ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ಹಕ್ಕು ಪತ್ರ ವಿತರಿಸಿದ ಸಿಎಂ

ಶಿವಮೊಗ್ಗ, ಅಕ್ಟೋಬರ್ 20: ಮೂರು ದಿನಗಳ ಕಾಲ ಸ್ವಕ್ಷೇತ್ರ ಶಿಕಾರಿಪುರ ಪ್ರವಾಸದಲ್ಲಿ ಇರುವ‌ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಂಗಳವಾರ ತಮ್ಮ ಕ್ಷೇತ್ರದ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತುಗಳ ಮತ್ತು ಗ್ರಾಮೀಣ ಭಾಗದಲ್ಲಿ ನಿವೇಶನ ರಹಿತರಿಗೆ ನಿವೇಶನ ಹಕ್ಕುಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ, ""ರಾಜ್ಯದಲ್ಲಿ ಯಾವುದೇ ವ್ಯಕ್ತಿ ನಿವೇಶನ ರಹಿತರಾಗಿ ಇರಕೂಡದು ಹಾಗೂ ನಿವೇಶನ ರಹಿತರಿಗೆ ನಿವೇಶನ ನೀಡಬೇಕು ಎಂಬ ಗುರಿಯನ್ನು ಹೊಂದಿದ್ದು, ನಮ್ಮ ಅಧಿಕಾರ ಅವಧಿಯಲ್ಲಿ ಈಡೇರಿಸುವ ಗುರಿಯನ್ನು ಹೊಂದಿದ್ದೇನೆ'' ಎಂದರು.

ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ದೊರೆಯಬೇಕು, ಸರ್ಕಾರದ ಅನುದಾನ ಹಾಗೂ ಯೋಜನೆಗಳು ಬಡವರಿಗೆ ತಲುಪಿಸಬೇಕಾಗಿದೆ ಎಂದು ತಿಳಿಸಿದರು.

Shivamogga: The CM Yediyurappa Has Issued Various Privilege Claims To Beneficiaries

ಶಿವಮೊಗ್ಗ ಜಿಲ್ಲೆಯಲ್ಲಿ ಅತೀ ಹೆಚ್ಚು ಮೆಕ್ಕೆಜೋಳ ಬೆಳೆದಿದ್ದಾರೆ, ಮೆಕ್ಕೆಜೋಳ ಬಿಡಿಸುವ ಯಂತ್ರ ವಂತಿಗೆ ನೀಡಿದ ರೈತರಿಗೆ ನೀಡಲಾಗುತ್ತಿದೆ. ನಿವೇಶನ ಹಕ್ಕು ಪತ್ರಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತೇವೆ ಲಂಚ ಕೊಟ್ಟು ಯಾರೂ ಪಡೆಯಬೇಡಿ ಇದಕ್ಕೆ ಅವಕಾಶ ನೀಡಬೇಡಿ ಎಂದರು.

Shivamogga: The CM Yediyurappa Has Issued Various Privilege Claims To Beneficiaries

ಈ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ,‌ ಎಂ.ಐ.ಡಿ.ಬಿ ಅಧ್ಯಕ್ಷ, ಕೆ.ಎಸ್ ಗುರುಮೂರ್ತಿ, ಚನ್ನಗಿರಿ ಶಾಸಕ ಮಾಡಾಳ್ ವೀರೂಪಾಕ್ಷಪ್ಪ, ಅರಣ್ಯ ಸಮಿತಿ ಉಪಾಧ್ಯಕ್ಷ ಕೆ.ರೇವಣ್ಣಪ್ಪ, ತಾ.ಪಂ ಅಧ್ಯಕ್ಷ ಪ್ರಕಾಶ್, ಜಿ.ಪಂ ಆರೋಗ್ಯ ಸಮಿತಿ ಅಧ್ಯಕ್ಷೆ ರೇಣುಕಾ ಹನುಮಂತಪ್ಪ, ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ಜಿ.ಪಂ ಸಿಇಓ ವೈಶಾಲಿ ಇದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+