Get Updates
Get notified of breaking news, exclusive insights, and must-see stories!

Sakleshpur Elections: ಜೆಡಿಎಸ್‌ ಸರಣಿ ಜಯಕ್ಕೆ ಬ್ರೇಕ್‌ ಹಾಕಲು ಬಿಜೆಪಿ, ಕಾಂಗ್ರೆಸ್‌ ರಣತಂತ್ರ

ಹಾಸನ, ಮಾರ್ಚ್ 25: ಕರ್ನಾಟಕದ ಊಟಿ ಸಕಲೇಶಪುರ. ಸಹ್ಯಾದಿ ಪರ್ವತಗಳು, ಹಚ್ಚ ಹಸಿರಿನ ಕಾಡು, ಗಿರಿ ಶಿಖರಗಳು, ಕಾಫಿ ತೋಟಗಳು, ಜಲಪಾತಗಳು, ಝರಿ ಹೀಗೆ ಸಕಲೇಶಪುರ ತನ್ನ ಶ್ರೀಮಂತವಾದ ಪ್ರಕೃತಿ ಸೌಂದರ್ಯಕ್ಕೆ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ.

ಆಲೂರು-ಸಕಲೇಶಪುರ ಮಲೆನಾಡು ಹಾಗೂ ಅರೆ ಮಲೆನಾಡನ್ನು ಹೊಂದಿದ್ದು, ಬಿಸಿಲೆ ಅರಣ್ಯ ಪ್ರದೇಶ, ಕಾಡುಮನೆ ಟೀ ಎಸ್ಟೇಟ್ ಹಾಗೂ ಮಂಝ್ರಾಭಾದ್ ಕೋಟೆ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಸಕಲೇಶಪುರದಲ್ಲಿ ಸಕಲೈಶ್ವರ್ಯ ಸ್ವಾಮಿ ದೇವಸ್ಥಾನ ಕೂಡ ಇದೆ. ಆಲೂರಿನ ಮೂಲ ಹೆಸರು ಮರಸು ಆಲೂರು. ಈ ಹಿಂದೆ ಗ್ರಾಮದಂತಿದ್ದ ಈ ಪ್ರದೇಶ ಸದ್ಯ ಪಟ್ಟಣವಾಗಿ ಬೆಳೆದು ನಿಂತಿದೆ.

sakaleshapura constituency map

ಆಲೂರು ಮತ್ತು ಸಕಲೇಶಪುರ ಕ್ಷೇತ್ರದ ಜನರ ಮೂಲ ಕಸುಬು ಕೃಷಿ. ಮೆಣಸು, ಏಲಕ್ಕಿ, ಶುಂಠಿ ಹಾಗೂ ಚಹಾ ಬೆಳೆದರೂ ಕಾಫಿ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ. ಹೀಗಾಗಿ ಏಲಕ್ಕಿ ಹಾಗೂ ಕಾಫಿ ಸಂಶೋಧನೆ ಹಾಗೂ ವಾಣಿಜ್ಯ ಕೇಂದ್ರವಾಗಿ ಸಕಲೇಶಪುರ ಗುರುತಿಸಿಕೊಂಡಿದೆ. ಇನ್ನು ಕೋವಿ ಅಥವಾ ಗನ್​ಗಳ ರೀಪೇರಿಗೆ ಆಲೂರು ಹೆಸರುವಾಸಿಯಾಗಿದೆ.

ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರ ವಿಸ್ತಿರ್ಣದಲ್ಲಿ ಬಹಳ ದೊಡ್ಡದಿದೆ. ಆಲೂರು ಮತ್ತು ಸಕಲೇಶಪುರ ಮೊದಲು ಬೇರೆ ಬೇರೆ ಕ್ಷೇತ್ರಗಳಾಗಿದ್ದವು. ಮರು ವಿಂಗಡಣೆ ಬಳಿಕ ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರವಾಗಿ ಮಾರ್ಪಟ್ಟಿದೆ. ಬಹುದೊಡ್ಡ ಕ್ಷೇತ್ರ ಆಲೂರು-ಸಕಲೇಶಪುರದ ರಾಜಕೀಯ ವಿಶ್ಲೇಷಣೆ ಇಲ್ಲಿದೆ.

ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರದ ರಾಜಕೀಯ ಹಿನ್ನೆಲೆ

ಸಕಲೇಶಪುರ ಜೆಡಿಎಸ್​ನ ಭದ್ರಕೋಟೆಯಾಗಿದೆ. 1962 ರಿಂದ 1983ರವರೆಗೆ ಇಲ್ಲಿ ಕಾಂಗ್ರೆಸ್​ ಹಾಗೂ ಸ್ವತಂತ್ರ ಅಭ್ಯರ್ಥಿಗಳು ಗೆಲವು ಸಾಧಿಸಿದರೆ. 1985ರಲ್ಲಿ ಬಿಜೆಪಿಯ ಬಸವರಾಜ್ ಗೆಲುವು ಸಾಧಿಸಿದರು. 1989ರ ಚುನಾವಣೆಯಲ್ಲಿ ಗುರುದೇವ್ ಸ್ಫರ್ಧಿಸಿ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್‌ ತೆಕ್ಕೆಗೆ ತಂದರು. 1994ರಲ್ಲಿ ಮತ್ತೆ ಸಕಲೇಶಪುರ ಕ್ಷೇತ್ರ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿತು.1999ರಲ್ಲೂ ಬಿ. ಬಿ. ಶಿವಪ್ಪ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು.

Sakleshpur mla hk kumarawamy

2004ರಿಂದ ಆಲೂರು-ಸಕಲೇಶಪುರ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆಯಾಗಿದೆ. ಎಚ್. ಎ. ವಿಶ್ವನಾಥ್ ಸಕಲೇಶಪುರದಲ್ಲಿ ಜೆಡಿಎಸ್‌ ಖಾತೆ ತೆರೆದರು. ಇದಾದ ಬಳಿಕ 2008, 2013 ಹಾಗೂ 2018 ಮೂರು ಅವಧಿಯಲ್ಲೂ ಎಚ್‌.ಕೆ. ಕುಮಾರಸ್ವಾಮಿ ಇಲ್ಲಿ ಸತತವಾಗಿ ಗೆಲುವು ಸಾಧಿಸಿದ್ದು, ಈ ಬಾರಿಯೂ ಗೆಲವುವಿನ ನಿರೀಕ್ಷೆಯಲ್ಲಿದ್ದಾರೆ.

ಇನ್ನು ಈ ಬಾರಿ ಆಲೂರು-ಸಕಲೇಶಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ನಾರ್ವೆ ಸೋಮಶೇಖರ್, ಸಿಮೆಂಟ್​ ಮಂಜು ಟಿಕೆಟ್​ ಆಕಾಂಕ್ಷಿಗಳಾಗಿದ್ದಾರೆ. ಇನ್ನು ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಶನಿವಾರ(ಮಾರ್ಚ್ 25) ರಂದು ಬಿಡುಗಡೆಯಾಗಿದ್ದು, ಮುರಳಿ ಮೋಹನ್​ ಅವರಿಗೆ ಕಾಂಗ್ರೆಸ್​ ಟಿಕೆಟ್​ ನೀಡಲಾಗಿದೆ. ಜೆಡಿಎಸ್​ನಿಂದ ಕ್ಷೇತ್ರದಲ್ಲಿ ಕಳೆದ ಮೂರು ಅವಧಿಗಳಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿರುವ ಹಾಲಿ ಶಾಸಕ ಎಚ್​. ಕೆ. ಕುಮಾರಸ್ವಾಮಿ ಅವರಿಗೆ ಟಿಕೆಟ್‌ ನೀಡುವ ಸಾಧ್ಯತೆ ಹೆಚ್ಚಿದೆ.

ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರದ 2018 ಚುನಾವಣೆ ಫಲಿತಾಂಶ

2018 ಚುನಾವಣೆಯಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ನ ಎಚ್ ಕೆ ಕುಮಾರಸ್ವಾಮಿ 62,262 ಮತಗಳನ್ನು ಪಡೆಯವ ಮೂಲಕ, 57,320 ಮತಗಳನ್ನು ಪಡೆದ ಬಿಜೆಪಿ ಅಭ್ಯರ್ಥಿ ಸೋಮಶೇಖರ್ ಜಯರಾಜ್, 37,002 ಮತಗಳನ್ನು ಪಡೆದ ಕಾಂಗ್ರೆಸ್ ಅಭ್ಯರ್ಥಿ ಸಿದ್ದಯ್ಯ ಅವರಿಗೆ ಸೋಲುಣಿಸಿದ್ದರು.

Sakleshpur Karnataka Elections

ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018 ಎಚ್.ಕೆ ಕುಮಾರಸ್ವಾಮಿ (ಜೆಡಿಎಸ್‌) 62,262 Somashekar Jayaraj (ಬಿಜೆಪಿ ) 57,320
2013 ಎಚ್. ಕೆ ಕುಮಾರಸ್ವಾಮಿ (ಜೆಡಿಎಸ್‌) 63,602 ಡಿ. ಮಲ್ಲೇಶ್ (ಕಾಂಗ್ರೆಸ್ ) 30,533
2008 ಎಚ್. ಕೆ ಕುಮಾರಸ್ವಾಮಿ (ಜೆಡಿಎಸ್‌) 49,768 ನಿರ್ವಾಣಯ್ಯ (ಬಿಜೆಪಿ ) 36,473
jds

ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರದ ಮತದಾರರ ವಿವರ

ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಕನ್ನಡ ಭಾಷೆಯ ಜೊತೆಗೆ ತುಳು ಮತ್ತು ಬ್ಯಾರಿ ಭಾಷೆ ಮಾತನಾಡುವ ಸಾಕಷ್ಟು ಜನರಿದ್ದಾರೆ. ಇದು ಮೀಸಲು ಕ್ಷೇತ್ರವಾಗಿದ್ದು, ಲಿಂಗಾಯತರು ಹಾಗೂ ಒಕ್ಕಲಿಗರು ಪ್ರಬಲರಾಗಿದ್ದಾರೆ. ಇದೆಲ್ಲದರ ನಡುವೆ ಕಾಫಿ ಎಸ್ಟೇಟ್​ ಮಾಲೀಕರು ಕೂಡ ಚುನಾವಣಾ ಸಂದರ್ಭದಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರುತ್ತಾರೆ.

ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,93,000 ಮತದಾರರಿದ್ದಾರೆ.ಒಕ್ಕಲಿಗರು-70,000

ಲಿಂಗಾಯಿತರು-45,000

ದಲಿತರು-40,000
ಅಲ್ಪಸಂಖ್ಯಾತರು-18 ,000

ಬ್ರಹ್ಮಣ, ಬಂಟ್ಸ್‌, ಮುಸ್ಲಿಂ , ಕ್ರಿಶ್ಚಿಯನ್‌, ಒಂದು ಲಕ್ಷದ ಇಪ್ಪತೈದು ಸಾವಿರ ಮತಗಳಿರುವ ಮಾಹಿತಿ ಲಭ್ಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+