• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗ; ತೌಕ್ತೆ ಅಬ್ಬರ, ತುಂಗಾ ಜಲಾಶಯದಿಂದ ನದಿಗೆ ನೀರು

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಮೇ 16; ತೌಕ್ತೆ ಚಂಡಮಾರುತದ ಪರಿಣಾಮ ಶಿವಮೊಗ್ಗ ಜಿಲ್ಲೆಯಾದ್ಯಂತ ಇಡೀ ದಿನ ಕಾರ್ಮೋಡ ಕವಿದಿದ್ದು, ಜಿಟಿ ಜಿಟಿ ಮಳೆಯಾಗಿದೆ. ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಿಸಿದೆ.

ತುಂಗಾ ಜಲಾಶಯವು ಭರ್ತಿಯಾಗಿದ್ದು ಅಲ್ಪ ಪ್ರಮಾಣದ ನೀರನ್ನು ನದಿಗೆ ಬಿಡಲಾಗಿದೆ.
ಜಿಲ್ಲೆಯ ಕೆಲವು ಕಡೆ ಸೋನೆ ಮಳೆ ಜೋರಾಗಿ ಸುರಿದರೆ, ಇನ್ನೂ ಕೆಲವು ಕಡೆ ಬಿಟ್ಟು ಬಿಟ್ಟು ಸುರಿದಿದೆ. ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ ಉತ್ತಮ ಮಳೆಯಾಗುತ್ತಿದೆ.

ತೌಕ್ತೆ ಚಂಡಮಾರುತ: ಕರ್ನಾಟಕ, ಕೇರಳದಲ್ಲಿ ಅಬ್ಬರದ ಮಳೆ, ರೆಡ್ ಅಲರ್ಟ್ ತೌಕ್ತೆ ಚಂಡಮಾರುತ: ಕರ್ನಾಟಕ, ಕೇರಳದಲ್ಲಿ ಅಬ್ಬರದ ಮಳೆ, ರೆಡ್ ಅಲರ್ಟ್

ಹೊಸನಗರದಲ್ಲಿ ರಾತ್ರಿ ಜೋರು ಗಾಳಿ ಸಹಿತ ಮಳೆಯಾಗಿದೆ. ಅಲ್ಲಲ್ಲಿ ಮರಗಳು ಉರುಳಿ ಬಿದ್ದಿರುವ ವರದಿಯಾಗಿದೆ. ಪಟ್ಟಣದ ಮಾವಿನಕೊಪ್ಪ ಪೆಟ್ರೋಲ್ ಬಂಕ್ ಬಳಿ ಮರ ಬುಡಮೇಲಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ ಉಂಟಾಗಿದೆ.

ಚಂಡಮಾರುತ, ರಾಜ್ಯದಲ್ಲಿ ಅತ್ಯಧಿಕ ಮಳೆ: 7 ಜಿಲ್ಲೆಗಳಿಗೆ ರೆಡ್ ಅಲರ್ಟ್ ಚಂಡಮಾರುತ, ರಾಜ್ಯದಲ್ಲಿ ಅತ್ಯಧಿಕ ಮಳೆ: 7 ಜಿಲ್ಲೆಗಳಿಗೆ ರೆಡ್ ಅಲರ್ಟ್

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಳೆ ಆರಂಭವಾಗುತ್ತಿದ್ದಂತೆ ಕರೆಂಟ್ ಕೈಕೊಟ್ಟಿದೆ. ಗಂಟೆಗಟ್ಟಲೆ ವಿದ್ಯುತ್ ಇಲ್ಲದೆ ಜನರು ಬದುಕು ನಡೆಸುವಂತಾಗಿದೆ. ತೀರ್ಥಹಳ್ಳಿಯ ಹಲವು ಗ್ರಾಮಗಳಲ್ಲಿ ಶನಿವಾರ ಸಂಜೆ ಹೋದ ಕರೆಂಟ್ ಇನ್ನೂ ಬಂದಿಲ್ಲ.

'ತೌಕ್ತೆ' ಅವಾಂತರಕ್ಕೆ ನಡುಗಿದ ಕರಾವಳಿ: ಆತಂಕದಲ್ಲಿ ಉತ್ತರ ಕನ್ನಡ ತೀರದ ವಾಸಿಗಳು'ತೌಕ್ತೆ' ಅವಾಂತರಕ್ಕೆ ನಡುಗಿದ ಕರಾವಳಿ: ಆತಂಕದಲ್ಲಿ ಉತ್ತರ ಕನ್ನಡ ತೀರದ ವಾಸಿಗಳು

ಕೃಷಿಕರಿಗೆ ಸಂಕಷ್ಟ ತಂದ ಮಳೆ

ಕೃಷಿಕರಿಗೆ ಸಂಕಷ್ಟ ತಂದ ಮಳೆ

ಅಕಾಲಿಕೆ ಮಳೆ ಕೃಷಿಕರಿಗೆ ಸಂಕಷ್ಟ ತಂದೊಡ್ಡಿದೆ. ಫಸಲು ರಕ್ಷಣೆಗೆ ರೈತರು ಹರಸಾಹಸಪಡುತ್ತಿದ್ದಾರೆ. ಬೇಸಿಗೆ ಕಾಲದ ಬೆಳೆಗಳಾದ ಮೆಕ್ಕೆ ಜೋಳ, ಭತ್ತದ ಕಟಾವು ಕಾರ್ಯಕ್ಕೆ ಅಕಾಲಿಕ ಮಳೆ ಅಡ್ಡಿಯಾಗಿದೆ. ಮೆಕ್ಕೆ ಜೋಳ ಒಣಗಿಸಲು ಸಾಧ್ಯವಾಗದ ಸ್ಥಿತಿ ಇದೆ. ಕೆಲವು ರೈತರು ಮೆಕ್ಕೆ ಜೋಳ, ಭತ್ತ ಕಟಾವಿಗೆ ಸಿದ್ಧತೆ ನಡೆಸಿದ್ದಾಗಲೇ ಜೋರು ಮಳೆಯಾಗಿದೆ. ಇನ್ನು, ಬೇಸಿಗೆ ಬೆಳೆ ಮುಗಿಸಿದ ರೈತರಿಗೆ ಈ ಮಳೆ ಸ್ವಲ್ಪ ನಿರಾಳತೆ ನೀಡಿದೆ. ನೀರಾವರಿ ಮೂಲಕ ನೀರು ಹಾಯಿಸುವ ಕಾರ್ಯಕ್ಕೆ ಬಿಡುವು ನೀಡಿದೆ.

ಜಲಾಶಯದಿಂದ ನೀರು ಹೊರಗೆ

ಜಲಾಶಯದಿಂದ ನೀರು ಹೊರಗೆ

ಕಳೆದ ವಾರ ಅಕಾಲಿಕೆ ಮಳೆಯಿಂದಾಗಿ ತುಂಗಾ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬಂದಿತ್ತು. ಚಂಡಮಾರುತದ ಪರಿಣಾಮ ಇನ್ನಷ್ಟು ಮಳೆಯಾಗುವುದರಿಂದ ಹೆಚ್ಚುವರಿ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಶನಿವಾರ ಮಧ್ಯಾಹ್ನ 500 ಕ್ಯೂಸೆಕ್ ನೀರನ್ನು ಪವರ್ ಜನರೇಟರ್ ನಾಲೆ ಮೂಲಕ ನದಿಗೆ ಬಿಡಲಾಗಿತ್ತು.

ಬಹುಬೇಗ ಭರ್ತಿಯಾಗುವ ಜಲಾಶಯ

ಬಹುಬೇಗ ಭರ್ತಿಯಾಗುವ ಜಲಾಶಯ

ನದಿಗೆ ಒಳ ಹರಿವು ಹೆಚ್ಚಳವಾದ್ದರಿಂದ ಶನಿವಾರ ರಾತ್ರಿಯಿಂದ ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಹಿನ್ನೀರು ಭಾಗದಲ್ಲಿ ಮಳೆ ಹೆಚ್ಚಾದರೆ ಕ್ರಸ್ಟ್ ಗೇಟ್‌ಗಳ ಮೂಲಕ ನೀರು ಬಿಡಲಾಗುತ್ತದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ. 3.15 ಟಿಎಂಸಿ ಸಾಮರ್ಥ್ಯವಿರುವುದರಿಂದ ತುಂಗಾ ಜಲಾಶಯ ಬಹಳ ಬೇಗ ಭರ್ತಿಯಾಗುತ್ತದೆ.

ಇನ್ನೂ ಎರಡು ದಿನ ಮಳೆಯಾಗಲಿದೆ

ಇನ್ನೂ ಎರಡು ದಿನ ಮಳೆಯಾಗಲಿದೆ

ತೌಕ್ತೆ ಚಂಡಮಾರುತದ ಪರಿಣಾಮ ಇನ್ನೂ ಎರಡು ದಿನ ಜಿಲ್ಲೆಯಲ್ಲಿ ಮಳೆಯಾಗುವ ಸಂಭವವಿದೆ. ತುರ್ತು ಪರಿಸ್ಥಿತಿ ಉಂಟಾದರೆ ತಕ್ಷಣ ನೆರವಿಗೆ ಧಾವಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚಿಸಿದೆ. ಇನ್ನೇನು ಮುಂಗಾರು ಆರಂಭವಾಗಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ.

English summary
Various taluks of the Shivamogga district received rain due to cyclone Tauktae effect. Power supply disturbed in rural areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X