ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪ್ಪು ಪುಣ್ಯಸ್ಮರಣೆ; ಶಿವಮೊಗ್ಗದಲ್ಲಿ 3 ಸಾವಿರ ಜನರಿಗೆ ಬಾಡೂಟದ ವ್ಯವಸ್ಥೆ

By ಶಿವಮೊಗ್ಗ
|
Google Oneindia Kannada News

ಶಿವಮೊಗ್ಗ, ಅಕ್ಟೋಬರ್‌, 19; ನಟ ಡಾ.ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆ ಶಿವಮೊಗ್ಗದಲ್ಲಿ 3 ಸಾವಿರ ಜನರಿಗೆ ಅಭಿಮಾನಿಗಳು ಬಾಡೂಟ ಹಾಕಿದ್ದಾರೆ.

ನಗರದಲ್ಲಿ ಅಭಿಮಾನಿಗಳಿಂದ ನಟ ಪುನೀತ್ ರಾಜ್‌ಕುಮಾರ್ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಮಾಡಲಾಯಿತು. ಪುನೀತ್‌ ರಾಜ್‌ಕುಮಾರ್‌ ಪುಣ್ಯಸ್ಮರಣೆ ಹಿನ್ನೆಲೆ ಮೂರು ಸಾವಿರ ಜನರಿಗೆ ಬಾಡೂಟ ಬಡಿಸಿ, ಯುವಕರು ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಿದರು. ವಿದ್ಯಾನಗರದ ಯಾಲಕಪ್ಪನಕೇರಿಯ ಶ್ರೀವೀರಕೇಸರಿ ಯುವಕರ ಸಂಘದ ವತಿಯಿಂದ ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆ ಮಾಡಲಾಯಿತು.

ಕೊಡಚಾದ್ರಿ ರೋಪ್‌-ವೇ ಯೋಜನೆಗೆ ಅಸ್ತು, ಏನಿದು ಯೋಜನೆ?ಕೊಡಚಾದ್ರಿ ರೋಪ್‌-ವೇ ಯೋಜನೆಗೆ ಅಸ್ತು, ಏನಿದು ಯೋಜನೆ?

ಹೂವಿನಲ್ಲಿ ಅರಳಿದ ಅಪ್ಪು

ಬಿ.ಹೆಚ್.ರಸ್ತೆ ಪಕ್ಕದಲ್ಲಿಯೇ ವಿದ್ಯಾನಗರದಲ್ಲಿ ವಿವಿಧ ಹೂವುಗಳಿಂದ ಅಲಂಕೃತವಾದ ಮಂಟಪವನ್ನು ನಿರ್ಮಿಸಲಾಗಿತ್ತು. ಅದರಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರವನ್ನು ಇರಿಸಲಾಗಿದ್ದು, ಹೆಚ್ಚಾಗಿ ಗಮನ ಸೆಳೆದಿದೆ. ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಯುವಕರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಭಿಮಾನವನ್ನು ಮೆರೆದಿದ್ದಾರೆ. ಮೊದಲ ಪುಣ್ಯಸ್ಮರಣೆ ಅಂಗವಾಗಿ ಸುಮಾರು 3 ಸಾವಿರ ಜನರಿಗೆ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ನಾಲ್ಕು ಕುರಿ, 2 ಕ್ವಿಂಟಾಲ್ ಚಿಕನ್, ಮೊಟ್ಟೆ ಬಳಸಿ ಬಾಡೂಟ ತಯಾರಿಸಲಾಗಿತ್ತು. ವಿದ್ಯಾನಗರದ ಮನೆಗಳು, ಮುಖ್ಯ ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರಿಗೆ ಊಟ ಬಡಿಸಿ ಅಭಿಮಾನವನ್ನು ಮೆರೆದಿದ್ದಾರೆ.

Appu death anniversary; Non veg meals served by fans in Shivamogga

ಅಭಿಮಾಮಾನಿಗಳ ಮನಸ್ಸಲ್ಲಿ ಅಪ್ಪು ಅಮರ

ನಟ ಪುನೀತ್ ರಾಜ್‌ಕುಮಾರ್ ಅವರನ್ನು ಪ್ರತಿ ವರ್ಷ ಇದೆ ರೀತಿ ಸ್ಮರಣೆ ಮಾಡಿಕೊಳ್ಳುತ್ತೇವೆ ಎಂದು ಶ್ರೀ ವೀರಕೇಸರಿ ಯುವಕರ ಸಂಘದ ಹರೀಶ್ ತಿಳಿಸಿದರು. ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ನಮ್ಮನ್ನು ಅಗಲಿರಬಹದು, ಆದರೆ ನಮ್ಮ ಮನಸಲಿ ಅವರು ಎಂದಿಗೂ ಉಳಿದಿರುತ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಕನ್ನಡಿಗರು, ಅದರಲ್ಲೂ ಅಭಿಮಾನಿಗಳು ಒಂದೇ ಒಂದು ಕ್ಷಣ ಅವರನ್ನು ಮರೆತಿಲ್ಲ, ಮರೆಯುವುದೂ ಇಲ್ಲ. ಕನ್ನಡಿಗರ ಎದೆಯಲ್ಲಿ ಅಪ್ಪು ಎಂದಿಗೂ ಜೀವಂತ. ದೊಡ್ಮನೆ ರಾಜಕುಮಾರ ದೈಹಿಕವಾಗಿ ಇಲ್ಲದಿದ್ದರೂ, ಅವರ ನೆನಪುಗಳ ಜೊತೆ ಅಭಿಮಾನಿಗಳು ಜೀವನ ನಡೆಸುತ್ತಿದ್ದಾರೆ.

Appu death anniversary; Non veg meals served by fans in Shivamogga

500 ಕಿ.ಲೋ. ಪಾದಯಾತ್ರೆಗೆ ಸಜ್ಜು

ಇನ್ನು ಕನ್ನಡ ಚಿತ್ರರಂಗದ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಗಲಿ ಇದೇ ಅಕ್ಟೋಬರ್ 29ರಂದು ಒಂದು ವರ್ಷ ಆಗಲಿದೆ. ಆದರೆ ಅಪ್ಪು ಅಗಲಿಕೆಯ ನೋವು ಅಭಿಮಾನಿಗಳನ್ನು ಸದಾ ಕಾಡುತ್ತಿದೆ. ಪ್ರತಿನಿತ್ಯ ನೂರಾರು ಅಭಿಮಾನಿಗಳು ಅಪ್ಪು ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಇದೀಗ ಧಾರವಾಡದ ಮಹಿಳೆಯೊಬ್ಬರು ವಿಭಿನ್ನವಾಗಿ ಅಪ್ಪುಗೆ ತಮ್ಮ ಅಭಿಮಾನವನ್ನು ತೋರಿದ್ದಾರೆ. ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ದಾಕ್ಷಾಯಣಿ ಪಾಟೀಲ್ 500 ಕಿಲೋ ಮೀಟರ್‌ವರೆಗೆ ಪಾದಯಾತ್ರೆ ಕೈಗೊಳ್ಳುವ ಮೂಲಕ ಅಭಿಮಾನ ಮೆರೆಯಲು ಸಜ್ಜಾಗಿದ್ದಾರೆ.

English summary
Puneeth Rajkumar death anniversary held on October 29th, non veg meals to 3,000 people by fans in Shivamogga, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X