Lok Sabha Elections: ರಂಗೇರಿದ ಶಿವಮೊಗ್ಗ ಲೋಕಸಭಾ ಕ್ಷೇತ್ರ: ಮಾಜಿ ಸಿಎಂ ಮಕ್ಕಳ ಜಿದ್ದಾಜಿದ್ದಿಯ ಫೈಟ್‌

ಶಿವಮೊಗ್ಗ, ಮಾರ್ಚ್ 22: 2024ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಶಿವಮೊಗ್ಗ ಲೋಕಾ ಅಖಾಡ ರಂಗೇರಿದೆ. . ಇಬ್ಬರು ಮಾಜಿ ಸಿಎಂಗಳ ಮಕ್ಕಳು ರಣಕಣದಲ್ಲಿದ್ದು, ಕ್ಷೇತ್ರದಲ್ಲಿ ಈಗಾಗಲೇ ಮಿಂಚಿನ ಪ್ರಚಾರ ಆರಂಭವಾಗಿದೆ.

ಶಿವಮೊಗ್ಗ ಲೋಕಸಭಾ ವ್ಯಾಪ್ತಿಗೆ ಬರುವ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಆರಂಭವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್ ಕೊಲ್ಲೂರು ಮೂಕಾಂಬಿಕೆಗೆ ಕೈ ಮುಗಿಯುವ ಮೂಲಕ ಪ್ರಚಾರ ಆರಂಭಿಸಿದ್ದಾರೆ. ಇನ್ನೊಂದೆಡೆ ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ, ತನ ಹೇಳಿಕೆಗಳ ಮೂಲಕ ಕಾಂಗ್ರೆಸ್ ಎದುರಾಳಿಗೆ ಟಕ್ಕರ್ ನೀಡುತ್ತಿದ್ದಾರೆ.

Geetha Shivarajkumar V S B Y Raghavendra Big Fight In Shivamogga Lok Sabha Constituency

ಕಾಂಗ್ರೆಸ್ ಅಭ್ಯರ್ಥಿಯಾದ ಗೀತಾ ಶಿವರಾಜ್ ಕುಮಾರ್ ಬುಧವಾರ ಶಿವಮೊಗ್ಗದಲ್ಲಿ ಪ್ರಚಾರ ನಡೆಸಿ ಅಲ್ಲಿಂದ ನೇರ ಕೊಲ್ಲೂರು ಕ್ಷೇತ್ರಕ್ಕೆ ಬಂದು, ಇಂದು ಬೆಳಿಗ್ಗೆ ಪತಿ ಶಿವರಾಜ್ ಕುಮಾರ್ ಜೊತೆಗೆ ಪೂಜೆ ನಡೆಸಿ ಬೈಂದೂರಿನಲ್ಲಿ ಪ್ರಚಾರ ಆರಂಭಿಸಿದ್ದಾರೆ. ಬೈಂದೂರು ಭಾಗದಲ್ಲಿ ಮಾಜಿ ಸಿಎಂ ಬಂಗಾರಪ್ಪ ಅಭಿಮಾನಿಗಳು ಹೇರಳ ಸಂಖ್ಯೆಯಲ್ಲಿ ಇರುವುದರಿಂದ, ಹೊಸ ಚುನಾವಣಾ ಲೆಕ್ಕಾಚಾರದೊಂದಿಗೆ ಪ್ರಚಾರ ನಡೆಸಿದ್ದಾರೆ.

ಈ ಭಾಗದ ಪ್ರಭಾವಿ ಬಿಜೆಪಿ ನಾಯಕರಾಗಿದ್ದ ಮಾಜಿ ಶಾಸಕ ಬಿ.ಎಂ ಸುಕುಮಾರಶೆಟ್ಟಿ, ಇದೀಗ ಕಾಂಗ್ರೆಸ್ ಸೇರ್ಪಡೆಗೊಂಡಿರುವುದರಿಂದ, ಪಕ್ಷಕ್ಕೆ ಬೈಂದೂರಿನಲ್ಲಿ ಆನೆ ಬಲ ಬಂದಂತಾಗಿದೆ ಎಂದಿರುವ ಗೀತಾ ಶಿವರಾಜಕುಮಾರ್, ಸುಕುಮಾರ ಶೆಟ್ಟಿ ಮನೆಯಿಂದಲೇ ಪ್ರಚಾರ ಆರಂಭಿಸಿದ್ದಾರೆ.

Geetha Shivarajkumar V S B Y Raghavendra Big Fight In Shivamogga Lok Sabha Constituency

ಇನ್ನೊಂದೆಡೆ ಹ್ಯಾಟ್ರಿಕ್ ಹೀರೋ ಶಿವಣ್ಣ, ಪ್ರಚಾರ ಕಾರ್ಯದಲ್ಲಿ ಪತ್ನಿಗೆ ಸಾಥ್‌ ನೀಡುತ್ತಿದ್ದು, ಈ ಬಾರಿ ಹೆಚ್ಚಿನ ಬಲದೊಂದಿಗೆ ಪ್ರಚಾರ ನಡೆಸುತ್ತಿದ್ದೇವೆ ಎಂದಿದ್ದಾರೆ. ಚಿತ್ರರಂಗದ ತಾಂತ್ರಿಕ ವರ್ಗದವರು ದೊಡ್ಡ ಪ್ರಮಾಣದಲ್ಲಿ ಬೆಂಬಲ ನೀಡಿದ್ದು, ಅನೇಕ ನಟರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ.

ತನ್ನ ಯಾವುದೇ ಅಭಿಮಾನಿಗಳನ್ನು ನಾನು ಒತ್ತಾಯಿಸುವುದಿಲ್ಲ, ಆದರೆ ಅನೇಕ ನಟರು ಅಭಿಮಾನಿಗಳು ಗೀತಾಪರ ಪ್ರಚಾರ ಕೈಗೊಳ್ಳಲಿದ್ದಾರೆ ಎಂದಿದ್ದಾರೆ. ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಸೇರಿದಂತೆ ಕಾಂಗ್ರೆಸ್ ಪರ ಪ್ರಚಾರ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದಾಗಿ ಶಿವಣ್ಣ ಹೇಳಿದ್ದಾರೆ.

Geetha Shivarajkumar V S B Y Raghavendra Big Fight In Shivamogga Lok Sabha Constituency

ಇತ್ತ ಹಾಲಿ ಸಂಸದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಕೂಡ ಹೊಸ ಹುಮ್ಮಸಿನೊಂದಿಗೆ ಕಣಕ್ಕಿಳಿದಿದ್ದಾರೆ. ಪ್ರಧಾನಿ ಮೋದಿ ಅವರೇ ಬಂದು ತನ್ನ ಪರ ಪ್ರಚಾರ ಕೈಗೊಂಡಿರುವುದರಿಂದ, ಮೋದಿ ಶ್ರೀರಕ್ಷೆಯಲ್ಲಿ ಚುನಾವಣೆ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ. ಇದು ರಾಷ್ಟ್ರಪ್ರೇಮಿಗಳು ಮತ್ತು ರಾಷ್ಟ್ರ ದ್ರೋಹಿಗಳ ನಡುವಿನ ಚುನಾವಣೆ ಎಂದು ಬಣ್ಣಿಸಿರುವ ರಾಘವೇಂದ್ರ, ಸೀಸನಲ್ ಪೋಲಿಟಿಷಿಯನ್‌ಗಳಿಂದ ಹೆಚ್ಚಿನ ನಿರೀಕ್ಷೆ ಮಾಡುವಂತಿಲ್ಲ ಎಂದು ಪರೋಕ್ಷವಾಗಿ ಗೀತಾ ಶಿವರಾಜ್ ಕುಮಾರ್‌ಗೆ ಟಕ್ಕರ್ ನೀಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರ 75,000ಕ್ಕೂ ಅಧಿಕ ಮತಗಳ ಲೀಡ್ ನೀಡುವ ಮೂಲಕ ಬಿಜೆಪಿಯ ಕೈ ಹಿಡಿದಿತ್ತು. ಆದರೆ ಈ ಬಾರಿ ಪ್ರಬಲ ನಾಯಕರ ಪಕ್ಷಾಂತರದಿಂದ ಬಿಜೆಪಿ ಲೆಕ್ಕಾಚಾರ ತಪ್ಪುವ ಸಾಧ್ಯತೆ ಇದೆ. ರಾಜ್ಯದ ಪ್ರತಿಷ್ಠಿತ ಕಣವಾಗಿರುವ ಶಿವಮೊಗ್ಗದಲ್ಲಿ, ಈಶ್ವರಪ್ಪ ಸ್ಪರ್ಧಿಸಿದರೆ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ. ಇದರಿಂದ ಬಿಜೆಪಿಗೆ ಮತ್ತಷ್ಟು ಹೊಡೆತ ಬಿದ್ದಂತಾಗುತ್ತದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಚುನಾವಣಾ ಲೆಕ್ಕಾಚಾರಗಳು ಏನಾಗಬಹುದು ಅನ್ನುವ ಕುತೂಹಲ ಮತದಾರರಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+