ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ: 6 ಜನರ ಬಂಧನ; ಯಾರ ಪಾತ್ರ ಏನು?
ಶಿವಮೊಗ್ಗ, ಫೆಬ್ರವರಿ 23: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಎಫ್‍ಐಆರ್ ದಾಖಲಾಗಿದ್ದು, 6 ಜನರನ್ನು ಬಂಧನ ಮಾಡಲಾಗಿದೆ. ಬಂಧಿತ ಆರೋಪಿಗಳ ಸಂಪೂರ್ಣ ಬಯೋಡೇಟಾವನ್ನು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ ಈವರೆಗೂ ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ. ಲಕ್ಷ್ಮಿಪ್ರಸಾದ್ ತಿಳಿಸಿದರು.
Recommended Video

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್, ಇಬ್ಬರು ಆರೋಪಿಗಳನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿದ್ದು, ಉಳಿದ ನಾಲ್ವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು.

ಪ್ರಕರಣದ ಪ್ರಮುಖ ಆರೋಪಿಗಳಾದ ಖಾಸಿಫ್ (30), ಸಯ್ಯದ್ ನದೀಂ ಎಂಬುವವರನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈಗ ಆಸೀಫ್ ಉಲ್ಲಾ ಖಾನ್, ರಿಹಾನ್ ಷರೀಫ್, ನಿಹಾನ್, ಅಬ್ದುಲ್ ಅಫ್ನಾನ್ ಎಂಬುವವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳ ಪಾತ್ರ ಮತ್ತು ಹಿನ್ನೆಲೆ
ಎ1- ಕಾಸಿಫ್:
30 ವರ್ಷದ ಖಾಸಿಫ್ ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿ. ಖಾಸಿಫ್ ಗ್ಯಾಂಗ್ ಹಾಗೂ ಹರ್ಷನ ಗ್ಯಾಂಗ್‍ಗೆ 2020ರಲ್ಲಿ ಶಿವಮೊಗ್ಗ ಜೈಲಿನಲ್ಲಿ ಗಲಾಟೆಯಾಗಿತ್ತು. ಅಂದಿನಿಂದ ದ್ವೇಷ ಹೊಂದಿದ್ದ ಖಾಸಿಫ್ ಹುಡುಗರನ್ನು ರೆಡಿ ಮಾಡಿ ದಾಳಿ ಮಾಡಿಸಿದ್ದ. ಕೊಲೆ ನಡೆದಿದ್ದ ದಿನ ಈತ ಕೂಡ ಮಚ್ಚು ಬೀಸಿದ್ದಾನೆ. ಈತನನ್ನು ಕ್ಲಾರ್ಕ್ ಪೇಟೆ ಮನೆಯಲ್ಲೇ ಅರೆಸ್ಟ್ ಮಾಡಲಾಗಿದೆ.

ಎ2- ನದೀಂ
23 ವರ್ಷದ ನದೀಮ್ ಕೂಡ ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿಯಾಗಿದ್ದು, ಕೊಲೆ ಸಂಚಿನಲ್ಲಿ ಭಾಗಿಯಾದ ಆರೋಪ ನದೀಂ ಮೇಲಿದೆ. ಕೊಲೆಯಾದ ದಿನ ಆರೋಪಿಗಳ ರಕ್ಷಣೆಗೆ ಸಹಾಯ ಮಾಡಿದ್ದ. ಈತನನ್ನು ಭಾನುವಾರ ಮಧ್ಯರಾತ್ರಿ ಕ್ಲಾರ್ಕ್ ಪೇಟೆಯ ಈತನ ಮನೆಯಲ್ಲಿ ವಶಕ್ಕೆ ಪಡೆಯಲಾಗಿದೆ.
ಚಿತ್ರಗಳು; ಗಲಭೆ ಬಳಿಕ ಮಂಗಳವಾರ ಶಿವಮೊಗ್ಗದ ಚಿತ್ರಣ
ಎ3- ಆಸೀಫ್ ಉಲ್ಲಾ ಖಾನ್
21 ವರ್ಷದ ಆಸೀಫ್ ಉಲ್ಲಾ ಖಾನ್ ಕೊಲೆ ಮಾಡುವ ಉದ್ದೇಶದಿಂದ ಖಾಸಿಫ್‍ನ ಮಾತಿನಂತೆ ಹರ್ಷನ ಮೇಲೆ ದಾಳಿ ಮಾಡಿದ್ದಾನೆ. ಹರ್ಷನ ಮೇಲೆ ಮಚ್ಚು ಬೀಸಿದ್ದವನಲ್ಲಿ ಆಸೀಫ್ ಉಲ್ಲಾ ಖಾನ್ ಎರಡನೇ ಆರೋಪಿ.
ಎ4- ರಿಯಾನ್ ಶರೀಫ್ ಅಲಿಯಾಸ್ ಖಸಿ
22 ವರ್ಷದ ಈತ ಕ್ಲಾರ್ಕ್ ಪೇಟೆ ನಿವಾಸಿ ರಿಯಾನ್ ಶರೀಫ್ ಕೊಲೆಗೂ ಮೊದಲು ಖಾಸಿಫ್‍ನ ಪ್ಲಾನಿಂಗ್ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದ. ಅಲ್ಲದೆ ಹರ್ಷನ ಮೇಲೆ ಹಲ್ಲೆ ಮಾಡಿದ್ದ. ಈತನನ್ನು ಹಾಸನದಲ್ಲಿ ಬಂಧನ ಮಾಡಲಾಗಿದೆ.

ಎ5- ನಿಹಾನ್ ಅಲಿಯಾಸ್ ಮುಜಾಹಿದ್
23 ವರ್ಷದ ಈತ ಕೂಡ ಹರ್ಷನ ಕೊಲೆ ಮಾಡಿದವರಲ್ಲಿ ಪ್ರಮುಖನಾಗಿದ್ದಾನೆ. ಈತನು ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿಯಾಗಿದ್ದು, ಸ್ನೇಹಿತರ ಗ್ಯಾಂಗ್ ಜೊತೆ ಮೀಟಿಂಗ್ ಮಾಡುತ್ತಿದ್ದ. ಖಾಸಿಫ್‍ನ ಅಣತಿಯಂತೆ ಹರ್ಷನ ಮೇಲೆ ಅಟ್ಯಾಕ್ ಮಾಡಿದ್ದು, ಚಿಕ್ಕಮಗಳೂರಿನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎ6- ಅಬ್ದುಲ್ ಅಪ್ನಾನ್
ಅಬ್ದುಲ್ ಅಪ್ನಾನ್ ವಯಸ್ಸು ಈಗಿನ್ನು 21. ಕೊಲೆಯಲ್ಲಿ ನೇರವಾಗಿ ಭಾಗಿಯಾಗಿಲ್ಲವಾದರೂ ಪರೋಕ್ಷವಾಗಿ ಭಾಗಿಯಾಗಿದ್ದಾನೆ. ಹರ್ಷನ ಚಟುವಟಿಕೆಗಳು, ಹೋಗಿ ಬರುವ ದಾರಿ, ಒಬ್ಬಂಟಿಯಾಗಿದ್ದಾನೋ ಅಥವಾ ಇಲ್ಲವೋ ಹೀಗೆ ಪ್ರತಿಯೊಂದು ಮಾಹಿತಿಯನ್ನು ಖಾಸಿಫ್‍ಗೆ ಈತ ಮಾಹಿತಿ ನೀಡುತ್ತಿದ್ದ. ಕೊಲೆ ಬಳಿಕ ಈತ ಆರೋಪಿಗಳ ರಕ್ಷಣೆಗೆ ಪ್ರಯತ್ನಪಟ್ಟಿದ್ದಾನೆ.
ಇನ್ನು ಜಿಲಾನ್ ಎಂಬುವವನು ಹರ್ಷನ ಕೊಲೆ ನಡೆದ ಬಳಿಕ ಆರೋಪಿಗಳನ್ನು ಕಾರಿನಲ್ಲಿ ಕರೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ವಿಫ್ಟ್ ಕಾರಿನಲ್ಲಿ ಭದ್ರಾವತಿ ಕಡೆ ತೆರಳಿ, ಅಲ್ಲಿ ಎಲ್ಲರನ್ನೂ ಡೈವರ್ಟ್ ಮಾಡುವ ಕೆಲಸ ಮಾಡಿದ್ದಾನೆ ಎಂದು ಶಿವಮೊಗ್ಗ ಪೊಲೀಸರು ತಿಳಿಸಿದ್ದಾರೆ.
ಎಲ್ಲರೂ ಸಣ್ಣ ವಯಸ್ಸಿನವರು
ಬಂಧಿತ ಆರೋಪಿಗಳೆಲ್ಲ 21ರಿಂದ 22 ವರ್ಷ ವಯಸ್ಸಿನವರು. ಖಾಸಿಫ್ ಮಾತ್ರ 30 ವರ್ಷದವನು. ಎಲ್ಲರೂ ಕ್ಲಾರ್ಕ್ ಪೇಟೆ ನಿವಾಸಿಗಳಾಗಿದ್ದಾರೆ. ಇವರು ಒಟ್ಟಿಗೆ ಇರುತ್ತಿದ್ದರು. ಇತ್ತೀಚೆಗೆ ಎಲ್ಲರೂ ಬೇರೆ ಬೇರೆ ಕಡೆ ವಾಸವಾಗಿದ್ದಾರೆ. ಖಾಸಿಫ್ ಮಾತ್ರ ಕ್ಲಾರ್ಕ್ ಪೇಟೆಯಲ್ಲಿ ವಾಸವಾಗಿದ್ದಾನೆ ಎಂದು ಶಿವಮೊಗ್ಗ ಎಸ್ಪಿ ಮಾಹಿತಿ ನೀಡಿದರು.
ಈವರೆಗೆ 12 ಮಂದಿಯ ವಿಚಾರಣೆ
ಹತ್ಯೆ ಪ್ರಕರಣ ಸಂಬಂಧ 12 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಶಿವಮೊಗ್ಗ ಎಸ್ಪಿ ಲಕ್ಷ್ಮಿಪ್ರಸಾದ್ ತಿಳಿಸಿದ್ದು, ಪ್ರಕರಣ ಸಂಬಂಧ ಮತ್ತಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದರು.
ಹತ್ಯೆಗೆ ಕಾರಣವೇನು?
ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಂಧಿತರ ವಿಚಾರಣೆ ಬಳಿಕ ಈ ಕುರಿತು ಸ್ಪಷ್ಟತೆ ಸಿಗಲಿದೆ. ಭಾನುವಾರ ರಾತ್ರಿ ಹರ್ಷನನ್ನು ಸ್ವಲ್ಪ ದೂರದವರೆಗೆ ಓಡಿಸಿಕೊಂಡು ಹೋಗಿ ಹತ್ಯೆ ಮಾಡಿದ್ದಾರೆ ಎಂದು ಶಿವಮೊಗ್ಗ ಎಸ್ಪಿ ಲಕ್ಷ್ಮಿಪ್ರಸಾದ್ ತಿಳಿಸಿದರು.
-
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ












Click it and Unblock the Notifications