ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ವಿಶ್ವಾಸಮತ ಗೆದ್ದ ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೆನ್

|
Google Oneindia Kannada News

ಜಾರ್ಖಂಡ್‌, ಸೆಪ್ಟೆಂಬರ್‌ 05: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯವರು ಚುನಾವಣೆಯಲ್ಲಿ ಗೆಲ್ಲುವ ಗುರಿಯೊಂದಿಗೆ ಅಂತರ್ಯುದ್ಧ ಮತ್ತು ಗಲಭೆಗಳ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಿಧಾನಸಭೆಯಲ್ಲಿ ಸೊರೆನ್ ಅವರು, ನಮ್ಮ ಸರ್ಕಾರದ ಕಾರ್ಯನಿರ್ವಹಣೆಗೆ ತೀವ್ರ ಅಡೆತಡೆಗಳನ್ನು ಒಡ್ಡಲಾಗುತ್ತಿದೆ. ನಮ್ಮ ಮೂವರು ಶಾಸಕರು ಬಂಗಾಳದಲ್ಲಿದ್ದಾರೆ. ಬಂಗಾಳದಲ್ಲಿ ನಮ್ಮ ಶಾಸಕರ ಖರೀದಿ ಮಾಡುವ ಆತಂಕವಿದೆ. ಈ ಬಗ್ಗೆ ತನಿಖೆ ನಡೆಸಲು ಆ ರಾಜ್ಯಗಳಿಗೆ ನಮ್ಮ ಪೊಲೀಸರು ಹೋಗುವುದಕ್ಕೆ ಬಿಜೆಪಿ ಸಹಕರಿಸುತ್ತಿಲ್ಲ ಎಂದರು.

ದಿಯೋಘರ್ ವಿಮಾನ ನಿಲ್ದಾಣಕ್ಕೆ ಅತಿಕ್ರಮ ಪ್ರವೇಶ: ನಿಶಿಕಾಂತ್ ದುಬೆ, ಮನೋಜ್ ತಿವಾರಿ ವಿರುದ್ಧ ಎಫ್‌ಐಆರ್ದಿಯೋಘರ್ ವಿಮಾನ ನಿಲ್ದಾಣಕ್ಕೆ ಅತಿಕ್ರಮ ಪ್ರವೇಶ: ನಿಶಿಕಾಂತ್ ದುಬೆ, ಮನೋಜ್ ತಿವಾರಿ ವಿರುದ್ಧ ಎಫ್‌ಐಆರ್

ಜಾರ್ಖಂಡ್‌ ರಾಜ್ಯದಲ್ಲಿ ಯುನೈಟೆಡ್‌ ಪ್ರೊಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಸರ್ಕಾರ ಇರುವವರೆಗೂ ಬಿಜೆಪಿಯ ಷಡ್ಯಂತ್ರ ಯಶಸ್ವಿಯಾಗುವುದಿಲ್ಲ. ಬಿಜೆಪಿ ಎರಡು ರಾಜ್ಯಗಳು ಪರಸ್ಪರ ಕಿತ್ತಾಡಿಕೊಳ್ಳುವ ವಾತಾವರಣವನ್ನು ಸೃಷ್ಟಿಸಲು ಬಯಸುತ್ತಾರೆ. ಚುನಾವಣೆಗಳನ್ನು ಗೆಲ್ಲಲು ಗಲಭೆಗಳನ್ನು ಮಾಡಲು ಬಯಸುತ್ತಾರೆ. ಇಲ್ಲಿ ಯುಪಿಎ ಸರ್ಕಾರ ಇರುವವರೆಗೂ ಅಂತಹ ಕುತಂತ್ರಗಳು ಉಳಿಯುವುದಿಲ್ಲ. ಅದಕ್ಕೆ ತಕ್ಕ ರಾಜಕೀಯ ಉತ್ತರ ಸಿಗಲಿದೆ ಎಂದು ಜಾರ್ಖಂಡ್ ಸಿಎಂ ಹೇಮಂತ್‌ ಸೊರೇನ್‌ ಹೇಳಿದರು.

ವಿಶ್ವಾಸಮತವನ್ನು ಸಾಬೀತುಪಡಿಸುವ ಒಂದು ದಿನದ ಮುನ್ನ ಜಾರ್ಖಂಡ್‌ ಸಿಎಂ ಬೆಂಬಲಿಗರು ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ದಿನಗಳನ್ನು ಕಳೆದ ನಂತರ ರಾಂಚಿಗೆ ಮರಳಿದರು. ರಾಯಪುರಕ್ಕೆ ಹೋದವರಲ್ಲಿ ನಾಲ್ವರು ಸಚಿವರು ಮತ್ತು ಜೆಎಂಎಂನ 18 ಶಾಸಕರು ಸೇರಿದಂತೆ ಕಾಂಗ್ರೆಸ್‌ನ 13 ಮಂದಿ ಸೇರಿದ್ದರು. ಸಿಎಂ ಸೋರೆನ್ ನಿನ್ನೆ ರಾತ್ರಿ ಶಾಸಕರನ್ನು ಸರ್ಕ್ಯೂಟ್ ಹೌಸ್‌ನಲ್ಲಿ ಭೇಟಿಯಾಗಿ ಅಲ್ಲಿಯೇ ಅವರು ರಾತ್ರಿಯನ್ನು ಕಳೆದಿದ್ದರು.

ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟು

ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟು

ಗಮನಾರ್ಹವೆಂದರೆ, 2021ರಲ್ಲಿ ಗಣಿಗಾರಿಕೆ ಖಾತೆಯನ್ನು ಹೊಂದಿರುವಾಗ ಸೊರೆನ್ ಅವರು ಗಣಿಗಾರಿಕೆ ಗುತ್ತಿಗೆಯನ್ನು ಸ್ವತಃ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸೊರೆನ್ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸುವಂತೆ ಬಿಜೆಪಿಯು ಮನವಿ ಮಾಡಿತ್ತು. ಬಳಿಕ ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟು ಹೊರಹೊಮ್ಮಿತು.

ಲ್ಯಾಪ್‌ಟಾಪ್, ಸಿಸಿಟಿವಿ ದೃಶ್ಯಾವಳಿಗಳೊಂದಿಗೆ ಸೋನಾಲಿ ಫೋಗಟ್ ಉದ್ಯೋಗಿ ನಾಪತ್ತೆಲ್ಯಾಪ್‌ಟಾಪ್, ಸಿಸಿಟಿವಿ ದೃಶ್ಯಾವಳಿಗಳೊಂದಿಗೆ ಸೋನಾಲಿ ಫೋಗಟ್ ಉದ್ಯೋಗಿ ನಾಪತ್ತೆ

ಚುನಾವಣಾ ಆಯೋಗದಿಂದ ಸಿಎಂಗೆ ನೋಟಿಸ್‌

ಚುನಾವಣಾ ಆಯೋಗದಿಂದ ಸಿಎಂಗೆ ನೋಟಿಸ್‌

ಈ ವರ್ಷದ ಫೆಬ್ರವರಿಯಲ್ಲಿ ಬಿಜೆಪಿಯು ರಾಜ್ಯಪಾಲ ರಮೇಶ್ ಬೈಸ್ ಅವರಿಗೆ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 9(ಎ) ಅಡಿಯಲ್ಲಿ ಸೊರೆನ್ ಅವರನ್ನು ಸದನದಿಂದ ಅನರ್ಹಗೊಳಿಸುವಂತೆ ಕೋರಿ ಮನವಿ ಪತ್ರವನ್ನು ಸಲ್ಲಿಸಿತ್ತು. ರಾಜ್ಯಪಾಲರು ಬಿಜೆಪಿ ದೂರನ್ನು ಚುನಾವಣಾ ಆಯೋಗಕ್ಕೆ ರವಾನಿಸಿದ್ದರು. ಮೇ ತಿಂಗಳಲ್ಲಿ ಚುನಾವಣಾ ಸಮಿತಿಯು ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕರೂ ಆದ ಹೇಮಂತ್‌ ಸೊರೇನ್‌ಗೆ ನೋಟಿಸ್ ನೀಡಿತ್ತು.

ಜೆಎಂಎಂನ 18, ಕಾಂಗ್ರೆಸ್‌ನ 13 ಶಾಸಕರು ಛತ್ತಿಸ್‌ಗಡಕ್ಕೆ ರವಾನೆ

ಜೆಎಂಎಂನ 18, ಕಾಂಗ್ರೆಸ್‌ನ 13 ಶಾಸಕರು ಛತ್ತಿಸ್‌ಗಡಕ್ಕೆ ರವಾನೆ

ಸೋಮವಾರ ವಿಶೇಷ ಅಸೆಂಬ್ಲಿ ಅಧಿವೇಶನ ನಡೆಸುವ ಪ್ರಸ್ತಾವನೆಯನ್ನು ಜಾರ್ಖಂಡ್ ಕ್ಯಾಬಿನೆಟ್ ಇತ್ತೀಚೆಗೆ ಅಂಗೀಕರಿಸಿದ ನಂತರ ಒಂದು ದಿನದ ಅಧಿವೇಶನವನ್ನು ಕರೆಯಲಾಗಿತ್ತು. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಅದರ ಮಿತ್ರಪಕ್ಷಗಳ ಶಾಸಕರ ಆಪರೇಷನ್ ಭಯದ ನಡುವೆ ಕಳೆದ ವಾರ ಕಾಂಗ್ರೆಸ್ ಆಡಳಿತವಿರುವ ಛತ್ತೀಸ್‌ಗಢದ ರೆಸಾರ್ಟ್‌ಗೆ ತಮ್ಮ ಶಾಸಕರನ್ನು ಸ್ಥಳಾಂತರಿಸಲಾಗಿತ್ತು. ಈ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳಲು ರಾಯಪುರ ರೆಸಾರ್ಟ್‌ನಲ್ಲಿರುವ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಶಾಸಕರು ಭಾನುವಾರ ರಾಂಚಿಗೆ ಮರಳಿದರು. ರಾಯಪುರಕ್ಕೆ ಹೋದವರಲ್ಲಿ ನಾಲ್ವರು ಸಚಿವರು ಮತ್ತು ಜೆಎಂಎಂನ 18 ಶಾಸಕರು ಸೇರಿದಂತೆ ಕಾಂಗ್ರೆಸ್‌ನ 13 ಮಂದಿ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಯ್‌ಪುರದಲ್ಲಿ 31 ಶಾಸಕರು ಮತ್ತು ಸಚಿವರು ಠೀಕಾಣಿ

ರಾಯ್‌ಪುರದಲ್ಲಿ 31 ಶಾಸಕರು ಮತ್ತು ಸಚಿವರು ಠೀಕಾಣಿ

ಆಪರೇಷನ್‌ ಕಮಲದ ಭಯದಲ್ಲಿ ಜಾರ್ಖಂಡ್‌ನಲ್ಲಿ ಆಡಳಿತಾರೂಢ ಒಕ್ಕೂಟದ ಸುಮಾರು 31 ಶಾಸಕರು ಮತ್ತು ಸಚಿವರು ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿದ್ದಾಗ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಆಡಳಿತ ಮೈತ್ರಿಕೂಟ ಸನ್ನದ್ಧವಾಗಿದೆ ಎಂದು ಸೋರೆನ್ ರಾಂಚಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.

English summary
Jharkhand Chief Minister Hemant Soren won the trust vote in the state assembly on Monday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X