ಭ್ರಷ್ಟ ರಾಜಕಾರಣಿಗಳ ಆಸ್ತಿ ಮುಟ್ಟುಗೋಲು: ಎಎಪಿ ಪ್ರಣಾಳಿಕೆ
ಶಿವಮೊಗ್ಗ, ಏ.11: ಸ್ಥಳೀಯ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅದಕ್ಕೆ ತಕ್ಕಂತೆ ಭರವಸೆಗಳನ್ನು ನೀಡಲಾಗುತ್ತಿದೆ ಎಂದು ಶಿವಮೊಗ್ಗ ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ ಮಾಡಿದ ಅಭ್ಯರ್ಥಿ ಶ್ರೀಧರ್ ಕಲ್ಲಹಳ್ಳ ಹೇಳಿದ್ದಾರೆ. ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕವೇ ಪಕ್ಷ ಕಟ್ಟಿಕೊಂಡು ಲೋಕಸಭೆ ಕಣಕ್ಕಿಳಿದಿರುವ ಎಎಪಿ ಅಭ್ಯರ್ಥಿಗಳು ತಮ್ಮ ಕ್ಷೇತ್ರಕ್ಕೆ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಆಭ್ಯರ್ಥಿ ರವಿಕೃಷ್ಣಾ ರೆಡ್ಡಿ ಅವರು ಕ್ಷೇತ್ರದ ಜನತೆಗೆ ಮನೆಗೊಂದು ಹಸು ನೀಡುವುದರ ಜತೆಗೆ ಸಾಕಷ್ಟು ವಾಗ್ದಾನಗಳ ಮಹಾಪೂರವನ್ನೇ ಹರಿಸಿದ್ದರು. [ಪೂರ್ತಿ ವಿವರ ಇಲ್ಲಿ ಓದಿ]
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷಕ್ಕೆ ಸ್ಥಳೀಯ ರೈತ ಸಂಘ, ಪ್ರಗತಿಪರರು, ಸಾಹಿತಿಗಳ ಬೆಂಬಲ ಸಿಕ್ಕಿದೆ. ಇವರೆಲ್ಲರ ಜತೆ ಚರ್ಚಿಸಿ ಪ್ರಣಾಳಿಕೆ ಸಿದ್ಧಪಡಿಸಿದ್ದು, ಅಡಿಕೆ ಸಮಸ್ಯೆ, ರೈತರಿಗಾಗಿ ಸಂಸದರ ನಿಧಿ ಬಳಕೆ, ಕಾಲೇಜಿಗೊಂದು ಕೃಷಿ ಭೂಮಿ, ಭ್ರಷ್ಟ ರಾಜಕಾರಣಿಗಳ ಆಸ್ತಿ ಮುಟ್ಟುಗೋಲು ಮುಂತಾದ ಅಂಶಗಳು ಎದ್ದು ಕಾಣುತ್ತವೆ. ಪೂರ್ಣ ಪ್ರಣಾಳಿಕೆ ಮುಂದೆ ಓದಿ. [ಚಿತ್ರಗಳು: ಗುರುರಾಜ್ ಕುಂಟವಳ್ಳಿ]

ಭ್ರಷ್ಟ ರಾಜಕಾರಣಿಗಳ ಆಸ್ತಿ ಜಪ್ತಿ
* ಶಿವಮೊಗ್ಗ ಜಿಲ್ಲೆಯನ್ನು ಲೂಟಿ ಮಾಡಿದ ಎಲ್ಲ ರಾಜಕಾಣಿಗಳ ಮತ್ತು ಅಧಿಕಾರಿಗಳ ಸಂಪೂರ್ಣ ಆಸ್ತಿ ತನಿಖೆ ಹಾಗೂ ಮುಟ್ಟುಗೋಲು.
* ಶಿವಮೊಗ್ಗದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪನೆ
* ರೈತರ ಬಗರ್ ಹುಕುಂ ಸಮಸ್ಯೆಗೆ ಸಮನ್ವತೆಯ ಪರಿಹಾರ
* ನಗರದಲ್ಲಿ ಮತ್ತು ಹಳ್ಳಿಗಳಲ್ಲಿ ಜನರ ಸಭೆಗಳನ್ನು ನಡೆಸಿ ಅವರ ತೀರ್ಮಾನದಂತೆ ಕೇಂದ್ರದಿಂದ ಬರುವ ಹಲವು ಕೋಟಿ ರುಪಾಯಿಗಳ ಸಂಸದರದ ನಿಧಿಯ ಸಮರ್ಪಕ ವಿನಿಯೋಗ.
* ನಗರವ್ಯಾಪ್ತಿಯ ರಸ್ತೆ ಇಕ್ಕೆಲಗಳಲ್ಲಿ ಮರಗಳನ್ನು ಬೆಳೆಸುವುದು, ಭ್ರಷ್ಟ ರಾಜಕಾರಣಿ-ಗುತ್ತಿಗೆದಾರರ ಅಭಿವೃದ್ದ್ಧಿ ಮಾದರಿಯನ್ನು ಅನುಸರಿಸುವುದಿಲ್ಲ.

ಶಿವಮೊಗ್ಗದಲ್ಲಿ ಮೆಡಿಕೋ ಟೂರಿಸಂ ಆರಂಭ
* ಪರಿಸರ ವಿರೋಧಿ ದಂಡಾವತಿ ನೀರಾವರಿ ಯೋಜನೆ ರದ್ಧತಿ.
* ಆದ್ಯತೆ ಮೇರೆಗೆ ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಶೀಥಲೀಕರಣ ಘಟಕ ಸ್ಥಾಪನೆ.
* ಆದ್ಯತೆ ಮೇರೆಗೆ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ.
* ತಾಳಗುಪ್ಪದವರೆಗೆ ಇರುವ ರೈಲನ್ನು ಹೊನ್ನಾವರದವರೆಗೆ ಸಂಪರ್ಕ ಕಲ್ಪಿಸಲು ಕ್ರಮ.
* ಸಾಗರದ ಹಸಿರುಮಕ್ಕಿಯಲ್ಲಿ ಲಾಂಚ್ ವ್ಯವಸ್ಥೆ ಜಾರಿಗೆ.

ಕಾಲೇಜುಗಳಿಗೆ 2 ಎಕರೆ ಕೃಷಿ ಭೂಮಿ
* ಕೃಷಿ ಭಾರತದ ಜೀವನವಿಧಾನವಾಗಿದೆ. ಈ ಕುರಿತು ಹೊಸ ತಲೆಮಾರಿಗೆ ಅರಿವು ಮೂಡಿಸುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಕಾಲೇಜುಗಳಲ್ಲಿ ಕೃಷಿ ಕುರಿತು ಪ್ರಾಯೋಗಿಕ ತಿಳುವಳಿಕೆ ನೀಡಲು ಕಾಲೇಜುಗಳಲ್ಲಿ ಕೃಷಿಗಾಗಿ ಕನಿಷ್ಠ 2 ಎಕರೆ ಭೂಮಿ ಮೀಸಲೀಡಲು ಕ್ರಮ.
* ರೈತರ ಹೊಲ ಗದ್ದೆಗಳಿಗೆ ರಸ್ತೆ ಸಂಪರ್ಕ ವ್ಯವಸ್ಥೆ
* ಭೂ ರಹಿತರಿಎ ಲಭ್ಯ ಇರುವ ಸರ್ಕಾರಿ ಭೂಮಿಯನ್ನು ಕೃಷಿಗಾಗಿ ಮಾಡುವ ಕಾರ್ಯಕ್ರಮ.
* ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ ರುಪಾಯಿಗಳ ಆಗಾಧ ಮೊತ್ತವನ್ನು ರೈತರ ಹೆಸರಿನಲ್ಲಿ ಉದ್ಯಮಿಗಳಿಗೆ ನೀಡುತ್ತಿದೆ. ಈ ಮೊತ್ತದ ಸಬ್ಸಿಡಿ ಹಣವನ್ನು ನೇರವಾಗಿ ರೈತರಿಗೆ ಕೊಡುವ ವ್ಯವಸ್ಥೆ

ಜಿಲ್ಲೆಯಲ್ಲಿ ಸಂಪೂರ್ಣ ಪಾನ ನಿಷೇಧ ಜಾರಿಗೆ
* ಜಿಲ್ಲೆಯಲ್ಲಿ ಸಂಪೂರ್ಣ ಪಾನನಿಷೇಧ, ಮದ್ಯ ವ್ಯಸನ ಮುಕ್ತ ಕೇಂದ್ರ ಸ್ಥಾಪನೆ.
* ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ತಡೆಯಲು ಆಪ್ತ ಸಮಾಲೋಚನಾ ಕೇಂದ್ರ.
* ಯುವಕರಿಗೆ ಸೂಕ್ತವೆನಿಸಬಲ್ಲ ಮತ್ತು ನೆಮ್ಮದಿಯುತ ಜೀವನವನ್ನು ಖಾತರಿಪಡಿಸಬಲ್ಲ ಆದಾಯ ತರಬಲ್ಲ ಉದ್ಯೋಗಗಳ ಸೃಷ್ಟಿ.
* ಜನರಿಗೆ ಸುಲಭವಾಗಿ ಮತ್ತು ಶೀಘ್ರವಾಗಿ ದೊರೆಯುವಂಥ ನ್ಯಾಯವ್ಯವಸ್ಥೆ.
* ಇನಾಂ ಭೂಮಿ ರದ್ಧತಿ ಆದ ನಂತರ ಪಿ.ಆರ್ ನಂಬರ್ ಆಗಿಯೇ ಉಳಿದಿದೆ. ಇದು ಮರು ಸರ್ವೆ ಆಗಿ ಬದಲು ಮಾಡುವುದು.
* ಜಾತ್ಯಾತೀತ ಮನೋಭಾವ, ಕೋಮುಸೌಹಾರ್ದದ ರಕ್ಷಣೆ, ಜಾತಿ ಆಧಾರಿತ ಅಸಮಾನತೆಗಳ ನಿರ್ಮೂಲನೆಗೆ ಕ್ರಮ.












Click it and Unblock the Notifications