ಈ ಬಾರಿ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ: ಸಿಎಂ ಬಿಎಸ್ವೈ
ಶಿವಮೊಗ್ಗ, ಡಿಸೆಂಬರ್ 7: ಈ ಬಾರಿಯ ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮಂಡಿಸಲಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಮೊದಲು ಗೋಹತ್ಯೆ ನಿಷೇಧ ಕಾಯ್ದೆಯನ್ನು ಅಂಗೀಕರಿಸುವಂತೆ ಸದನ ಸಮಿತಿ ಒಪ್ಪಿಗೆ ನೀಡಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ತಿರಸ್ಕರಿಸಿದ್ದರು ಎಂದರು.
ಈ ಬಾರಿ ಅಧಿವೇಶನದಲ್ಲಿ ಮತ್ತೆ ಮಂಡಿಸಲಾಗುವುದು ರಾಜ್ಯಪಾಲರ ಒಪ್ಪಿಗೆ ದೊರೆಯುವ ಭರವಸೆ ಇದೆ. ಅದೇ ರೀತಿ ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ಮಸೂದೆಯನ್ನು ಮಂಡಿಸಲಾಗುವುದು, ಈ ಬಾರಿ ಮಂಡಿಸುವುದಿಲ್ಲವೆಂದು ಹೇಳಿದರು.

ಡಿ.8ರ ಭಾರತ್ ಬಂದ್ ಕರೆ ನೀಡಲಾಗಿದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಂದ್ ಮಾಡದಂತೆ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಪದೇ ಪದೇ ಬಂದ್ ಮಾಡಲು ಕರೆ ನೀಡಿದರೆ, ಸಾರ್ವಜನಿಕರಿಗೆ ಹಾಗೂ ಆರ್ಥಿಕತೆಗೆ ತೊಂದರೆ ಆಗಲಿದೆ. ಭಾರತ ಬಂದ್ ನಂತಹ ಕಟು ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಹಾಗಾಗಿ ರೈತರು ಸರ್ಕಾರದ ಜೊತೆಗೆ ಕುಳಿತು ಸಮಸ್ಯೆ ಬಗೆಹರಿಸಿಕೊಂಡರೆ ಒಳ್ಳೆಯದು ಎಂದು ಸಲಹೆ ನೀಡಿದರು.












Click it and Unblock the Notifications