ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಣ್ಮನ ಸೆಳೆಯುತ್ತಿದೆ ಶಿವಮೊಗ್ಗದ ಫಲಪುಷ್ಪ ಪ್ರದರ್ಶನ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜನವರಿ 25 : ಶಿವಮೊಗ್ಗ ನಗರದ ಅಂಬೇಡ್ಕರ್‌ ಭವನದ ಆವರಣದಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಜನರನ್ನು ಕೈಬೀಸಿ ಕರೆಯುತ್ತಿದೆ. ಜನವರಿ 27ರ ತನಕ ಜನರು ಪ್ರದರ್ಶನಕ್ಕೆ ಭೇಟಿ ನೀಡಬಹುದಾಗಿದೆ.

ತೋಟಗಾರಿಕೆ ಇಲಾಖೆ ಜಿಲ್ಲಾ ಉದ್ಯಾನ ಕಲಾಸಂಘ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಫಲಪುಷ್ಪ ಪ್ರದರ್ಶನ ಪ್ರತಿವರ್ಷ ಮೂರು ದಿನ ಮಾತ್ರ ಇರುತ್ತಿತ್ತು. ಆದರೆ, ಈ ಬಾರಿ ಸಹ್ಯಾದ್ರಿ ಉತ್ಸವ ಹಿನ್ನೆಲೆಯಲ್ಲಿ ಇನ್ನೆರಡು ದಿನ ವಿಸ್ತರಣೆ ಮಾಡಲಾಗಿದೆ.

ಸಹ್ಯಾದ್ರಿ ಉತ್ಸವಕ್ಕೆ ವೈಭವದ ಚಾಲನೆ, ಸಂಭ್ರಮಿಸಿದ ಮಲೆನಾಡಿಗರುಸಹ್ಯಾದ್ರಿ ಉತ್ಸವಕ್ಕೆ ವೈಭವದ ಚಾಲನೆ, ಸಂಭ್ರಮಿಸಿದ ಮಲೆನಾಡಿಗರು

Vegetable mela

ಫಲ ಪುಷ್ಪ ಪ್ರದರ್ಶನದಲ್ಲಿ ವಿಶೇಷವಾಗಿ ಅಮರ್‌ಜವಾನ್‌ ಹೂವಿನ ಆಕೃತಿ, ಮೇಕ್‌ ಇನ್‌ ಇಂಡಿಯಾ ಸಿಂಹದ ಲಾಂಛನ, ವಿವಿಧ ಹಣ್ಣುಗಳ ಆಕೃತಿಯ ಫೋಟೊ ಫ್ರೇಮ್‌ಗಳು, ಮಕ್ಕಳ ಆಕರ್ಷಣೆಯ ಕಲಾಕೃತಿಗಳು, ಕೈತೋಟ ಮತ್ತು ತಾರಸಿ ತೋಟದ ಪ್ರಾತ್ಯಕ್ಷಿಕೆ, ವಿವಿಧ ತರಕಾರಿ ಕೆತ್ತನೆಗಳು, ವಿವಿಧ ತರಕಾರಿಗಳಿಂದ ಮಾಡಿದ ನವಿಲು ಆಕೃತಿಗಳು ನೋಡುಗರ ಗಮನ ಸೆಳೆಯುತ್ತಿವೆ.

ಚಿಕಿತ್ಸೆ ನೀಡಿದ ವೈದ್ಯರೂ ಮಂಗನ ಕಾಯಿಲೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲಚಿಕಿತ್ಸೆ ನೀಡಿದ ವೈದ್ಯರೂ ಮಂಗನ ಕಾಯಿಲೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ

ಆಸಕ್ತರಿಗಾಗಿ ಜೇನು ಕೃಷಿ, ಅಣಬೆ ಕೃಷಿ, ಕೈತೋಟ ಮತ್ತು ತಾರಸಿ ತೋಟ, ಹನಿ ನೀರಾವರಿ ಪ್ರಾತ್ಯಕ್ಷಿಕೆ, ಕೃಷಿ, ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ ವಿಷಯಗಳಿಗೆ ಸಂಬಂಧಿಸಿದ ಪ್ರದರ್ಶಿಕೆಗಳೂ ಇವೆ.

ವಿಶೇಷವಾಗಿ ಮಹಿಳೆಯರಿಗೆ ವಿವಿಧ ಸಸ್ಯ ಭಾಗಗಳಾದ ಹೂ, ಎಲೆ, ಬೀಜ, ಧಾನ್ಯಗಳನ್ನು ಬಳಸಿ ಚಿತ್ರಿಸಿದ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.

ಫಲ ಪುಷ್ಪ ಪ್ರದರ್ಶನದ ವೀಕ್ಷ ಣೆಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಶುಚಿ ರುಚಿಯಾದ ಆಹಾರೋತ್ಪನ್ನಗಳ ದೊಡ್ಡ ಪ್ರಮಾಣದ ಆಹಾರ ಮೇಳವನ್ನು ಸ್ಥಳೀಯ ಖಾಸಗಿ ಹೋಟೆಲ್‌ನ ಸಹಭಾಗಿತ್ವದಲ್ಲಿ ಆರಂಭಿಸಲಾಗಿತ್ತು.

ಅಲ್ಲದೇ ಮಕ್ಕಳ ಆಕರ್ಷಣೆಗಾಗಿ ವಿವಿಧ ಆಟಿಕೆಗಳನ್ನೊಳಗೊಂಡ ಅಮ್ಯೂಸ್‌ಮೆಂಟ್‌ ಪಾರ್ಕ್‌ ಇರಲಿದೆ. ಜ.25 ಮತ್ತು 26ರಂದು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ. ಪ್ರದರ್ಶನದ 5 ದಿನಗಳ ಅವಧಿಯಲ್ಲಿ ಪ್ರತಿದಿನ ಸಂಜೆ ಆಹ್ವಾನಿತರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಗಮನ ಸೆಳೆದ ಪ್ರದರ್ಶನ : ಸಹ್ಯಾದ್ರಿ ಉತ್ಸವ ಅಂಗವಾಗಿ ನಡೆದ ಜಾನಪದ ಮೆರವಣಿಗೆ ಉತ್ಸವಕ್ಕೆ ಹೆಚ್ಚು ಮೆರುಗು ನೀಡಿತು. ಜಾನಪದ ಪ್ರಕಾರಗಳ ನೂರಾರು ಕಲಾತಂಡಗಳು ತಮ್ಮದೇ ಆದ ವಿಶಿಷ್ಟ ಭಂಗಿಯ ಪ್ರದರ್ಶನ ನೀಡುತ್ತಾ ಸಾಗಿದ ದೃಶ್ಯ ನೋಡುಗರ ಕಣ್ಮನ ಸೆಳೆಯಿತು. ರಸ್ತೆ ಬದಿಯಲ್ಲಿ, ಮನೆ, ಮಹಡಿ, ಮಹಲುಗಳ ಮೇಲೆ ನಿಂತು ವೀಕ್ಷಿಸುತ್ತಿದ್ದ ಜನತೆಗೆ ಮೆರವಣಿಗೆ ಖುಷಿ ಕೊಟ್ಟಿತು.

English summary
Three days of Fruit and Vegetable mela organized in Shivamogga attract the people. Mela will open for public till January 27, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X