ಇಡಿ ಅಧಿಕಾರಿಗಳಿಗೆ ಸಮಾಧಾನವಾಗಬೇಕಿದ್ದರೆ, ಡಿಕೆಶಿ ಈ ಕೆಲಸ ಮಾಡಲಿ!

Recommended Video

      ಡಿಕೆಶಿಗೆ ಕಾನೂನು ಪಾಠ ಹೇಳಿದ ಸಿಟಿ ರವಿ | Oneindia Kannada

      ಶಿವಮೊಗ್ಗ, ಸೆ 14: ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಸಮಾಧಾನ ಆಗಬೇಕಾದರೆ ಡಿ.ಕೆ.ಶಿವಕುಮಾರ್ ಏನು ಮಾಡಬೇಕು ಎನ್ನುವುದರ ಬಗ್ಗೆ ಪ್ರವಾಸೋದ್ಯಮ ಖಾತೆಯ ಸಚಿವ ಸಿ.ಟಿ.ರವಿ ಸಲಹೆಯನ್ನು ನೀಡಿದ್ದಾರೆ.

      ನಗರದಲ್ಲಿ ಮಾತನಾಡುತ್ತಿದ್ದ ಸಚಿವ ರವಿ, "ಇಡಿ ಅಧಿಕಾರಿಗಳ ಪ್ರಶ್ನೆಗೆ ಡಿಕೆಶಿ ಸಮರ್ಪಕವಾದ ಉತ್ತರ ನೀಡಿರಲಿಕ್ಕಿರಲಿಲ್ಲ. ಹಾಗಾಗಿ, ವಿಚಾರಣೆಯನ್ನು ಮುಂದುವರಿಸಿರಬಹುದು" ಎಂದು ರವಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

      " ಇಡಿ ಅಧಿಕಾರಿಗಳಿಗೆ ಸಮಾಧಾನ ಆಗಬೇಕಾದರೆ ಡಿ.ಕೆ.ಶಿವಕುಮಾರ್ ಸತ್ಯವನ್ನು ಹೇಳಬೇಕು" ಎಂದು ಸಚಿವ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ. 'ಇಡಿ ತನಿಖೆಗೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲ" ಎಂದು ರವಿ, ಪುನರುಚ್ಚಿಸಿದ್ದಾರೆ.

      DK Shivakumar Should Come Out with Truth During ED Interrogation: CT Ravi Statement

      " ಸತ್ಯವನ್ನು ಮರೆಮಾಚಬಾರದು, ಸತ್ಯ ಹೇಳುವುದನ್ನು ವಿಳಂಬ ಮಾಡುವುದು ಒಳ್ಲೆಯದಲ್ಲ" ಎಂದು ಸಿ.ಟಿ.ರವಿ, ಡಿಕೆಶಿಗೆ ಟಾಂಗ್ ನೀಡಿದ್ದಾರೆ.

      "ಕಾನೂನು ಎಲ್ಲರಿಗಿಂತ ಸುಪ್ರೀಂ. ಕಾನೂನಿಗೆ ಪ್ರತಿಯೊಬ್ಬರೂ ತಲೆಬಾಗಲೇಬೇಕು. ತಪ್ಪು ಮಾಡಿದ್ದರೆ ಕಾನೂನಿನ ಕ್ರಮ ಎದುರಿಸಲೇಬೇಕು. ತಪ್ಪಾಗಿಲ್ಲದಿದ್ರೆ ಯಾವುದೇ ಸಮಸ್ಯೆ ಆಗಲ್ಲ" ಎಂದು ಎರಡು ದಿನಗಳ ಹಿಂದೆ, ಸಚಿವ ರವಿ

      "ಜನಾರ್ದನ ರೆಡ್ಡಿ ಬಂಧನವಾದಾಗ ನಾವು ಅವರನ್ನು ಸಮರ್ಥನೆ ಮಾಡಿಕೊಂಡಿರಲಿಲ್ಲ. ಅವರು ಬಿಜೆಪಿಯವರು ಹೌದು. ಹಾಗೆಂದು ತಪ್ಪನ್ನು ಸಮರ್ಥನೆ ಮಾಡಿಕೊಳ್ಳಲಿಲ್ಲ. ಅವರನ್ನು ಬಂಧಿಸಲಾಗಿತ್ತು. ಜೈಲುವಾಸವನ್ನೂ ಅನುಭವಿಸಿದರು. ಡಿ.ಕೆ.ಶಿವಕುಮಾರ್ ತಪ್ಪೇ ಮಾಡಿಲ್ಲ ಅಂದ್ರೆ ಹೆದರುವ ಅವಶ್ಯಕತೆಯೇ ಇಲ್ಲ" ಎಂದು, ಸಿ.ಟಿ.ರವಿ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+