ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಗರದ ಗಾಯಕ ಚಿನ್ಮಯ ರಾವ್ ಮುಡಿಗೆ ವಿಶಿಷ್ಟ ದಾಖಲೆಯ ಗರಿ

|
Google Oneindia Kannada News

ಸಾಗರ, ಸೆಪ್ಟೆಂಬರ್ 20: ಇತ್ತೀಚೆಗಷ್ಟೇ ವಿಶ್ವದ ಅತಿ ಹೆಚ್ಚು ಅವಧಿಯ ಆಡಿಯೋ ಡಿವಿಡಿ ಎಂದು ಯುನೆಟೆಡ್ ಕಿಂಗ್ ಡಮ್ ಮೂಲದ ರೆಕಾರ್ಡ್ ಹೋಲ್ಡರ್ಸ್ ರಿಪಬ್ಲಿಕ್ ವಿಶ್ವ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದ್ದ ಹೊನಗೋಡಿನ ಚಿನ್ಮಯ ಎಂ.ರಾವ್ ಅವರ ಗಾಯನದ ಶ್ರೀ ಗುರುಸಂಹಿತಾ ಎಂಬ ಆಡಿಯೋ ಡಿ.ವಿ.ಡಿ ಈಗ ನೇಪಾಳದ ಎವರೆಸ್ಟ್ ವರ್ಡ್ ರೆಕಾರ್ಡ್ ವಿಶ್ವ ದಾಖಲೆಯ ಪಟ್ಟಿಗೆ ಸೇರ್ಪಡೆಗೊಂಡಿದೆ.

ವಿಶ್ವದ ಅತೀ ಹೆಚ್ಚು ಅವಧಿಯ ಆಡಿಯೋ ಡಿವಿಡಿ ಮೇ 24 ಕ್ಕೆ ಲೋಕಾರ್ಪಣೆ ವಿಶ್ವದ ಅತೀ ಹೆಚ್ಚು ಅವಧಿಯ ಆಡಿಯೋ ಡಿವಿಡಿ ಮೇ 24 ಕ್ಕೆ ಲೋಕಾರ್ಪಣೆ

ಚಿತ್ರದುರ್ಗದ ಹಿರಿಯ ಜ್ಯೋತಿಷಿ ಶ್ರೀ ಎಸ್ ಶ್ರೀಧರ ಮೂರ್ತಿ ನಿರ್ಮಾಣದ ಈ ಆಡಿಯೋ ಡಿ.ವಿ.ಡಿಯನ್ನು ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿ ಹೊರತಂದಿದೆ. ರಾಷ್ಟದ ಘನತೆ ಹಾಗೂ ರಾಷ್ಟದ ಹೆಮ್ಮೆ (ಡಿಗ್ನಿಟಿ ಆಫ್ ನೇಶನ್, ಪ್ರೌಡ್ ಆಫ್ ನೇಶನ್) ಎಂದು ನಮೂದಿಸಿರುವ ವಿಶ್ವ ದಾಖಲೆಯ ಪ್ರಶಸ್ತಿ ಪತ್ರದಲ್ಲಿ ಇದು ವಿಶ್ವದ ಅತಿ ಹೆಚ್ಚು ಅವಧಿಯ ಆಡಿಯೋ ಡಿವಿಡಿ ಹಾಗೂ ಅತಿ ಹೆಚ್ಚು ಅಂದರೆ 6,621 ಶ್ಲೋಕಗಳನ್ನು ಒಂದು ಧ್ವನಿಮುದ್ರಿಕೆಗಾಗಿ ಒಂದೇ ಗಾಯಕ ಹಾಡಿರುವ ಡಿ.ವಿ.ಡಿ ಎಂದು ದಾಖಲಿಸಲಾಗಿದೆ.

Everest world record title for shivamogga's Chinmaya rao

ಒಟ್ಟು 28 ಗಂಟೆ 8 ನಿಮಿಷ 30 ಸೆಕೆಂಡ್ ಧ್ವನಿಮುದ್ರಣವಾಗಿರುವ ಈ ಡಿ.ವಿ.ಡಿಯನ್ನು ಕಳೆದ ಮೇ ತಿಂಗಳ 24ರಂದು ಹರಿಹರದ ನಾರಾಯಣಾಶ್ರಮದಲ್ಲಿ ದತ್ತ ಪರಂಪರೆಯ ಶ್ರೀ ಪ್ರಭುದತ್ ಮಹರಾಜ್ ಲೋಕಾರ್ಪಣೆಗೊಳಿಸಿದ್ದರು.

Everest world record title for shivamogga's Chinmaya rao

"ಶ್ರೀ ಗುರುಸಂಹಿತಾ" ಎಂಬ ಹೆಸರಿನ ಶ್ರೀ ವಾಸುದೇವಾನಂದ ಸರಸ್ವತಿ ವಿರಚಿತ ಪವಿತ್ರ ಗ್ರಂಥದಲ್ಲಿನ 52 ಅಧ್ಯಾಯಗಳಲ್ಲಿರುವ ಅನುಷ್ಟುಪ್ ಛಂದಸ್ಸಿನ ಒಟ್ಟು 6,621 ಸಂಸ್ಕೃತ ಶ್ಲೋಕಗಳನ್ನು ಚಿನ್ಮಯ ಎಂ.ರಾವ್ ತಮ್ಮ ಹೊನಗೋಡಿನ ಮನೆಯಲ್ಲಿರುವ ಪುಟ್ಟ ಸ್ಟೂಡಿಯೋದಲ್ಲಿ ತಾವೇ ಧ್ವನಿಮುದ್ರಣ ಮಾಡಿಕೊಂಡು ಇದರ ಸಂಕಲನದ ಕೆಲಸವನ್ನೂ ತಾವೇ ಮಾಡಿಕೊಂಡು ಅಂತಿಮ ಹಂತದ ಮಾಸ್ಟರ್ ಡಿ.ವಿ.ಡಿ ಸಿದ್ಧಪಡಿಸಿ ಬಿಡುಗಡೆ ಮಾಡಿದ್ದಾರೆ. ಚಿನ್ಮಯ ಎಂ.ರಾವ್ 2010ರಿಂದ 2013ರರವರೆಗೆ 3 ವರ್ಷ ಈ ಅಡಕ ಮುದ್ರಿಕೆಯ ಧ್ವನಿಮುದ್ರಣಕ್ಕಾಗಿ ಒಟ್ಟು 2,400 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ.

English summary
Chinmaya M Rao from Honagodu a small village in Sagar taluk, Shivamogga district has recorded his vocal for 6621 sanskrit Shlokas of Sri Gurucharita which is 28 hours 8 minitues 30 seconds long. He has title of everest world record.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X