ವಿಜಯೇಂದ್ರ, ಶೋಭಾ ಕರಂದ್ಲಾಜೆಯಿಂದ ಸಿಎಂ ಬಿಎಸ್ವೈಗೆ ಸಂಕಷ್ಟ
ಶಿವಮೊಗ್ಗ, ಜೂನ್ 20: "ತಮ್ಮನ್ನು ಯಡಿಯೂರಪ್ಪನವರ ಮಾನಸ ಪುತ್ರ ಎಂದು ಹೇಳಿಕೊಳ್ಳುತ್ತಿದ್ದವರೇ ಈಗ ಅವರ ವಿರುದ್ದ ತಿರುಗಿಬಿದ್ದಿದ್ದಾರೆ"ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
Recommended Video
"ನಾನು ಭವಿಷ್ಯವನ್ನು ನುಡಿಯುತ್ತಿರುವುದಲ್ಲ, ಭವಿಷ್ಯ ನುಡಿಯಲು ನಾನು ಕೋಡಿಮಠದ ಶ್ರೀಗಳಲ್ಲ"ಎಂದ ಬೇಳೂರು, "ಬಿಜೆಪಿಯ ಹೆಚ್ಚಿನ ಶಾಸಕರು ತಮ್ಮತಮ್ಮ ಕ್ಷೇತ್ರಕ್ಕೆ ಅನುದಾನ ಬಂದಿಲ್ಲ"ಎಂದು ಅಸಮಾಧಾನ ಗೊಂಡಿದ್ದಾರೆ" ಎಂದು ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಬೇಳೂರು ಗೋಪಾಲಕೃಷ್ಣ, "ಪುತ್ರ ಬಿ.ವೈ.ವಿಜಯೇಂದ್ರ ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯವರಿಂದ ಯಡಿಯೂರಪ್ಪನವರು ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ"ಎಂದು ಬೇಳೂರು ಭವಿಷ್ಯ ನುಡಿದರು.

"ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಎಚ್.ವಿಶ್ವನಾಥ್ ಅವರಿಗೆ ಟಿಕೆಟ್ ಸಿಗಲಿಲ್ಲ. ಪಕ್ಷಾಂತರಿಗಳಿಗೆ ಇದೊಂದು ಸರಿಯಾದ ಪಾಠ"ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.
"ಬಿಜೆಪಿಯ ಭಿನ್ನಮತ ಈಗಾಗಲೇ ಸ್ಪೋಟಗೊಳ್ಲಬೇಕಿತ್ತು. ಆದರೆ, ಕೊರೊನಾದಿಂದ ಸ್ವಲ್ಪ ಮುಂದಕ್ಕೆ ಹೋಗಿದೆ ಅಷ್ಟೇ. ಇನ್ನಾರು ತಿಂಗಳಲ್ಲಿ ಮುಖ್ಯಮಂತ್ರಿಗಳು ಕುರ್ಚಿಯನ್ನು ಕಳೆದುಕೊಳ್ಳಲಿದ್ದಾರೆ"ಎಂದು ಬೇಳೂರು ಗೋಪಾಲಕೃಷ್ಣ ಅಭಿಪ್ರಾಯ ವ್ಯಕ್ತ ಪಡಿಸಿದರು.
"ನಾನು ಕೋಡಿಮಠದ ಶ್ರೀಗಳಲ್ಲ. ಆದರೆ, ಕೋಡಿಶ್ರೀಗಳು ಯಡಿಯೂರಪ್ಪನವರ ಜೊತೆ ಹೊಂದಾಣಿಕೆ ಮಾಡಿಕೊಂಡಂತಿದೆ"ಎಂದು ಬೇಳೂರು ಗೋಪಾಲಕೃಷ್ಣ ಲೇವಡಿ ಮಾಡಿದರು.












Click it and Unblock the Notifications