ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೆಲೆ ಮತ್ತೆ ಹೆಚ್ಚಳ: ಇತ್ತೀಚಿನ ಬೆಲೆ ಎಷ್ಟು?
ರಾಯಲ್ ಎನ್‌ಫೀಲ್ಡ್ ಬುಲೆಟ್ ಪ್ರಿಯರಿಗೆ ಇಲ್ಲಿ ಸ್ವಲ್ಪ ನಿರಾಸೆಯಾಗಿದೆ. ಏಕೆಂದರೆ ಕಂಪನಿಯು ತನ್ನ ಮೋಟಾರ್‌ಸೈಕಲ್ ಮಾದರಿಯ ಬೆಲೆಯನ್ನು ಹೆಚ್ಚಿಸಿದೆ. ಆದರೆ, ಬೆಲೆ ಏರಿಕೆಯೊಂದಿಗೆ ಬೈಕ್‌ನಲ್ಲಿ ಯಾವುದೇ ವೈಶಿಷ್ಟ್ಯವನ್ನು ಹೆಚ್ಚಿಸಲಾಗಿದೆ ಎಂದು ಕಂಪನಿ ತಿಳಿಸಿಲ್ಲ. ನೀವು ಬುಲೆಟ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಯಾವ ಮಾದರಿಗಳ ಬೆಲೆಗಳು ಎಷ್ಟು ಹೆಚ್ಚಾಗಿದೆ ಎಂಬ ಮಾಹಿತಿ ಇಲ್ಲಿದೆ.
ರಾಯಲ್ ಎನ್‌ಫೀಲ್ಡ್ ತನ್ನ ಜನಪ್ರಿಯ ಕ್ಲಾಸಿಕ್ 350 ಮೋಟಾರ್‌ಸೈಕಲ್ ಬೆಲೆಗಳನ್ನು ಮತ್ತೊಮ್ಮೆ ಪರಿಷ್ಕರಿಸಿದೆ. ಕ್ಲಾಸಿಕ್ 350 ಮೋಟಾರ್‌ಸೈಕಲ್ ಈಗ 1,67,235 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಈ ಹಿಂದೆ ಇದರ ಬೆಲೆಯು 1,61,688 ರಷ್ಟಿತ್ತು ಎಂದು ಹೆಚ್‌ಟಿ ಆಟೋ ವರದಿ ಮಾಡಿದೆ. ಬೆಲೆ ಹೆಚ್ಚಳವನ್ನು ಹೊರತುಪಡಿಸಿ, ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ನಲ್ಲಿ ಯಾವುದೇ ಬದಲಾವಣೆಯನ್ನು ತಂದಿಲ್ಲ.
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ನ ಬೆಲೆಗಳು ಈ ಕೆಳಗಿನಂತಿದೆ:
ಕ್ಲಾಸಿಕ್ 350 (ಬೂದಿ/ ಕೆಂಪು ಬಣ್ಣ/ ಕಪ್ಪು ಬಣ್ಣ/ ಬಿಳ್ಳಿ ಬಣ್ಣ): 1,67,235 ರೂಪಾಯಿ ( ಹಿಂದಿನ ಬೆಲೆ 1,61,688)
ಕ್ಲಾಸಿಕ್ 350 (ಕಪ್ಪು): 1,75,405 ರೂಪಾಯಿ (ಹಿಂದಿನ ಬೆಲೆ 1,69,617)
ಕ್ಲಾಸಿಕ್ 350 (ಗನ್ ಗ್ರೇ ಅಲಾಯ್ ವೀಲ್): 1,89,360 ರೂಪಾಯಿ (ಹಿಂದಿನ ಬೆಲೆ 1,79,809)
ಕ್ಲಾಸಿಕ್ 350 (ಆರೆಂಜ್ ಎಂಬರ್ / ಮೆಟಾಲಿಯೊ ಸಿಲ್ವರ್): 1,89,360 ರೂಪಾಯಿ (ಹಿಂದಿನ ಬೆಲೆ 1,79,809)
ಕ್ಲಾಸಿಕ್ 350 (ಸ್ಟೆಲ್ತ್ ಬ್ಲ್ಯಾಕ್ / ಕ್ರೋಮ್ ಬ್ಲ್ಯಾಕ್): 1,92,608 ರೂಪಾಯಿ (ಹಿಂದಿನ ಬೆಲೆ 1,86,319)
ಕ್ಲಾಸಿಕ್ 350 (ಗನ್ ಗ್ರೇ ಸ್ಪೋಕ್ ವೀಲ್): 1,77,294 ರೂಪಾಯಿ (ಹಿಂದಿನ ಬೆಲೆ 1,71,453)
ಕ್ಲಾಸಿಕ್ 350 (ಸಿಗ್ನಲ್ ಏರ್‌ಬೋರ್ನ್ ಬ್ಲೂ): 1,85,902 ರೂಪಾಯಿ (ಹಿಂದಿನ ಬೆಲೆ 1,83,164)
ಈ ಮೇಲಿನ ಹೊಸ ಬೆಲೆಗಳು ತಕ್ಷಣದಿಂದ ಜಾರಿಗೆ ಬರಲಿದ್ದು, ಹೆಚ್ಚುತ್ತಿರುವ ಸರಕುಗಳ ಬೆಲೆಯನ್ನು ಸರಿದೂಗಿಸಲು ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.