ಮಳೆ ಆರ್ಭಟ: ಹೊಸನಗರದಲ್ಲಿ ಗುಡ್ಡ ಕುಸಿತ, ತಪ್ಪಿದ ಭಾರಿ ಅನಾಹುತ!

ಶಿವಮೊಗ್ಗ, ಆಗಸ್ಟ್ 06: ಹೊಸನಗರ ತಾಲೂಕು ಯಡೂರು ಗ್ರಾಮ ಪಂಚಾಯಿತಿಯ ಕೌರಿ ಗ್ರಾಮದ ಬಿಚ್ಚಾಡಿಯಿಂದ ಮಾಗಲುಗೆ ಹೋಗುವ ಮಾರ್ಗ ಮಧ್ಯೆ ಭಾರೀ ಗಾಳಿ, ಮಳೆಗೆ ಗುಡ್ಡ ಕುಸಿತ ಸಂಭವಿಸಿದ್ದು, ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನದಿಂದ ಭೀಕರ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಇದಕ್ಕೆ ನೇರ ಹೊಣೆಯಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಕಿಡಿಕಾರಿದ್ದಾರೆ.

Hill Collapse For Heavy Rain In Hosanagara

ಈ ನಡುವೆ ಕೊರೊನಾ ಸೋಂಕು ಮಹಾಮಾರಿ ರೋಗ ಬೆಂಬಿಡದೆ ಕಾಡುತಲಿದ್ದು, ಯಾವಾಗ ಇದರಿಂದ ಮುಕ್ತಿ ಸಿಗುವುದೋ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಆದಷ್ಟು ಬೇಗ ಗುಡ್ಡ ಕುಸಿಯುವಂತಹ ಪ್ರದೇಶಗಳಿಗೆ ಹೆಚ್ಚಿನ ಗಮನ ಹರಿಸಿ, ಸಂಭವಿಸುವ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸ್ಪಂದಿಸಬೇಕು ಎಂದು ಮಲೆನಾಡು ಭಾಗದ ಜನರ ಆಗ್ರಹವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+