ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಡಕೆ ಕಾರ್ಯಪಡೆಯ ಮೊದಲ ಸಭೆ; 8 ನಿರ್ಣಯಗಳು

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಫೆಬ್ರವರಿ 9; ಕರ್ನಾಟಕ ಸರ್ಕಾರ ಅಡಕೆ ಬೆಳೆಗಾರರ ಹಿತರಕ್ಷಣೆಗಾಗಿ ರಾಜ್ಯಮಟ್ಟದ ಕಾರ್ಯಪಡೆಯನ್ನು ರಚನೆ ಮಾಡಿತ್ತು. ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಈ ಕಾರ್ಯಪಡೆಯ ಅಧ್ಯಕ್ಷರಾಗಿದ್ದಾರೆ.

ಮಂಗಳವಾರ ಶಿವಮೊಗ್ಗದಲ್ಲಿ ಅಡಕೆ ಕಾರ್ಯಪಡೆಯ ಮೊದಲ ಸಭೆ ನಡೆಯಿತು. ಮಲೆನಾಡು ಅಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಅಡಕೆ ಕಾರ್ಯಪಡೆಗೆ 10 ಕೋಟಿ ಅನುದಾನ ಕೊಟ್ಟ ಸರ್ಕಾರಅಡಕೆ ಕಾರ್ಯಪಡೆಗೆ 10 ಕೋಟಿ ಅನುದಾನ ಕೊಟ್ಟ ಸರ್ಕಾರ

ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ, ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕ್ಯಾಂಪ್ಕೋದಿಂದ ಅಮೆಜಾನ್ ಮೂಲಕ ಅಡಿಕೆ, ಕಾಳುಮೆಣಸು ಮಾರಾಟಕ್ಯಾಂಪ್ಕೋದಿಂದ ಅಮೆಜಾನ್ ಮೂಲಕ ಅಡಿಕೆ, ಕಾಳುಮೆಣಸು ಮಾರಾಟ

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅಡಕೆ ಕಾರ್ಯಪಡೆಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಅಡಕೆ ಸಂಬಂಧಿತ ಸಂಶೋಧನೆ ಮತ್ತು ಇನ್ನಿತರ ಚಟುವಟಿಕೆಗಳಿಗೆ ಸಹಾಯಕವಾಗುವಂತೆ 10 ಕೋಟಿ ರೂ. ಅನುದಾನವನ್ನು ಕಾರ್ಯಪಡೆಗೆ ನೀಡಲಾಗಿದೆ.

ಮಲೆನಾಡಿನ ಬಾಲ್ಯ ಅಡಕೆ ಹಾಳೆಯ ದೋಣಿಯಂತೆ ಮುಳುಗುವುದೇ ಇಲ್ಲ! ಮಲೆನಾಡಿನ ಬಾಲ್ಯ ಅಡಕೆ ಹಾಳೆಯ ದೋಣಿಯಂತೆ ಮುಳುಗುವುದೇ ಇಲ್ಲ!

ಸಭೆಯಲ್ಲಿನ ನಿರ್ಣಯಗಳು

ಸಭೆಯಲ್ಲಿನ ನಿರ್ಣಯಗಳು

* ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಹಿಂದನ ಸರ್ಕಾರ ಸುಪ್ರೀಂ ಕೋರ್ಟ್‍ನಲ್ಲಿ ಅಫಿಡವಿಟ್ ಸಲ್ಲಿಸಿದೆ. ಇದರ ವಿರುದ್ಧ ವಾದ ಮಂಡಿಸಲು ಸುಪ್ರೀಂ ಕೋರ್ಟ್‍ನಲ್ಲಿ ಹಿರಿಯ ವಕೀಲರನ್ನು ಸರ್ಕಾರ ನೇಮಿಸಬೇಕು.

* ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯದಲ್ಲಿ ಅಡಕೆ ಕುರಿತು ಸಂಶೋಧನೆ ನಡೆಸಲಾಗುತ್ತಿದೆ. ಸಂಶೋದನಾ ವರದಿ ಬರುವವರೆಗೆ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ ಮುಂದೂಡಬೇಕಿದೆ. ಈ ಕುರಿತು ಕೇಂದ್ರ ಸರ್ಕಾರದ ವಕೀಲರು ಕೋರ್ಟ್‍ಗೆ ಮನವರಿಕೆ ಮಾಡಬೇಕು. ಇದರ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು.

ಅಡಕೆಗೆ ಬೆಂಬಲ ಬೆಲೆ

ಅಡಕೆಗೆ ಬೆಂಬಲ ಬೆಲೆ

* ಅಡಕೆಯ ಕನಿಷ್ಠ ಬೆಂಬಲ ಬೆಲೆ ದರವನ್ನು ಐದಾರು ವರ್ಷದ ಹಿಂದೆ ನಿಗದಿಪಡಿಸಲಾಗಿದೆ. ತಜ್ಞರು, ಬೆಳೆಗಾರರಿಂದ ಮಾಹಿತಿ ಸಂಗ್ರಹಿಸಿ ಪರಿಷ್ಕೃತ ಎಂಎಸ್‍ಪಿ ದರ ನಿಗದಿ ಮಾಡಬೇಕು. ಈಗ 250 ರೂ. ಕನಿಷ್ಠ ಬೆಂಬಲ ಇದೆ. ಇದನ್ನು ಪ್ರತಿ ಕೆಜಿಗೆ 350 ರೂ. ನಿಗದಿ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇದರಿಂದ ವಿದೇಶದಿಂದ ಕಡಿಮೆ ದರಕ್ಕೆ ಅಡಕೆ ಆಮದಾಗುವುದು ತಪ್ಪಲಿದೆ.

* ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಅಡಿ ಶಿವಮೊಗ್ಗ ಜಿಲ್ಲೆಗೆ ಅನಾನಸ್ ಹಣ್ಣನ್ನು ನಿಗದಿಪಡಿಸಲಾಗಿದೆ. ಆದರೆ ಈ ಯೋಜನೆ ಅಡಿ ಜಿಲ್ಲೆಗೆ ಅಡಕೆ ಬೆಳೆಯನ್ನು ಪರಿಗಣಿಸುವಂತೆ ಶಿಫಾರಸು ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುತ್ತಿದೆ.

ಅಡಕೆ ಉಪಯೋಗದ ಪ್ರಯೋಗ

ಅಡಕೆ ಉಪಯೋಗದ ಪ್ರಯೋಗ

* ಅಡಕೆ ಬೆಳೆ ಸಂಬಂಧ ತೋಟಗಾರಿಕ ವಿಶ್ವವಿದ್ಯಾಲಯ ಕೈಗೊಂಡಿರುವ ಕೌಶಲ್ಯ ತರಬೇತಿ ಕಾರ್ಯಕ್ರಮಗಳಿಗೆ ಟಾಸ್ಕ್ ಫರ್ಸ್‍ನಿಂದ ಸಹಕಾರ.

* ಅಡಕೆಯನ್ನು ಉಪಯೋಗಿಸಿಕೊಂಡು ಪರ್ಯಾಯ ಪ್ರಯೋಗಗಳಿಗೆ ಟಾಸ್ಕ್ ಫೋರ್ಸ್‍ನಿಂದ ಹೆಚ್ಚಿನ ಸಹಕಾರ ನೀಡಲು ನಿರ್ಧಾರ.

ಒಂದು ತಂಡ ರಚನೆ

ಒಂದು ತಂಡ ರಚನೆ

* ಎಂ. ಎಸ್. ರಾಮಯ್ಯ ವಿವಿ, ಚೌಡಪ್ಪ ಅವರ ನೇತೃತ್ವದಲ್ಲಿ ಅಡಕೆ ಕುರಿತ ಸಂಶೋಧನೆಗೆ ತಂತ್ರಜ್ಞರ ತಂಡ.

* ಅಡಕೆಯ ಉತ್ಪಾದನಾ ವೆಚ್ಚ ಕುರಿತು ವರದಿ ನೀಡಲು ತೋಟಗಾರಿಕ ಇಲಾಖೆ ಜೊತೆ ಸೇರಿ ಮಾಹಿತಿ ಸಂಗ್ರಹಿಸಲು ಒಂದು ತಂಡ ರಚನೆ. ಹದಿನೈದು ದಿನದೊಳಗೆ ವರದಿ ಸಲ್ಲಿಸಲು ಸೂಚನೆ.

English summary
State level task force on arecanut first meeting held on February 9, 2021 at Shivamogga. BJP MLA of Tirthahalli Araga Jnanendra chairmen for task force.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X