ಪೊಲೀಸರನ್ನು ಕೊರೊನಾದಿಂದ ರಕ್ಷಿಸಲು ಜಾರ್ಖಂಡ್ ಹೊಸ ಪ್ರಯತ್ನ

ರಾಂಚಿ, ಜುಲೈ 9: ಕೊರೊನಾ ವೈರಸ್ ಹೋರಾಟದಲ್ಲಿ ಪೊಲೀಸರು ಮುಂಚೂಣಿಯಲ್ಲಿದ್ದಾರೆ. ಆದರೆ, ಪೊಲೀಸರಿಗೆ ಕೊವಿಡ್ ಸೋಂಕು ತಗುಲುತ್ತಿದೆ. ಮಹಾರಾಷ್ಟ್ರ, ದೆಹಲಿ ಹಾಗೂ ಕರ್ನಾಟಕದಲ್ಲಿ ಹೆಚ್ಚು ಪೊಲೀಸರಿಗೆ ಅಂಟಿಕೊಂಡಿದೆ.

Recommended Video

      Rohit Sharma ಟಿ20ಗೆ ನಾಯಕನಾಗಲಿ | T20 Captain? | Oneindia Kannada

      ಇದೀಗ, ಪೊಲೀಸರನ್ನು ಕೊರೊನಾ ವೈರಸ್‌ನಿಂದ ರಕ್ಷಿಸಲು ಜಾರ್ಖಂಡ್ ಸರ್ಕಾರ ನೂತನ ಪ್ರಯತ್ನಕ್ಕೆ ಮುಂದಾಗಿದೆ. ಸಾರ್ವಜನಿಕರ ಜೊತೆ ನೇರವಾದ ಸಂಪರ್ಕವನ್ನು ಕಡಿಮೆ ಮಾಡಲು ವೆಬ್‌ಸೈಟ್‌ ಆರಂಭಿಸಲು ಮುಂದಾಗಿದೆ.

      ಹೀಗಾಗಿ, ಸಾರ್ವಜನಿಕರು ನೇರವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡುವುದನ್ನು ತಪ್ಪಿಸಬಹುದಾಗಿದೆ. ತಮ್ಮ ದೂರುಗಳನ್ನು ಆನ್‌ಲೈನ್ ಮೂಲಕ ನೀಡಬಹುದು. ಅದಕ್ಕೆ ಪೊಲೀಸರು ಪ್ರತಿಕ್ರಿಯೆ ನೀಡಲಿದ್ದಾರೆ.

      Jharkhand govt launches online portal for lodging complaints

      ವೆಬ್‌ಸೈಟ್‌ ಮೂಲಕ ದೂರು ಸ್ವೀಕರಿಸುವುದು ಅಥವಾ ಸಾರ್ವಜನಿಕ ವ್ಯವಹಾರ ಮಾಡುವುದರಿಂದ ಪೊಲೀಸರು ಸಹ ಸೋಂಕಿನಿಂದ ತಪ್ಪಿಸಿಕೊಳ್ಳಬಹುದು ಎಂದು ಜಾರ್ಖಂಡ್ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

      ಈ ಕುರಿತು ಜಾರ್ಖಂಡ್ ಪೊಲೀಸ್ ಮಹಾನಿರ್ದೇಶಕ ಸುಮನ್ ಗುಪ್ತಾ ಮಾತನಾಡಿ, ''ಲಾಕ್ ಡೌನ್ ಸಮಯದಲ್ಲಿ ಪೊಲೀಸರ ಹೆಚ್ಚು ಕೆಲಸ ಮಾಡಿದರು. ಅವರಿಗೆ ಮಾಸ್ಕ್ ಸೇರಿದಂತೆ ಮುಂಜಾಗ್ರತೆ ವಹಿಸಲಾಗಿತ್ತು. ಅದನ್ನು ಮೀರಿಯೂ ಪೊಲೀಸರಿಗೆ ವೈರಸ್ ಅಂಟಿಕೊಂಡಿದೆ. ಹಾಗಾಗಿ, ಆನ್‌ಲೈನ್ ವಿಧಾನ ಬಳಸುತ್ತಿದ್ದೇವೆ'' ಎಂದಿದ್ದಾರೆ.

      ಇನ್ನು ಕ್ಯಾಬಿನೆಟ್ ಸಚಿವರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಹೋಮ್ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ.

      ಇನ್ನುಳಿದಂತೆ ಜಾರ್ಖಂಡ್‌ನಲ್ಲಿ 3192 ಜನರಿಗೆ ಕೊವಿಡ್ ಸೋಂಕು ತಗುಲಿದೆ. 2170 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದು, 1000 ಕೇಸ್ ಸಕ್ರಿಯವಾಗಿದೆ. 22 ಜನರು ಮೃತಪಟ್ಟಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+