ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ : ಹೊಸನಗರದ ಹಿಂಡ್ಲೆಮನೆ ಶಾಲಾ ಮೇಲ್ಛಾವಣಿ ಕುಸಿತ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಹೊಸನಗರ, ಜುಲೈ 21 : ತಾಲೂಕಿನ ಹುಂಚಾ ಹೋಬಳಿಯ ಹಿಂಡ್ಲೆಮನೆಯಲ್ಲಿ ಶುಕ್ರವಾರ ತಡರಾತ್ರಿ ಸುರಿದ ಬಾರೀ ಮಳೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿದಿದ್ದರಿಂದ ಕೊಠಡಿಯೂ ಬಿದ್ದಿದೆ.

ಕರ್ನಾಟಕ ಕರಾವಳಿಯಲ್ಲಿ ಕೊಂಚ ತಗ್ಗಲಿದೆ ವರುಣನ ಅಬ್ಬರ! ಕರ್ನಾಟಕ ಕರಾವಳಿಯಲ್ಲಿ ಕೊಂಚ ತಗ್ಗಲಿದೆ ವರುಣನ ಅಬ್ಬರ!

ಅದೃಷ್ಟವಶಾತ್ ‌ರಾತ್ರಿವೇಳೆ ಕಟ್ಟಡ ಕುಸಿದು ಬಿದ್ದದ್ದರಿಂದ ಯಾರಿಗೂ ಗಾಯವಾಗಿಲ್ಲ. ಬೆಳಗ್ಗೆ ತರಗತಿಗಳು ಇದೆ ಕೊಠಡಿಯಲ್ಲಿ ನಡೆಯುತ್ತಿದ್ದು ಸುಮಾರು 25ಕ್ಕೂ ಹೆಚ್ಚು ಮಕ್ಕಳು ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

Heavy rain in Shivamogga district : School building wall collapses

ದುಃಸ್ಥಿತಿಯಲ್ಲಿ ಇರುವ ಕೊಠಡಿಗಳಲ್ಲಿ ತರಗತಿ ನಡೆಯುತ್ತಿದೆ. ಹೀಗೆ ಸಂಭವಿಸಬಹುದಾದ ದುರಂತದ ಬಗ್ಗೆ ಶಾಲಾ ಮುಖ್ಯಾಪಾಧ್ಯಾಯರು ಈಗಾಗಲೆ ಹಲವಾರು ಪತ್ರಗಳನ್ನು ಶಿಕ್ಷಣಾಧಿಕಾರಿಗಳಿಗೆ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಮಳೆಯೆಂದು ಸುಮ್ಮನೆ ಕುಳಿತರೆ ಹೊಟ್ಟೆ ತುಂಬೋದು ಹೇಗೆ ಮಳೆಯೆಂದು ಸುಮ್ಮನೆ ಕುಳಿತರೆ ಹೊಟ್ಟೆ ತುಂಬೋದು ಹೇಗೆ

ಮಲೆನಾಡಿನ ಭಾಗದ ಅತೀ ಹೆಚ್ಚು ಮಳೆಯಾಗುವ ಹೊಸನಗರ, ತೀರ್ಥಹಳ್ಳಿ, ಸಾಗರ, ಭಾಗದ ಅನೇಕ ಶಾಲಾ ಕಟ್ಟಡಗಳು ದುಸ್ಥಿತಿಯಲ್ಲಿದ್ದು ಕೆಲವು ಕಡೆ ಕಟ್ಟಡ ಕುಸಿಯುವ ಹಂತದಲ್ಲಿ ಇವೆ. ಈ ಕುರಿತು ಶಿಕ್ಷಣಾ ಇಲಾಖೆ ಜಿಲ್ಲಾಡಳಿತ ಹೆಚ್ಚಿನ ಗಮನ ನೀಡುವುದು ಅಗತ್ಯವಾಗಿದೆ.

Heavy rain in Shivamogga district : School building wall collapses

ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಅತ್ಯಧಿಕ 11 ಸೆಂ.ಮೀ. ಮಳೆ ಬಿದ್ದಿದೆ. ತ್ಯಾಗರ್ತಿ, ತಾಳಗುಪ್ಪ ಮುಂತಾದ ಪ್ರದೇಶಗಳಲ್ಲಿಯೂ ಭಾರೀ ಮಳೆ ಬೀಳುತ್ತಿದೆ. ಈ ಕಾರಣದಿಂದಾಗಿ ನದಿಗಳೆಲ್ಲ ತುಂಬಿ ಹರಿಯುತ್ತಿದ್ದು, ಜೋಗದ ಜಲಪಾತ ನೋಡತಕ್ಕಂತಿದೆ.

English summary
Due to heavy rain in Shivamogga district School building wall has collapsed in Hindlemane in Hosanagar. No one is injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X