂದ ಶಿವಮೊಗ್ಗಕ್ಕೆ ಮರಳುತ್ತಿರುವ ಬಸ್ಸುಗಳನ್ನು ಸಹ್ಯಾದ್ರಿ ಕಾಲೇಜು ಬಳಿ ತಡೆದು ತಪಾಸಣೆ ನಡೆಸಲಾಗುತ್ತಿದೆ. ಬಸ್ಸಿನಲ್ಲಿರುವ ಮಹಿಳೆಯರ ಸ್ಕ್ರೀನಿಂಗ್ ಕಾರ್ಯ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ತಪಾಸಣೆ ನಡೆಸುತ್ತಿದ್ದಾರೆ.

ಶಿವಮೊಗ್ಗದಿಂದ ಪ್ರತಿ ವರ್ಷ ಸಾವಿರಾರು ಮಹಿಳೆಯರು ಓಂ ಶಕ್ತಿ ಮಾಲೆ ಧರಿಸಿಕೊಂಡು ದೇವರ ದರ್ಶನಕ್ಕೆ ತೆರಳುತ್ತಾರೆ. ತಮಿಳುನಾಡಿನ ಮೇಲ್ ಮರತ್ತೂರಿಗೆ ಧಾರ್ಮಿಕ ಪ್ರವಾಸ ಕೈಗೊಂಡು ಮರಳುತ್ತಾರೆ. ಈ ಭಾರಿ ಶಿವಮೊಗ್ಗದಿಂದ ಸುಮಾರು 5 ಸಾವಿರ ಮಹಿಳೆಯರು ಓಂ ಶಕ್ತಿ ದರ್ಶನಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಡಿಸೆಂಬರ್ 31ರಂದು ಪ್ರವಾಸ ಆರಂಭಿಸಿದ್ದ ಮಹಿಳೆಯರು ಇವತ್ತು ಹಿಂತಿರುಗುತ್ತಿದ್ದಾರೆ.

ಭಾರತ; 50 ಸಾವಿರದ ಗಡಿ ದಾಟಿದ ಹೊಸ ಕೋವಿಡ್ ಪ್ರಕರಣಗಳು ಭಾರತ; 50 ಸಾವಿರದ ಗಡಿ ದಾಟಿದ ಹೊಸ ಕೋವಿಡ್ ಪ್ರಕರಣಗಳು

Home quarantine

ಮಂಡ್ಯದಲ್ಲಿ ಪಾಸಿಟಿವ್; ಓಂ ಶಕ್ತಿ ದರ್ಶನ ಪಡೆದು ಮಂಡ್ಯ ಜಿಲ್ಲೆಗೆ ಮರಳಿದ 30ಕ್ಕೂ ಅಧಿಕ ಮಹಿಳೆಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇದು ಶಿವಮೊಗ್ಗ ಜಿಲ್ಲೆಯ ಜನರಲ್ಲಿ ಭೀತಿಗೆ ಕಾರಣವಾಗಿದೆ. ಹಾಗಾಗಿ ಈ ಮಹಿಳೆಯರನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಕೋವಿಡ್ ಕೇರ್ ಸೆಂಟರ್ ಮತ್ತೆ ತೆರೆಯಲಿದೆ ಬಿಬಿಎಂಪಿ ಕೋವಿಡ್ ಕೇರ್ ಸೆಂಟರ್ ಮತ್ತೆ ತೆರೆಯಲಿದೆ ಬಿಬಿಎಂಪಿ

ಸಹ್ಯಾದ್ರಿ ಕಾಲೇಜು ಬಳಿ ಸ್ಕ್ರೀನಿಂಗ್; ಶಿವಮೊಗ್ಗ, ಭದ್ರಾವತಿ ಡಿಪೋದಿಂದ ಸುಮಾರು ನೂರು ಬಸ್ಸುಗಳಲ್ಲಿ ಮಹಿಳೆಯರು ಓಂ ಶಕ್ತಿ ದರ್ಶನಕ್ಕೆ ತೆರಳಿದ್ದರು. ಅವರೆಲ್ಲ ಇವತ್ತು ಬೆಳಗ್ಗೆಯಿಂದ ಶಿವಮೊಗ್ಗಕ್ಕೆ ಹಿಂತಿರುಗುತ್ತಿದ್ದಾರೆ. ಹಾಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಓಂ ಶಕ್ತಿ ದರ್ಶನಕ್ಕೆ ತೆರಳಿದ್ದವರ ಬಸ್ಸುಗಳು ಬರುತ್ತಿದ್ದಂತೆ, ಅವುಗಳನ್ನು ಸಹ್ಯಾದ್ರಿ ಕಾಲೇಜು ಬಳಿ ತಡೆದು ನಿಲ್ಲಿಸಲಾಗುತ್ತಿದೆ. ಬಸ್ಸಿನಲ್ಲಿರುವ ಪ್ರತಿ ಮಹಿಳೆಯನ್ನು ತಪಾಸಣೆ ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿ ಬರೋಬ್ಬರಿ 2053 ಮಂದಿ ಕೊರೊನಾ ಸೋಂಕಿತರು ಪತ್ತೆ ಬೆಂಗಳೂರಿನಲ್ಲಿ ಬರೋಬ್ಬರಿ 2053 ಮಂದಿ ಕೊರೊನಾ ಸೋಂಕಿತರು ಪತ್ತೆ

ಏಳು ದಿನ ಕ್ವಾರಂಟೈನ್; ಇನ್ನು ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, "ಬೆಳಗ್ಗೆ 6.15ರಿಂದ ತಪಾಸಣೆ ನಡೆಸಲಾಗುತ್ತಿದೆ. ತಮಿಳುನಾಡಿನಿಂದ ಆಗಮಿಸಿದ 25 ಬಸ್ಸುಗಳನ್ನು ತಡೆದು ತಪಾಸಣೆ ಮಾಡಲಾಗಿದೆ. ಎಲ್ಲರಿಗೂ 7 ದಿನ ಹೋಂ ಕ್ವಾರಂಟೈನ್‌ಗೆ ಸೂಚನೆ ನೀಡಲಾಗಿದೆ" ಎಂದು ತಿಳಿಸಿದ್ದಾರೆ.

ಓಂ ಶಕ್ತಿ ತೀರ್ಥಯಾತ್ರೆಗೆ ತೆರಳಿರುವ ನೂರಕ್ಕೂ ಹೆಚ್ಚು ಬಸ್ಸುಗಳು ಡಿಪೋಗೆ ಮರಳುತ್ತಿದ್ದಂತೆ, ರೆಗುಲರ್ ರೂಟ್‌ಗಳಿಗೆ ಕಳುಹಿಸಲಾಗುತ್ತದೆ. ಆದರೆ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬಸ್ಸುಗಳಿಗೆ ಸ್ಯಾನಿಟೈಸ್ ಮಾಡಲು ಕೆಎಸ್ಆರ್‌ಟಿಸಿ ನಿರ್ಧರಿಸಿದೆ. ಡಿಪೋಗೆ ಬರುತ್ತಿದ್ದಂತೆ ಬಸ್ಸುಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿ, ನಂತರ ರೆಗುಲರ್ ರೂಟ್'ಗೆ ಬಸ್ಸುಗಳನ್ನು ಕಳುಹಿಸಲು ಯೋಜಿಸಲಾಗಿದೆ.

ಪ್ರಭಾವಿ ಮುಖಂಡರಿಂದ ವ್ಯವಸ್ಥೆ; ಪ್ರತಿ ವರ್ಷ ಸಾವಿರಾರು ಮಹಿಳೆಯರು ಓಂ ಶಕ್ತಿ ತೀರ್ಥಯಾತ್ರೆ ಕೈಗೊಳ್ಳುತ್ತಾರೆ. ಮಾಲಾಧಾರಣೆ ಮಾಡಿ, ಮಡಿಯಿಂದ ಇದ್ದು ದೇವಿಯ ದರ್ಶನಕ್ಕೆ ತೆರಳುತ್ತಾರೆ. ವರ್ಷದಿಂದ ವರ್ಷಕ್ಕೆ ಶಿವಮೊಗ್ಗದಲ್ಲಿ ಓಂ ಶಕ್ತಿಗೆ ತೆರಳುವ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಪ್ರಭಾವಿ ಮುಖಂಡರೊಬ್ಬರು ಓಂ ಶಕ್ತಿ ದರ್ಶನಕ್ಕೆ ಬಸ್ಸುಗಳ ಉಚಿತ ವ್ಯವಸ್ಥೆ ಮಾಡಿಕೊಡುತ್ತಾರೆ. ಈ ಬಾರಿಯೂ ಬಸ್ಸುಗಳ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಮಹಿಳೆಯರು ತಮಿಳುನಾಡಿನ ಮೇಲ್ ಮರತ್ತೂರಿನಲ್ಲಿ ಓಂ ಶಕ್ತಿ ದೇವಿಯ ದರ್ಶನ ಪಡೆಯುತ್ತಾರೆ. ಬಳಿಕ ಕುಂಬಕೋಣಂ, ಶ್ರೀರಂಗಂ, ತಿರುವಣ್ಣಾಮಲೈ ಬಳಿಕ ರಾಜ್ಯದ ಕೆಲವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ, ಶಿವಮೊಗ್ಗಕ್ಕೆ ಮರಳುತ್ತಿದ್ದಾರೆ. ವಿವಿಧ ಜಿಲ್ಲೆಯಿಂದ ಓಂ ಶಕ್ತಿ ತೀರ್ಥಯಾತ್ರೆಗೆ ತೆರಳಿದ್ದ ಮಹಿಳೆಯರಲ್ಲಿ ಕರೋನ ಪಾಸಿಟಿವ್ ಬಂದ ಹಿನ್ನೆಲೆ, ಶಿವಮೊಗ್ಗದ ಜನರಲ್ಲಿ ಭೀತಿ ಎದುರಾಗಿದೆ. ಓಂ ಶಕ್ತಿ ತೀರ್ಥಯಾತ್ರೆಯ ಬಳಿಕ ಹಿಂತಿರುಗುತ್ತಿರುವ ಮಹಿಳೆಯರ ಪರೀಕ್ಷೆ ಮಾಡಲಾಗುತ್ತಿದೆ.

Recommended Video

ತಜ್ಞರ ಜೊತೆ ಮಹತ್ವದ ಸಭೆ ಮಾಡಲಿರುವ ಮುಖ್ಯ ಮಂತ್ರಿ! | Oneindia Kannada

English summary
Home quarantine for around 5 thousand members who returned from Om Sakthi Yatra in Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X