ಜಾರಕಿಹೊಳಿ ಬಿಟ್ಟು ಬೇರೆ ಮಾತಾಡಿ: ಮಾಧ್ಯಮಗಳಿಗೆ ದೇವೇಗೌಡ ತಾಕೀತು
Recommended Video

ಬೆಂಗಳೂರು, ಸೆಪ್ಟೆಂಬರ್ 14: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸುವ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಬೆಳಗ್ಗೆಯಿಂದ ಸಂಜೆಯವರೆಗೂ ಜಾರಕಿಹೊಳಿ ಸಹೋದರರ ಕುರಿತು ಮಾತನಾಡದೆ, ಕರ್ನಾಟಕದ ಅಭಿವೃದ್ಧಿ ಕುರಿತು ಮಾತನಾಡಿ ಎಂದು ತಾಕೀತು ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಸಹೋದರರ ಬಗ್ಗೆ ಪ್ರಶ್ನೆಗಳಿದ್ದರೆ ಅವರನ್ನೇ ಹೋಗಿ ಕೇಳಿ, ನನ್ನನ್ನು ಆ ಬಗ್ಗೆ ಪ್ರಶ್ನಿಸಬೇಡಿ ಎಂದರು, ಅಷ್ಟೇ ಅಲ್ಲ ಕರ್ನಾಟಕದಲ್ಲಿ ಹಾಗೂ ದೇಶದಲ್ಲಿ ಜಾರಕಿಹೊಳಿ ಸಹೋರರನ್ನು ಬಿಟ್ಟು ಬೇರೇನು ಕಾಣುತ್ತಿಲ್ಲವೆ ಎಂದು ಕೋಪದಿಂದ ನುಡಿದರು.
ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ, ಬಡವರ ಮೇಲೆ ಒತ್ತಡ ಹೇರಿ ಸಾಲ ವಸೂಲಿ ಮಾಡುತ್ತಿದ್ದ ದಂದೆಯಲ್ಲಿ ನಿಲ್ಲಿಸಿದ್ದೇವೆ, ಕರ್ನಾಟಕದ ರೈತರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ಎಲ್ಲಾ ವಿಚಾರಗಳು ಮಾಧ್ಯಮದವರ ಕಣ್ಣಿಗೆ ಕಾಣುತ್ತಿಲ್ಲ ಕೇವಲ ಬೆಳಗ್ಗೆಯಿಂದ ಸಂಜೆಯವರೆಗೂ ಜಾರಕಿಹೊಳಿ ಸಹೋದರರ ಬಗ್ಗೆ ಮಾತನಾಡುತ್ತಿದ್ದರೆ ಇದರಿಂದ ರಾಜ್ಯದ ಜನರಿಗೆ ಏನು ಅನುಕೂಲವಾಗುತ್ತದೆ ಎಂದು ಖಾರವಾಗಿ ನುಡಿದರು. ಸಮ್ಮಿಶ್ರ ಸರ್ಕಾರದಿಂದ ರಾಜ್ಯದ ಜನರಿಗೆ ಏನೇನು ಅನುಕೂಲವಾಗುತ್ತಿದೆ ಎನ್ನುವುದನ್ನು ಮೊದಲು ನೋಡಿ, ಜಾರಕಿಹೊಳಿ ಸಹೋದರರ ಬಗ್ಗೆ ಏನೇ ಪ್ರಶ್ನೆಗಳಿದ್ದರೂ ಅವರನ್ನೇ ಹೋಗಿ ಕೇಳಿ ಎಂದು ಕಟುವಾಗಿ ನುಡಿದರು.












Click it and Unblock the Notifications