ಆರ್'ಟಿಓ ಅಧಿಕಾರಿಗೆ ಚಪ್ಪಲಿ ತೋರಿಸಿದ ಶಿವಮೊಗ್ಗ ಪಾಲಿಕೆ ಸದಸ್ಯನ ವಿರುದ್ಧ ದೂರು
ಶಿವಮೊಗ್ಗ, ಫೆಬ್ರವರಿ 19: ನಗರದ ಆರ್ಟಿಒ ಕಚೇರಿಯಲ್ಲಿ ಅಧಿಕಾರಿ ಶ್ರೀನಿವಾಸಯ್ಯ ಅವರಿಗೆ ಪಾಲಿಕೆಯ ಸದಸ್ಯ, ಆರ್ಟಿಒ ಏಜೆಂಟ್ ವಿಶ್ವಾಸ್ ಚಪ್ಪಲಿ ತೋರಿಸಿ ದರ್ಪ ತೋರಿದ್ದಾರೆ ಎಂಬ ಆರೋಪಿಸಲಾಗಿದೆ.
ಶಿವಮೊಗ್ಗದ ಹೊಸ ಆರ್ಟಿಒ ಆಗಿ ಶ್ರೀನಿವಾಸಯ್ಯ ಅವರು ನೇಮಕವಾಗಿದ್ದು , ಕಚೇರಿಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ದೃಷ್ಟಿಯಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಶ್ರೀನಿವಾಸಯ್ಯ ಅವರು ಕೆಲಸವನ್ನು ವಿಳಂಬ ಮಾಡಿಸುತ್ತಿದ್ದಾರೆ.
ಆದರೆ ಶನಿವಾರ ಪಾಲಿಕೆಯ ಬಿಜೆಪಿ ಸದಸ್ಯ ಮತ್ತು ಆರ್ಟಿಒ ಏಜೆಂಟ್ ಆಗಿರುವ ವಿಶ್ವಾಸ್ ಇತರೆ ಏಜೆಂಟ್ ಜೊತೆಗೂಡಿ ಬಂದು ಶ್ರೀನಿವಾಸಯ್ಯಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಮಾಡಲಾಗಿದೆ.

ಈ ಬಗ್ಗೆ ಸರ್ಕಾರಿ ನೌಕರರ ಸಂಘದವರು ಸೋಮವಾರ (ಫೆ.18) ಸಭೆ ನಡೆಸಿ, ಸರ್ಕಾರಿ ನೌಕರರ ಮೇಲೆ ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಮಾಡಲಾಗಿದೆ ಎಂದು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆರ್'ಟಿಓ ಕಛೇರಿಯಲ್ಲಿ ನಡೆಯುತ್ತಿದ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಜನಸಾಮಾನ್ಯರಿಗೆ ಉತ್ತಮ ಸೇವೆ ಒದಗಿಸುವ ಕ್ರಮಕ್ಕೆ ಮುಂದಾಗಿದ್ದಕ್ಕೆ ನನಗೆ ಈ ರೀತಿ ಚಪ್ಪಲಿ ತೋರಿಸಿದ್ದಾರೆ ಎಂದು ಶ್ರೀನಿವಾಸ ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.












Click it and Unblock the Notifications