ಏಳಪ್ಪಾ ಯಜಮಾನ: ಸತ್ತವನ ಮುಂದೆ ಪುಟ್ಟ ಕರುವಿನ ಮೂಕವೇದನೆ
ರಾಂಚಿ ಸೆಪ್ಟೆಂಬರ್ 14: ಪ್ರೀತಿಗೆ ವ್ಯಾಖ್ಯಾನವಿಲ್ಲ. ಮನುಷ್ಯರ ಹೊರತಾಗಿ ಪ್ರಾಣಿಗಳಿಗೂ ಪ್ರೀತಿಯ ಭಾಷೆ ಚೆನ್ನಾಗಿ ಅರ್ಥವಾಗುತ್ತದೆ. ಮನುಷ್ಯರು ಮತ್ತು ಸಾಕುಪ್ರಾಣಿಗಳ ನಡುವಿನ ಅವಿನಾಭಾವ ಪ್ರೀತಿಯ ಅನೇಕ ಕಥೆಗಳು ಮತ್ತು ಘಟನೆಗಳನ್ನು ನೀವು ನೋಡಿರಬೇಕು ಮತ್ತು ಕೇಳಿರಬಹುದು. ಆದರೆ ಈ ಬಾರಿ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವಿಡಿಯೊ ವಿಭಿನ್ನವಾಗಿದೆ. ಕರು ಮಾಲೀಕ ಸಾವಿನ ನಂತರ ಸಾಕು ಕರು ಸ್ಮಶಾನಕ್ಕೆ ಓಡಿಹೋಗಿ ಮಾಲೀಕನ ಮೃತ ದೇಹದ ಮುಂದೆ ನಿಂತು ಮರುಕ ವ್ಯಕ್ತಪಡಿಸಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ವಿಡಿಯೋ ನೋಡಿ ಭಾವುಕರಾಗುತ್ತಿದ್ದಾರೆ.
ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಪ್ರೀತಿಯ ಈ ವಿಶಿಷ್ಟ ಘಟನೆ ಜಾರ್ಖಂಡ್ ನಿಂದ ಮುನ್ನೆಲೆಗೆ ಬಂದಿದೆ. ಹಜಾರಿಬಾಗ್‌ನ ಚೌಪರಾನ್ ಬ್ಲಾಕ್‌ನ ಚೌತಿ ಗ್ರಾಮದಲ್ಲಿ ಕರುವೊಂದು ತನ್ನ ಮಾಲೀಕನ ಸಾವಿನ ನಂತರ ಜನರು ತಡೆದರೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸ್ಮಶಾನಕ್ಕೆ ಬಂದಿತ್ತು. ಇಷ್ಟು ಮಾತ್ರವಲ್ಲದೆ ಸ್ಮಶಾನಕ್ಕೆ ಓಡೋಡಿ ಬಂದ ಕರು ಮಾಲೀಕನ ಮೃತದೇಹದ ಹತ್ತಿರ ಓಡೋಡಿ ಹೋಗಿದೆ.
ಈ ಅಪರೂಪದ ಪ್ರೇಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಾಹಿತಿ ಪ್ರಕಾರ ಕರುವಿನ ಮಾಲೀಕ ಚೌತಿ ಗ್ರಾಮದ ನಿವಾಸಿ 80 ವರ್ಷದ ಮೇವಲಾಲ್ ಠಾಕೂರ್ ಮೃತಪಟ್ಟಿದ್ದರು. ಮೇವಲಾಲನಿಗೆ ಮಕ್ಕಳಿರಲಿಲ್ಲ. ಮಕ್ಕಳಿಲ್ಲದ ಮಾಲೀಕನ ಮರಣದ ನಂತರ, ಕರು ಮತ್ತೊಂದು ಹಳ್ಳಿಯಿಂದ ಸ್ಮಶಾನಕ್ಕೆ ಮಗನಾಗಿ ತಲುಪಿದೆ. ಅಷ್ಟೇ ಅಲ್ಲ, ಇಲ್ಲಿಗೆ ಬಂದ ನಂತರ ಜೋರಾಗಿ ಕೂಗಲು ಶುರುಮಾಡಿದೆ. ಅದರ ಕಣ್ಣುಗಳೂ ತೇವವಾಗಿದ್ದವು.
|
ಮಾಲೀಕನ ಮೃತದೇಹಕ್ಕೆ ಮುತ್ತಿಟ್ಟ ಕರು
ಶನಿವಾರದಂದು ಗ್ರಾಮದ ಜನರು ಮೇವಲಾಲನ ಶವವನ್ನು ಅಂತಿಮ ಸಂಸ್ಕಾರಕ್ಕಾಗಿ ಗ್ರಾಮದ ಸ್ಮಶಾನಕ್ಕೆ ತಂದಾಗ ಹಿಂಬದಿಯಿಂದ ಓಡಿ ಬಂದ ಕರುವನ್ನು ಗ್ರಾಮಸ್ಥರು ಹಾಗೂ ಮನೆಯವರು ತಡೆದರೂ ನಿಲ್ಲಲಿಲ್ಲ. ಚಿತೆಯ ಮೇಲೆ ಮಲಗಿದ್ದ ಮೃತದೇಹಕ್ಕೆ ಕರುವು ಮುತ್ತಿಟ್ಟಿದೆ. ಅವರನ್ನು ಎಬ್ಬಿಸಲು ಪ್ರಯತ್ನಿಸಿದೆ. ಈ ಹೃದಯ ಸ್ಪರ್ಶಿ ವಿಡಿಯೋ ಕಂಡ ನೆಟ್ಟಿಗರು ಕರುವಷ್ಟೇ ದುಃಖ ವ್ಯಕ್ತಪಡಿಸಿದ್ದಾರೆ.

ಮಾರಾಟವಾಗಿದ್ದರೂ ಮಾಲೀಕ ಇಲ್ಲವಾದ ದಿನ ಓಡೋಡಿ ಬಂದ ಕರು
ಕರುವನ್ನು 3 ತಿಂಗಳ ಹಿಂದೆ ಮಾರಾಟ ಮಾಡಲಾಗಿದ್ದು, ಮಾಲೀಕ ಸತ್ತ ಬಳಿಕ ಅದೇನೋ ಯಾಕೋ ಕರು ಗ್ರಾಮಕ್ಕೆ ಓಡೋಡಿ ಬಂದಿದೆ. ಜನರ ಪ್ರಕಾರ, ಮುದ್ದಿನ ಕರು ಅದರ ಮಾಲೀಕರ ದೇಹವು ಪಂಚತತ್ತ್ವದಲ್ಲಿ ವಿಲೀನಗೊಳ್ಳದ ಸಮಯದವರೆಗೆ ಇತ್ತು. ಸ್ಥಳೀಯ ಜನರ ಪ್ರಕಾರ, ರೈತ ಮೇವಲಾಲ್ ಠಾಕೂರ್ ಹಸುವನ್ನು ಸಾಕಿದ್ದರು. ಕೆಲವು ತಿಂಗಳ ಹಿಂದೆ, ಹಸು ಕರುವಿಗೆ ಜನ್ಮ ನೀಡಿತ್ತು. ಅವರು ಹಸುವಿನ ಜೊತೆ ಕರುವನ್ನು ಸ್ವತಃ ಮಗುವಿನಂತೆ ನೋಡಿಕೊಂಡಿದ್ದರು. ಆದರೆ ಸಾಯುವ ಮೂರು ವರ್ಷಗಳ ಮೊದಲು ಮೇವಲಾಲ್ ಅದನ್ನು ಬೇರೆ ಗ್ರಾಮದ ರೈತನಿಗೆ ಮಾರಾಟ ಮಾಡಿದ್ದರು.

ಮಗನಂತೆ ಅಂತ್ಯಸಂಸ್ಕಾರ ಮಾಡಿದ ಕರು
ಹೀಗಿರುವಾಗ ಶನಿವಾರ ರೈತ ಮೃತಪಟ್ಟಾಗ ಏಕಾಏಕಿ ಕರು ಅಲ್ಲಿಗೆ ತಲುಪಿದೆ. ಈ ವೇಳೆ ಅವರ ಕಣ್ಣಲ್ಲಿ ನೀರು ಬರುತ್ತಿತ್ತು. ಈ ದೃಶ್ಯವನ್ನು ಕಂಡು ಅಲ್ಲಿದ್ದ ಜನರ ಕಣ್ಣಲ್ಲಿ ನೀರು ಜಿನುಗಿದೆ. ಮಕ್ಕಳಿಲ್ಲದ ರೈತನ ಮಗ ಎಂದು ಜನರು ಕರುವನ್ನು ತೆಗೆದುಕೊಂಡು ಹೋಗಿದ್ದಾರೆ.












Click it and Unblock the Notifications