Get Updates
Get notified of breaking news, exclusive insights, and must-see stories!

ಹಾಲಪ್ಪ, ಯಡಿಯೂರಪ್ಪ, ಶೋಭಾಗೆ ಪರೋಕ್ಷವಾಗಿ ಕುಟುಕಿದ ಬೇಳೂರು

ಶಿವಮೊಗ್ಗ, ಡಿಸೆಂಬರ್ 08:ಯಡಿಯೂರಪ್ಪ ಜೈಲಿಗೆ ಹೋಗಿದ್ದಾರೆ ಎಂದರೆ ಕೇಸು ಹಾಕುತ್ತೇವೆ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ. ನಾವು ಯಡಿಯೂರಪ್ಪ ಹೆಸರು ಹೇಳೋದೆ ಇಲ್ಲ. ಮಾಜಿ ಮುಖ್ಯಮಂತ್ರಿ ಒಬ್ಬರು ಜೈಲಿಗೆ ಹೋಗಿದ್ದರು ಎಂದು ಹೇಳುತ್ತೇವೆ ಎಂದು ಶಿವಮೊಗ್ಗದಲ್ಲಿ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಮುಕನೊಬ್ಬ ಈ ಜಿಲ್ಲೆಯಲ್ಲಿ ಇದ್ದಾರೆ ಎಂದರೆ, ಏನು ಜೈಲಿಗೆ ಹಾಕುತ್ತಾರಾ ಎಂದು ಪರೋಕ್ಷವಾಗಿ ಹರತಾಳು ಹಾಲಪ್ಪಾಗೆ ಕುಟುಕಿದ ಬೇಳೂರು ಆಯನೂರು ಮಂಜುನಾಥ್ ಯಾವ ಕಡೆ ಬೇಕಾದರೂ ತಿರುಗಿಬಿಡುತ್ತಾರೆ.

ಅವರ ಹೇಳಿಕೆ ಗಂಭೀರವಾಗಿ ಪರಿಗಣಿಸಬೇಕಿಲ್ಲ. ಹಲವಾರು ಬೇಡಿಕೆ ವಿಚಾರಕ್ಕೆ ಒತ್ತಾಯಿಸಿ ಹಾಗೂ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಡಿ. 10 ಕ್ಕೆ ಯಡಿಯೂರಪ್ಪರ ಶಿಕಾರಿಪುರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.

ಪಂಚರಾಜ್ಯ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಹಿನ್ನಡೆ ಆಗಿದೆ. ಭಾಯ್ ಯೋ ಔರ್ ಬೆಹೆನೋ ಎಂಬ ಒಂದೇ ರೀತಿಯ ಭಾಷಣ ಕೇಳಿ ಕೇಳಿ ಜನರು ಬೇಸತ್ತಿದ್ದಾರೆ. ಈ ಬಾರಿ ಜನರು ಬದಲಾವಣೆ ಬಯಸಿದ್ದಾರೆ ಎಂದು ಬೇಳೂರು ತಿಳಿಸಿದರು.

 ರೈತರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ

ರೈತರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ

ರಾಜ್ಯ ಸರ್ಕಾರದಿಂದ ಯಾವುದೇ ಮ್ಯಾಜಿಕ್ ಮಾಡೋಕಾಗಲ್ಲ. ದೇಶದಲ್ಲಿ ಯಾವುದೇ ಸರ್ಕಾರ ಮಾಡದ ಸಾಲ ಮನ್ನಾ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಮಾಡಿದೆ. ರೈತರ ಸಾಲವನ್ನ ರಾಜ್ಯ ಸರ್ಕಾರ ಮಾಡೋಕೆ ಆಗಲ್ಲ ಎಂದಿದ್ದ ಯಡಿಯೂರಪ್ಪ ಈಗ ಏನು ಹೇಳ್ತಾರೆ. ಬರೀ ಸುಳ್ಳು ಹೇಳುವ ಯಡಿಯೂರಪ್ಪಗೆ ರೈತರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದರು.

 ಯಡಿಯೂರಪ್ಪ ಜ್ಯೋತಿಷಿನಾ?

ಯಡಿಯೂರಪ್ಪ ಜ್ಯೋತಿಷಿನಾ?

ರೈತ ವಿರೋಧಿ ಸರ್ಕಾರ ಎನ್ನುವ ಯಡಿಯೂರಪ್ಪ, ರೈತರ ಪರವಾದ ನಿಜವಾದ ಕಾಳಜಿ ಪ್ರದರ್ಶನ ಮಾಡಲಿ ಎಂದ ಬೇಳೂರು ಪದೇ ಪದೇ ಸರ್ಕಾರ ಬೀಳುತ್ತೆ ಎನ್ನುವ ಯಡಿಯೂರಪ್ಪ ಏನು ಜ್ಯೋತಿಷಿನಾ. ಈಗ ಸರ್ಕಾರ ಬೀಳುತ್ತೆ, ಆಗ ಸರ್ಕಾರ ಬೀಳುತ್ತೆ ಎನ್ನುವ ಯಡಿಯೂರಪ್ಪ, ಕೋಡಿಮಠದ ಶ್ರೀ ಗಳ ರೀತಿ ಜ್ಯೋತಿಷ್ಯ ಹೇಳುತ್ತಾರಾ ಎಂದು ಲೇವಡಿ ಮಾಡಿದರು.

 ಬಿಜೆಪಿಗೆ ಹೋಗಲ್ಲ

ಬಿಜೆಪಿಗೆ ಹೋಗಲ್ಲ

ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಕೆಲವು ಶಾಸಕರು ಹೋಗುವ ಬಗ್ಗೆ ಈ ನಾಯಕರು ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನ ಯಾವ ಶಾಸಕರು ಕೂಡ, ಬಿಜೆಪಿ ಗೆ ಹೋಗೊಲ್ಲ. ಸುಮ್ಮನೇ ಬರ ಸಮೀಕ್ಷೆ ಮಾಡಿ, ಸರ್ಕಾರ ಬೀಳಿಸುವ ಬಗ್ಗೆ ಯಾಕೆ ಮಾತನಾಡುತ್ತಿರಾ ಎಂದು ಬಿಜೆಪಿ ಮುಖಂಡರಿಗೆ ಗೋಪಾಲಕೃಷ್ಣ ಸೂಚಿಸಿದರು.

 ಕಾಂಗ್ರೆಸ್ ಗೆ ಬರಲು ತಯಾರಾಗಿದ್ದಾರೆ

ಕಾಂಗ್ರೆಸ್ ಗೆ ಬರಲು ತಯಾರಾಗಿದ್ದಾರೆ

ಆಪರೇಷನ್ ಕಮಲ ಮಾಡಿದರೆ, ನನ್ನ ಬಳಿ ನಾಲ್ಕಾರು ಬಿಜೆಪಿ ಶಾಸಕರು ಕಾಂಗ್ರೆಸ್ ಬರಲು ತಯಾರಾಗಿದ್ದಾರೆ. ಈ ಹಿಂದೆ ಆಪರೇಷನ್ ಕಮಲ ಮಾಡಿದ್ದು ನಾನೇ.ಎಲ್ಲಾ ಮಾಹಿತಿ ನನ್ನ ಬಳಿ ಇದೆ.ಈ ಹಿಂದೆ, ಆಪರೇಷನ್ ಕಮಲ ಮಾಡುವ ವೇಳೆ, ಅನಿಲ್ ಲಾಡ್ ಮನೆಯಲ್ಲಿ 43 ಶಾಸಕರನ್ನು ಕೂಡಿಟ್ಟಿದ್ದು ನಾನೇ. ಐದು ಜನ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ.

5 ಜನ ಬಿಜೆಪಿ ಶಾಸಕರನ್ನು ನಾನು ಕಾಂಗ್ರೆಸ್ ಗೆ ತಾರದೇ ಇದ್ದರೆ, ನನ್ನ ಹೆಸರು ಬೇಳೂರು ಗೋಪಾಲಕೃಷ್ಣ ಅಲ್ಲವೇ ಅಲ್ಲ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೂ ಹಾಗೂ, ಸಿ.ಎಂ.ಗೂ ವಿಷಯ ತಿಳಿಸಿದ್ದೇನೆ ಎಂದು ಬೇಳೂರು ಹೇಳಿದರು.

 ಭ್ರಷ್ಟಾಚಾರ ಮಾಡಿದ್ರೆ ಎಲ್ಲೋ ಹೋಗ್ತಿದ್ದೆ

ಭ್ರಷ್ಟಾಚಾರ ಮಾಡಿದ್ರೆ ಎಲ್ಲೋ ಹೋಗ್ತಿದ್ದೆ

ಶೋಭಾ ಕರಂದ್ಲಾಜೆ ಬೇಳೂರು ಗೋಪಾಲಕೃಷ್ಣ ಸಣ್ಣ ವ್ಯಕ್ತಿ ಎಂದು ಹೇಳಿದ್ದಾರೆ. ಹೌದು ನಾನು ಸಣ್ಣ ವ್ಯಕ್ತಿಯೇ ಆಗಲೀ. ಯಡಿಯೂರಪ್ಪ ತರ ಭ್ರಷ್ಟಾಚಾರ ಮಾಡಿದ್ರೆ ಎಲ್ಲೋ ಹೋಗ್ತಿದ್ದೆ ಎಂದು ವ್ಯಂಗ್ಯವಾಡಿದ ಬೇಳೂರು ನಾವೆಲ್ಲಾ ಸೇರಿ ನಿಮಗೆ ಎಂ.ಎಲ್.ಸಿ. ಮಾಡಿದ್ದೆವು. ನಿಮ್ಮ ಬಗ್ಗೆ ನಾನು ಬಿಚ್ಚಿಟ್ರೇ, ನೀವು ತಲೆ ತಗ್ಗಿಸಬೇಕಾಗುತ್ತದೆ. ಎಲ್ಲರೂ ಸಣ್ಣ ಮಟ್ಟದಿಂದಲೇ, ಎತ್ತರಕ್ಕೆ ಬೆಳೆಯುತ್ತಾರೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+