Breaking: ಕ್ರೀಡಾಕೂಟದಲ್ಲಿ ಗಲಾಟೆ, ಶಿರಾಳಕೊಪ್ಪದಲ್ಲಿ ಅಂಗಡಿಗಳು ಬಂದ್

ಶಿವಮೊಗ್ಗ, ಆಗಸ್ಟ್ 22: ಶಾಲಾ ಮಟ್ಟದ ಕ್ರೀಡಾಕೂಟದ ವೇಳೆ ಕ್ಷುಲಕ ವಿಚಾರವಾಗಿ ಶುರುವಾದ ಗಲಾಟೆಯಿಂದಾಗಿ ಶಿರಾಳಕೊಪ್ಪ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ದಿಢೀರ್ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.

ಶಿರಾಳಕೊಪ್ಪದ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ವಲಯ ಮಟ್ಟದ ಶಾಲಾ ಕ್ರೀಡಾಕೂಟದ ವೇಳೆ ಕ್ಷುಲ್ಲಕ ವಿಚಾರವಾಗಿ ಗಲಾಟೆಯಾಗಿದೆ. ಮಕ್ಕಳೊಂದಿಗೆ ಬಂದಿದ್ದ ಪೋಷಕರು ಕೂಡ ಮಾತಿಗೆ ಮಾತು ಬೆಳೆಸಿದ್ದಾರೆ. ಬಳಿಕ ಕ್ರೀಡಾಂಗಣದಿಂದ ಹೊರ ಬಂದ ವೇಳೆ ಗಲಾಟೆ ಹೆಚ್ಚಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಯುವಕನ ಮೇಲೆ ಹಲ್ಲೆ

ಕ್ರೀಡಾಂಗಣದಿಂದ ಹೊರ ಬಂದ ಒಂದು ಕೋಮಿನ ಯುವಕರ ಗುಂಪು ಮತ್ತೊಂದು ಕೋಮಿನ ಗುಂಪಿನ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಶಿರಾಳಕೊಪ್ಪ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದು, ಗಸ್ತು ಆರಂಭಿಸಿದ್ದಾರೆ. ಗಲಾಟೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

All Shops Closed in Shiralakoppa after Clash between 2 Groups in Sports Event

ಶಿವಮೊಗ್ಗ ನಗರದಲ್ಲಿ ಇಂತಹ ಘಟನೆಗಳು ಹಾಗಿಂದಾಗೆ ನಡೆಯುತ್ತಿವೆ, ಕಳೆದ ವಾರ ಶಿವಮೊಗ್ಗದಲ್ಲಿ ಸಾವರ್ಕರ್‌ ಫೋಸ್ಟರ್ ಹಾಕುವ ವಿಚಾರಕ್ಕೆ ಜಗಳ ನಡೆದಿದ್ದುಎರಡು ದಿನಗಳವರೆಗೆ ನಗರದ ಕೆಲೆವೆ ನಿಷೇಧಾಜ್ಞೆ ಏರಲಾಗಿತ್ತು. ಇದರಿಂದ ವರ್ತಕರಿಗೆ ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡಿತ್ತು. ಆ ಘಟನೆ ಮುಗಿಯುವ ಮುನ್ನ ಜಿಲ್ಲೆಯಲ್ಲಿ ಮತ್ತೊಂದು ಘಟನೆ ನಡೆದಿದ್ದು, ಜನತೆಯಲ್ಲಿ ಆತಂಕ ಮನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+