Get Updates
Get notified of breaking news, exclusive insights, and must-see stories!

Sandur Elections : ಕಾಂಗ್ರೆಸ್‌ ಅಭ್ಯರ್ಥಿಗೆ ಪೈಪೋಟಿ ನೀಡುವರಾರು?

ಸಂಡೂರು, ಮಾರ್ಚ್‌ 24: ಬಳ್ಳಾರಿ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರ ಸಂಡೂರು. ಇದು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಬಂದಿರುವ ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ, ಹೀಗಾಗಿ ಕ್ಷೇತ್ರದ ರಾಜಕೀಯ ಸ್ಥಿತಿಗತಿ ಚಿತ್ರಣ ಇಲ್ಲಿದೆ.

ಸಂಡೂರು ಬಳ್ಳಾರಿ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ. ಉತ್ತರದಲ್ಲಿ ಹೊಸಪೇಟೆ ತಾಲ್ಲೂಕು, ಪೂರ್ವದಲ್ಲಿ ಬಳ್ಳಾರಿ ತಾಲ್ಲೂಕು ಮತ್ತು ಆಂಧ್ರ ಪ್ರದೇಶ ಇದೆ. ಆಗ್ನೇಯದಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ನೈಋತ್ಯ ಮತ್ತು ದಕ್ಷಿಣದಲ್ಲಿ ಕೂಡ್ಲಿಗಿ, ಪಶ್ಚಿಮದಲ್ಲಿ ಹೊಸಪೇಟೆ ತಾಲ್ಲೂಕುಗಳಿಂದ ಸುತ್ತುವರಿದಿವೆ. ಸಂಡೂರಿಗೆ ತೋರಣಗಲ್ಲು, ಸಂಡೂರು, ಚೋರನೂರು ಹೋಬಳಿಗಳು ಸೇರಿವೆ.

sandooru map

ಸಂಡೂರು ತಾಲ್ಲೂಕಿನ ಸಂಡೂರು ಬೆಟ್ಟಗಳು ಅವುಗಳ ಸುತ್ತಲಿನ ವನಸಿರಿಯಿಂದ ಕೂಡಿದ ಪ್ರದೇಶವಾಗಿದೆ. ಅಲ್ಲದೆ ಇಲ್ಲಿ ಖನಿಜ ಸಂಪತ್ತಿನಿಂದ ಕೂಡಿದೆ. ಸುಂದರ ಬೆಟ್ಟಗಳಿಂದ ಕೂಡಿದ ಸುಂದರ ನಾಡು ಈ ಸಂಡೂರು. ಇಲ್ಲಿನ ಬೆಟ್ಟಗಳು ಮಲೆನಾಡಿನ ಬೆಟ್ಟಗಳಿಗೆ ಹೋಲುತ್ತವೆ. ಆದರೆ ಈಗ ಕಬ್ಬಿಣದ ಅದಿರು ಹೇರಳವಾಗಿ ದೊರೆಯುವುದರಿಂದ ಗಣಿಗಾರಿಕೆ ಹೇರಳವಾಗಿ ಪರಿಸರ ನಾಶವಾಗಿದೆ.

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ತುಕಾರಾಂ ಹಾಲಿ ಶಾಸಕರಾಗಿದ್ದಾರೆ. ಮೊದಲೇ ತಿಳಿಸಿದಂತೆ ಇದು ಕಾಂಗ್ರೆಸ್‌ ಪ್ರಾಬಲ್ಯವಿರುವ ಕ್ಷೇತ್ರವಾಗಿದೆ. ಸಂಡೂರು ವಿಧಾನಸಭಾ ಕ್ಷೇತ್ರ ಎಸ್‌ಟಿ ಮೀಸಲು ವಿಧಾನಸಭಾ ಕ್ಷೇತ್ರವಾಗಿದೆ. 2011 ರ ಜನಗಣತಿಯ ಪ್ರಕಾರ ಸಂಡೂರ್ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಸಿ ಸಮುದಾಯದ ಮತದಾರರು ಸರಿಸುಮಾರು 39,890 ರಷ್ಟಿದ್ದಾರೆ. ಎಸ್‌ಟಿ ಮತದಾರರು ಸರಿಸುಮಾರು 54,747 ರಷ್ಟಿದ್ದಾರೆ. ಮುಸ್ಲಿಂ ಮತದಾರರು ಸರಿಸುಮಾರು 25,163ರಷ್ಟಿದ್ದಾರೆ.

mla thukaram

ಇನ್ನು ಗ್ರಾಮೀಣ ಮತದಾರರು ಸರಿಸುಮಾರು 158,486 ಆಗಿದ್ದು, ನಗರ ಪ್ರದೇಶದ ಮತದಾರರು ಸರಿಸುಮಾರು 60,327 ರಷ್ಟಿದ್ದಾರೆ. 2019 ರ ಸಂಸತ್ ಚುನಾವಣೆಯಂತೆ ಸಂಡೂರ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರು 2,18,813 ಇದ್ದಾರೆ. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ತುಕಾರಾಂ 2008, 2013 ಮತ್ತು 2018ರಲ್ಲಿ ಚುನಾವಣೆಯಲ್ಲಿ ಕ್ರಮವಾಗಿ ಕಾಂಗ್ರೆಸ್‌ನಿಂದ ಗೆದ್ದು ಹ್ಯಾಟ್ರಿಕ್‌ ಜಯ ಸಾಧಿಸಿದ್ದಾರೆ. 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಸಂತೋಷ್ ಲಾಡ್ ಗೆದ್ದಿದ್ದರು.

ಸಂಡೂರು ಚುನಾವಣಾ ಇತಿಹಾಸದಲ್ಲಿ ಒಂದೂ ಬಾರಿಯೂ ಇಲ್ಲಿ ಬಿಜೆಪಿ ಗೆದ್ದಿಲ್ಲ. ಈ ಹಿನ್ನೆಲೆ 2023ರ ಚುನಾವಣೆಯಲ್ಲಿ ಸಂಡೂರು ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಮುಂದಾಗಿದೆ. ಮುಂದಿನ ಭೇಟಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮಿಸಿದ್ದು ಕ್ಷೇತ್ರದಲ್ಲಿ ಕಮಲ ಕಂಪು ಹರಡುವ ಸಾಧ್ಯತೆ ಇದೆ. ಹೀಗಾಗಿ ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ನಾಯಕರು ತೀವ್ರ ಸಕ್ರಿಯರಾಗಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

ಕಾಂಗ್ರೆಸ್‌ನ ಭದ್ರಕೋಟೆ ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಕೆ.ಎಸ್.ದಿವಾಕರ್ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿ ಟಿಕೆಟ್‌ಗಾಗಿ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸಿರುವ ಕೆ.ಎಸ್.ದಿವಾಕರ್ ಅವರನ್ನು ಬಿಟ್ಟು ಬೇರೆ ಅಭ್ಯರ್ಥಿ ಹಾಕಿದರೆ ಅದು ಬಿಜೆಪಿಗೇ ಪೆಟ್ಟಾಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು.

ಬಳ್ಳಾರಿ ಪಾಲಿಕೆಯಲ್ಲಿ ಸದಸ್ಯರಾಗಿ ಜನ ಸೇವೆ ಮಾಡಿದ್ದ ದಿವಾಕರ್ 2018ರ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಯಸಿ ಅಲ್ಲಿನ ಜನರೊಂದಿಗೆ ಬೆರೆತು ಅನೇಕ ಕಾರ್ಯಕ್ರಮಳ ಮೂಲಕ ಗಮನ ಸೆಳೆದಿದ್ದರು. ಈಗ ಸಂಡೂರು ಕ್ಷೇತ್ರದಿಂದ ಟಿಕೆಟ್ ಬಯಸಿದ್ದಾರೆ. ಆದರೆ ಅವರು ಕಾಂಗ್ರೆಸ್‌ನ ತುಕಾರಾಂಗೆ ಸ್ಪರ್ಧೆ ನೀಡಿ ಗೆಲ್ಲುತ್ತಾರಾ ನೋಡಬೇಕಿದೆ.

ಸಂಡೂರು ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಈ.ತುಕರಾಂ ಅವರು ಶಾಸಕರಾಗಿ, ಸಚಿವರಾಗಿ ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ನೆಲೆಸಿದ್ದಾರೆ. ಮೊದಲ ಚುನಾವಣೆಯಲ್ಲಿ 2008ರಲ್ಲಿ 20 ಸಾವಿರಕ್ಕೂ ಮತಗಳ ಅಂತರದಿಂದ ಗೆದ್ದಿದ್ದ ಅವರು, 2013 ರ ಚುನಾವಣೆಯಲ್ಲಿ 34 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಕಾರಣ ಆಗ ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಇರಲಿಲ್ಲ. ಆದರೆ 2018 ರಲ್ಲಿ ಕೊನೆ ಕ್ಷಣದಲ್ಲಿ ರಾಘವೇಂದ್ರ (ಮಂಜು) ಪ್ರಬಲ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಸಂಡೂರಿನ ರಾಜ ಮನೆತನದ ಕಾರ್ತಿಕ್ ಘೋರ್ಪಡೆ ಅವರು ಬೆಂಬಲಿಸಿದ್ದು ಸಹಕಾರಿಯಾಗಿ ತುಕರಾಂ ಅವರ ಗೆಲುವಿನ ಅಂತರವನ್ನು 14 ಸಾವಿರಕ್ಕೆ ಇಳಿಯುವಂತೆ ಮಾಡಿದರು.

Sandur Karnataka Elections

ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018 ತುಕಾರಂ (ಕಾಂಗ್ರೆಸ್‌) 78,106 ಬಿ ರಾಘವೇಂದ್ರ (ಬಿಜೆಪಿ) 64,096
2013 ತುಕಾರಂ (ಕಾಂಗ್ರೆಸ್‌) 62,246 ಧನಂಜಯ ಆರ್ (ಜೆಡಿಎಸ್‌) 27,615
2008 ತುಕಾರಂ (ಕಾಂಗ್ರೆಸ್‌) 49,535 ಟಿ ನಾಗರಾಜ್ (ಬಿಜೆಪಿ) 28,816

ರಾಘವೇಂದ್ರ ಅವರ ಅಕಾಲಿಕ ಮರಣದಿಂದ ಬಿಜೆಪಿ ಅಭ್ಯರ್ಥಿಯಾಗಲು ರಾಮುಲು ಅವರ ಸೂಚನೆಯಂತೆ ದಿವಾಕರ್ ಅವರು ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಇಳಿದರು. ಕ್ಷೇತ್ರದ ಪ್ರತಿ ಹಳ್ಳಿಗೂ ತೆರಳಿ ಯುವ ಸಮೂಹದ ಪಡೆಯನ್ನು ಕಟ್ಟಿದ್ದಾರೆ. ಸಂಡೂರಿನಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ ಸಂಸದ ವೈ.ದೇವೇಂದ್ರಪ್ಪ ಅವರು ಹರಪನಹಳ್ಳಿಯ ತಮ್ಮ ಮಗ ಅಣ್ಣಪ್ಪ ಅವರನ್ನು ಸಂಡೂರಿನಿಂದ ಕಣಕ್ಕಿಳಿಸಲು ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಸಚಿವ ಶ್ರೀರಾಮುಲು ಅವರು ತಮ್ಮ ಸಹೋದರಿ ಶಾಂತಾ ಅವರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+