ನಿರಾಶೆಯಾದಾಗ ಇಂಥ ಮಾತುಗಳು ಬರುತ್ತವೆ: ಬೇಳೂರಿಗೆ ಈಶ್ವರಪ್ಪ ಡಿಚ್ಚಿ!

ಶಿವಮೊಗ್ಗ, ಜೂನ್ 21: ಕಾಂಗ್ರೆಸ್ ನ ಮುಖಂಡ ಬೇಳೂರು ಗೋಪಾಲಕೃಷ್ಣ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ನಾಯಕರ ಬಗ್ಗೆ ಅವಹೇಳನಕಾರಿ ಆಗಿ ಮಾತನಾಡಿದ್ದಾರೆ. ಕೆಲವು ವ್ಯಕ್ತಿಗಳು ರಾಜಕೀಯದಲ್ಲಿ ನಿರಾಶೆ ಆದಾಗ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅದಕ್ಕೆ ಬೇಳೂರು ಗೋಪಾಲಕೃಷ್ಣ ಸಾಕ್ಷಿ ಎಂದು ಶಿವಮೊಗ್ಗ ನಗರ ಶಾಸಕ- ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಇಲ್ಲಿ ತಿರುಗೇಟು ನೀಡಿದರು.

ಶಿವಮೊಗ್ಗ ನಗರದಲ್ಲಿ ಗುರುವಾರ ವಿಶ್ವಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಹೈಕಮಾಂಡ್ ಗೆ ಹವಾಲಾ ಹಣ ನೀಡಿರುವ ವಿಚಾರದ ಬಗ್ಗೆ ಇನ್ನು ನಾಲ್ಕು ದಿನಗಳ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

BJP leader KS Eshwarappa hits back to Belur Gopalakrishna

ಇಂದು ವಿಶ್ವ ಯೋಗ ದಿನಾಚರಣೆ ಎಲ್ಲೆಡೆ ಅಚರಿಸಲಾಗುತ್ತಿದೆ. ಇದು ಸಂತಸದ ವಿಷಯ. ಯೋಗವು ಶಾರೀರಿಕವಾಗಿ ಆರೋಗ್ಯ ಕೊಡುವುದಲ್ಲದೆ, ಮಾನಸಿಕವಾಗಿ ಧೈರ್ಯವನ್ನು ತುಂಬುತ್ತದೆ. ಪ್ರತಿ ನಿತ್ಯ ವ್ಯಾಯಾಮ ಮಾಡಿದರೆ ಉತ್ತಮ ಆರೋಗ್ಯವನ್ನು ಪಡೆಯಬಹುದು ಎಂದರು.

ಇಡೀ ಪ್ರಪಂಚ ಯೋಗವನ್ನು ಮೆಚ್ಚಿದೆ. ಯಾವುದೇ ಜಾತಿ- ಧರ್ಮಕ್ಕೆ ಸೀಮಿತವಾಗಿರದೆ ಎಲ್ಲ ವರ್ಗದ ಜನರಿಗೆ ಆರೋಗ್ಯವನ್ನು ನೀಡಿದೆ. ಯೋಗವು ಜಗತ್ತಿಗೆ ಭಾರತವು ನೀಡಿರುವ ಅದ್ಭುತ ಕೊಡುಗೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+